22 Carat Gold Price: ದೇಶದಲ್ಲಿ ಚಿನ್ನದ ಬೆಲೆ (Gold Rate) ಪ್ರತಿನಿತ್ಯ ಏರಿಕೆ ಆಗುತ್ತಿದ್ದುಇದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ಹೌದು ದೇಶದಲ್ಲಿ ಕಳೆದ ಎರಡು ತಿಂಗಳಿಂದ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದ್ದು ಗ್ರಾಹಕರು ಚಿನ್ನ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಈಗ ಮತ್ತೆ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಹೌದು ಚಿನ್ನದ ಬೆಲೆಯಲ್ಲಿ ಇಂದು ಕೂಡ ಏರಿಕೆ ಕಂಡುಬಂದಿದ್ದು ಇದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ಹಾಗಾದರೆ ದೇಶದಲ್ಲಿ ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಮತ್ತು ಇಂದಿನ ಚಿನ್ನದ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವೀಗ ತಿಳಿಯೋಣ.
ಇಂದು 55 ರೂ ಏರಿಕೆಯಾದ 22 ಕ್ಯಾರಟ್ ಚಿನ್ನದ ಬೆಲೆ
ಹೌದು, ದೇಶದಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ ಇಂದು 55 ರೂ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 55 ರೂ ಏರಿಕೆ ಕಂಡುಬಂದ ಕಾರಣ ಇಂದು ದೇಶದಲ್ಲಿ 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 8,065 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 550 ರೂ ಏರಿಕೆ ಕಂಡುಬಂದ ಕಾರಣ ಇಂದು ದೇಶದಲ್ಲಿ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 80,650 ರೂಪಾಯಿಗೆ ಬಂದು ತಲುಪಿದೆ. ಇಂದು ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರಟ್ ನ 100 ಗ್ರಾಂ ಚಿನ್ನದ ಬೆಲೆ 8,06,500 ರೂಪಾಯಿ ಆಗಿದೆ ಮತ್ತು 22 ಕ್ಯಾರಟ್ ನ 8 ಗ್ರಾಂ ಚಿನ್ನದ ಬೆಲೆ 64,520 ರೂಪಾಯಿ ಆಗಿದೆ.

ಇಂದು 60 ರೂಪಾಯಿ ಏರಿಕೆ ಕಂಡ 24 ಕ್ಯಾರಟ್ ಚಿನ್ನದ ಬೆಲೆ
ಹೌದು, ಇಂದು ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸುಮಾರು 60 ರೂಪಾಯಿ ಏರಿಕೆ ಕಂಡುಬಂದಿದೆ. ಇಂದು ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರಟ್ ನ 1 ಒಂದು ಗ್ರಾಂ ಚಿನ್ನದ ಬೆಲೆ 8,798 ರೂಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಏರಿಕೆ ಕಂಡುಬಂದ ಕಾರಣ ಇಂದು ಮಾರುಕಟ್ಟೆಯಲ್ಲಿ 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 600 ರೂಪಾಯಿ ಏರಿಕೆ ಕಂಡುಬಂದಿದೆ ಎಂದು ಹೇಳಬಹುದು. ದೇಶದಲ್ಲಿ ಇಂದು 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 87,980 ರೂಪಾಯಿ ಆಗಿದೆ ಮತ್ತು 24 ಕ್ಯಾರಟ್ ನ 100 ಗ್ರಾಂ ಚಿನ್ನದ ಬೆಲೆ 8,79,800 ರೂಪಾಯಿ ಆಗಿದೆ.ಅದೇ ರೀತಿಯಲ್ಲಿ ಇಂದು 24 ಕ್ಯಾರಟ್ ನ 8 ಗ್ರಾಂ ಚಿನ್ನದ ಬೆಲೆ 65,990 ರೂಪಾಯಿ ಆಗಿದೆ.
ಎರಡು ದಿನದಲ್ಲಿ 130 ರೂ ಏರಿಕೆ ಕಂಡ ಚಿನ್ನದ ಬೆಲೆ
ದೇಶದಲ್ಲಿ ಕಳೆದ ಎರಡು ದಿನದಲ್ಲಿ ಭಾರತದ ಚಿನ್ನ, ಅಂದರೆ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸುಮಾರು 130 ರೂಪಾಯಿ ಏರಿಕೆ ಕಂಡುಬಂದಿದೆ. ಮಾರುಕಟ್ಟೆ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಕಂಡುಬರಲಿದೆ ಮತ್ತು ಮಾರ್ಚ್ ತಿಂಗಳ ಅಂತ್ಯದಲ್ಲಿ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ ಸುಮಾರು 8,500 ರೂಪಾಯಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.