RTO Karnataka: ಈಗಿನ ಕಾಲದಲ್ಲಿ ವಾಹನಗಳನ್ನ ವ್ಯಾವಹಾರಿಕವಾಗಿ ಬಳಕೆ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಹೌದು ಯಲ್ಲೋ ಬೋರ್ಡ್ ವಾಹನಗಳ ಸಂಖ್ಯೆ ರಾಜ್ಯ ಮತ್ತು ದೇಶದಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದು. ಬಾಡಿಗೆ ವ್ಯವಹಾರ ಮತ್ತು ಇತರೆ ವ್ಯವಹಾರಗಳಿಗೆ ಈ ಯಲ್ಲೋ ಬೋರ್ಡ್ ವಹಾಗಳನ್ನು ಬಳಕೆ ಮಾಡಲಾಗುತ್ತದೆ.
ಅದೇ ರೀತಿಯಲ್ಲಿ ಯಲ್ಲೋ ಬೋರ್ಡ್ ವಾಹನಗಳ (Yellow Board Vehicles) ಮಾಲೀಕರು ಕೆಲವು ಸರ್ಕಾರೀ ನಿಯಮಗಳನ್ನು ಕೂಡ ಕಡ್ಡಾಯವಾಗಿ ಪಾಲನೆ ಮಾಡಬೇಕು. ಸದ್ಯ ಯಲ್ಲೋ ಬೋರ್ಡ್ ವಾಹನಗಳಿಗೆ ಸಂಬಂಧಿಸಿದಂತೆ ಈಗ ನಿಯಮದಲ್ಲಿ ಸಡಿಲಿಕೆ ಮಾಡಿದ್ದು ಇದು ಯಲ್ಲೋ ಬೋರ್ಡ್ ವಾಹನಗಳ ಮಾಲೀಕರ ಸಂತಸಕ್ಕೆ ಕಾರಣವಾಗಿದೆ.

ಯಲ್ಲೋ ಬೋರ್ಡ್ ವಾಹನ ಇದ್ದವರಿಗೆ ಹೊಸ ರೂಲ್ಸ್
ಸದ್ಯ ರಾಜ್ಯ ಸಾರಿಗೆ ಇಲಾಖೆ ಯಲ್ಲೋ ಬೋರ್ಡ್ ವಾಹನ ಇದ್ದವರಿಗೆ ಹೊಸ ನಿಯಮ ಜಾರಿಗೆ ತಂದಿದೆ. ಇನ್ನುಮುಂದೆ ಯಲ್ಲೋ ಬೋರ್ಡ್ ವಾಹನ ಚಲಾಯಿಸುವವರು ಈ ಕೆಲಸ ಕಡ್ಡಾಯವಾಗಿ ಮಾಡಬೇಕು ಎಂದು RTO ಈಗ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ನಿಯಮದಲ್ಲಿ ಈಗ ಸಡಿಲಿಕೆ ಮಾಡಲಾಗಿದ್ದು ಇನ್ನುಮುಂದೆ ಬೇರೆ ರಾಜ್ಯಕ್ಕೆ ಹೋಗುವ ಯಲ್ಲೋ ಬೋರ್ಡ್ ವಾಹನಗಳ ಮಾಲೀಕರಿಗೆ ಸಂತದ ಸುದ್ದಿ ನೀಡಿದೆ RTO. ಈ ಹಿಂದೆ ಬೇರೆ ರಾಜ್ಯಕ್ಕೆ ಹೋಗುವ ಮುನ್ನ RTO ಕಚೇರಿಗೆ ಬಂದು ಸ್ಪೆಷಲ್ ಪೇರ್ಮಿಷನ್ ಪಡೆದುಕೊಳ್ಳಬೇಕಾಗಿತ್ತು. ಸದ್ಯ ಈಗ ಆ ನಿಯಮದಲ್ಲಿ ಬದಲಾವಣೆ ಜಾರಿಗೆ ತರಲಾಗಿದೆ.
ಯಲ್ಲೋ ಬೋರ್ಡ್ ವಾಹನಗಳ ಮಾಲೀಕರಿಗೆ ಗುಡ್ ನ್ಯೂಸ್
ಹೌದು, ಯಲ್ಲೋ ಬೋರ್ಡ್ ವಾಹನಗಳು ಬೇರೆ ರಾಜ್ಯಗಳಿಗೆ ಹೋಗಬೇಕಾದರೆ ಅವರಿಗೆ ಸ್ಪೆಷಲ್ ಪರ್ಮಿಷನ್ ಬೇಕಾಗುತ್ತದೆ. ಸದ್ಯ ಈ ಪರ್ಮಿಷನ್ ಗೆ ಸಂಬಂಧಿಸಿದಂತೆ RTO ನಿಯಮದಲ್ಲಿ ಬದಲಾವಣೆ ಮಾಡಿದೆ. ಪ್ರತಿನಿತ್ಯ ಸಾಕಷ್ಟು ಯಲ್ಲೋ ಬೋರ್ಡ್ ವಾಹನಗಳು ಬೇರೆ ರಾಜ್ಯಕ್ಕೆ ಸಂಚಾರ ಮಾಡುತ್ತೆ ಮತ್ತು ಸಂಚಾರ ಆರಂಭಿಸುವ ಮುನ್ನ ವಾಹನಗಳ ಮೂಲ ದಾಖಲಾತಿಯೊಂದಿಗೆ ಬೆಂಗಳೂರಿನ ಮೂಲ ಕಚೇರಿಗೆ ಬಂದು ಸ್ಪೆಷಲ್ ಪರ್ಮಿಷನ್ ಪಡೆದುಕೊಳ್ಳಬೇಕಾಗಿತ್ತು. ಈ ಈ ಸ್ಪೆಷಲ್ ಪರ್ಮಿಷನ್ ಪಡೆದುಕೊಳ್ಳಲು ಎರಡು ಅಥವಾ ಮೂರೂ ದಿನಗಳ ಸಮಯ ಕೂಡ ಬೇಕಾಗಿತ್ತು.
ಯಲ್ಲೋ ಬೋರ್ಡ್ ವಾಹನಗಳ ಸ್ಪೆಷಲ್ ಪರ್ಮಿಷನ್ ನಲ್ಲಿ ಈಗ ಸಡಿಲಿಕೆ
ಯಾವುದೇ ಯಲ್ಲೋ ಬೋರ್ಡ್ ಮಾಲೀಕರು ಬೇರೆ ರಾಜ್ಯಕ್ಕೆ ಹೋಗಬೇಕು ಅಂದರೆ ಅವರು RTO ದಿಂದ ಸ್ಪೆಷಲ್ ಪರ್ಮಿಷನ್ ಪಡೆದುಕೊಳ್ಳಬೇಕು. ಮತ್ತು ಬೆಂಗಳೂರಿಗೆ ಬಂದು ಎರಡು ದಿನ ಕಾಯಬೇಕಾಗಿತ್ತು ಸದ್ಯ ಈ ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತಿದ್ದು ಇನ್ನುಮುಂದೆ ಕೆಲವೇ ನಿಮಿಷದಲ್ಲಿ RTO ದಿಂದ ಪರ್ಮಿಷನ್ ಪಡೆದುಕೊಳ್ಳಬಹುದಾಗಿದೆ.
ಇನ್ನುಮುಂದೆ ಯಲ್ಲೋ ಬೋರ್ಡ್ ವಾಹನಗಳ ಮಾಲೀಕರು ಎರಡು ಮೂರೂ ದಿನ ಕಾಯುವ ಅವಶ್ಯಕತೆ ಇರುವುದಿಲ್ಲ. ಯಲ್ಲೋ ಬೋರ್ಡ್ ವಾಹನಗಳ ಮಾಲೀಕರು ವಾಹನ ಚಾಲಕರ ಮನವಿಗೆ ಸ್ಪಂದಿಸಿರುವ RTO ಈಗ ನಿಯಮದಲ್ಲಿ ಸಡಿಲಿಕೆ ಮಾಡಿದೆ. ಇನ್ನುಮುಂದೆ ಬೇರೆ ರಾಜ್ಯಕ್ಕೆ ಹೋಗುವ ಯಲ್ಲೋ ಬೋರ್ಡ್ ವಾಹನಗಳ ಮಾಲೀಕರು ಕೆಲವೇ ನಿಮಿಷದಲ್ಲಿ RTO ಮೂಲಕ ಸ್ಪೆಷಲ್ ಪರ್ಮಿಟ್ ಪಡೆದುಕೊಳ್ಳಬಹುದು.