SBI New Rules Bank Accounts: ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ಈಗ ತನ್ನ ಗ್ರಾಹಕರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಜಾರಿಗೆ ತಂದಿರುವ ಈ ಹೊಸ ನಿಯಮವನ್ನು ಗ್ರಾಹಕರು ಪಾಲನೆ ಮಾಡದೆ ಇದ್ದರೆ ಅವರ ಬ್ಯಾಂಕ್ ಖಾತೆಯನ್ನು ಮುಚ್ಚಲಾಗುತ್ತದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಈ ಮೂಲಕ ತನ್ನ ಗ್ರಾಹಕರಿಗೆ ಎಚ್ಚರಿಕೆ ಕೂಡ ನೀಡಿದೆ. ಕಾಲಕಾಲಕ್ಕೆ ತಂತ್ರಜ್ಞಾನ ಬದಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ಬದಲಾದ ನಿಯಮಗಳಿಗೆ ನಾವು ಬದಲಾಗಬೇಕಾಗುತ್ತದೆ. ಸದ್ಯ ಭಾರತೀಯ ಸ್ಟೇಟ್ ಬ್ಯಾಂಕ್ ಈಗ ಹೊಸ ನಿಯಮ ಜಾರಿಗೆ ತಂದಿದೆ ಮತ್ತು ಹೊಸ ನಿಯಮದ ಪ್ರಕಾರ ಇನ್ನುಮುಂದೆ ಗ್ರಾಹಕರು ಈ ಕೆಲಸವನ್ನು ಮಾಡದೆ ಇದ್ದರೆ ಅವರ ಬ್ಯಾಂಕ್ ಖಾತೆ ಕ್ಲೋಸ್ ಮಾಡಲಾಗುತ್ತೆ.
ದೇಶದಲ್ಲಿ ಹೊಸ ನಿಯಮ ಜಾರಿಗೆ ತಂದ SBI
* ಭಾರತೀಯ ಸ್ಟೇಟ್ ಬ್ಯಾಂಕ್ ಈಗ ಗ್ರಾಹಕರಿಗೆ ಮಿನಿಮಮ್ ಬ್ಯಾಲೆನ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹೊರಡಿಸಿದೆ. ಇನ್ನು ಹೊಸ ಆದೇಶದ ಪ್ರಕಾರ ಇನ್ನುಮುಂದೆ ಗ್ರಾಹಕರು ತಮ್ಮ ಖಾತೆಯಲ್ಲಿ 500 ರೂ ಇಡಬೇಕು ಮತ್ತು 500 ರೂಪಾಯಿಗಿಂತ ಕಡಿಮೆ ಮೊತ್ತವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟರೆ ಅವರ ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ
* ಇನ್ನು ಒಂದು ಬ್ಯಾಂಕ್ ಖಾತೆ ಕಳೆದ 12 ತಿಂಗಳಿಂದ ಯಾವುದೇ ವಹಿವಾಟು ಮಾಡದೆ ಇದ್ದರೆ ಅಂತಹ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯ ಬ್ಯಾಂಕ್ ಖಾತೆ ಎಂದು ಪರಿಗಣನೆಗೆ ತಗೆದುಕೊಳ್ಳಲಾಗುತ್ತದೆ.
* ಒಬ್ಬ ವ್ಯಕ್ತಿ ತನ್ನ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಮಾಡಿದರೆ ಆತನ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಲಾಗುತ್ತದೆ.
*ಒಬ್ಬ ವ್ಯಕ್ತಿ ಎರಡು ವರ್ಷಗಳ ಯಾವುದೇ ಬ್ಯಾಂಕ್ ವ್ಯವಹಾರ ಮಾಡದೆ ಇದ್ದರೆ ಅಂತಹ ಬ್ಯಾಂಕ್ ಖಾತೆ ಕೂಡ ಕ್ಲೋಸ್ ಮಾಡಲಾಗುತ್ತದೆ.
* ಒಮ್ಮೆ ಖಾತೆ ಕ್ಲೋಸ್ ಆದರೆ ಮತ್ತೆ ಆ ಖಾತೆ ಮರುಸ್ಥಾಪನೆ ಮಾಡಲು KYC ಜೊತೆಗೆ ದಂಡವನ್ನು ಕೂಡ ಕೊಡಬೇಕಾಗುತ್ತದೆ.
* ಇನ್ನು ಒಬ್ಬ ವ್ಯಕ್ತಿ ತನ್ನ ಖಾತೆಗೆ ಇನ್ನು ಕೂಡ KYC ನವೀಕರಣ ಮಾಡದೆ ಇದ್ದರೆ ಆತನ ಖಾತೆಯನ್ನು ಮುಚ್ಚಲಾಗುತ್ತದೆ.

ಇನ್ನುಮುಂದೆ SBI ಬ್ಯಾಂಕ್ ಖಾತೆ ತೆರೆಯಲು ಹೊಸ ರೂಲ್ಸ್
ಭಾರತೀಯ ಸ್ಟೇಟ್ ಬ್ಯಾಂಕಿನ ಹೊಸ ನಿಯಮದ ಪ್ರಕಾರ ಇನ್ನುಮುಂದೆ ಬ್ಯಾಂಕ್ ಖಾತೆ ತೆರೆಯುವ ಸಮಯದಲ್ಲಿ ಕಡ್ಡಾಯವಾಗಿ ಮಿನಿಮಮ್ ಬ್ಯಾಲೆನ್ಸ್ ಇಡಲೇಬೇಕು, ಇಲ್ಲವಾದರೆ ಆತ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ. KYC ಅಪ್ಡೇಟ್ ಮತ್ತು ಆತ ತನ್ನ ಪಾನ್ ಕಾರ್ಡಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕೂಡ ಕಡ್ಡಾಯವಾಗಿದೆ. ಮುಂದಿನ ದಿನಗಳಲ್ಲಿ ಆತ ಬ್ಯಾಂಕ್ ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಡದೆ ವ್ಯವಹಾರ ಮಾಡದೆ ಇದ್ದರೆ ಅಥವಾ ಬ್ಯಾಂಕ್ ಖಾತೆ ಕ್ಲೋಸ್ ಮಾಡುವ ಅಧಿಕಾರವನ್ನು ಕೂಡ ಬ್ಯಾಂಕ್ ಹೊಂದಿರುತ್ತದೆ.
SBI ATM ನಿಯಮದಲ್ಲಿ ಕೂಡ ಬದಲಾವಣೆ
ಭಾರತೀಯ ಸ್ಟೇಟ್ ಬ್ಯಾಂಕ್ ಈಗ ATM ನಿಯಮದಲ್ಲಿ ಕೂಡ ಬದಲಾವಣೆ ಮಾಡಿದರೆ. ಇನ್ನು ಬದಲಾದ ನಿಯಮದ ಪ್ರಕಾರ ಇನ್ನುಮುಂದೆ ಗ್ರಾಹಕರು ತನ್ನದೇ ಬ್ಯಾಂಕಿನ ATM ನಲ್ಲಿ ತಿಂಗಳಿಗೆ ಮೂರೂ ಬಾರಿ ಮಾತ್ರ ಉಚಿತವಾಗಿ ವಹಿವಾಟು ಮಾಡಬಹುದು. ನಾಲ್ಕನೇ ವಹಿವಾಟಿಯಿಂದ ಆತ ಪ್ರತಿ ವಹಿವಾಟಿಗೆ 25 ರೂ ಶುಲ್ಕ ಪಾವತಿ ಮಾಡಬೇಕು. ಅದೇ ರೀತಿಯಲ್ಲಿ ATM ಮೂಲಕ ಒಬ್ಬ ವ್ಯಕ್ತಿ ದಿನಕ್ಕೆ 50000 ರೂ ತನಕ ಮಾತ್ರ ಹಣವನ್ನು ಹಿಂಪಡೆಯಬಹುದು.
ಇಂದಿನಿಂದ ಈ ಹೊಸ ನಿಯಮ ಜಾರಿ
ಭಾರತೀಯ ಸ್ಟೇಟ್ ಬ್ಯಾಂಕ್ ಹೊರಡಿಸಿರುವ ಆದೇಶದ ಪ್ರಕಾರ ಈ ಹೊಸ ನಿಯಮ ದೇಶದಲ್ಲಿ ಇಂದಿನಿಂದಲೇ ಜಾರಿಗೆ ಬರಲಿದೆ. SBI ನಲ್ಲಿ ಖಾತೆ ಹೊಂದಿರುವ ಎಲ್ಲರೂ ಕೂಡ ಬದಲಾದ ಈ ನಿಯಮದ ಬಾಗ್ಗೆ ತಿಳಿದುಕೊಳ್ಳುವುದು ಅತೀ ಅವಶ್ಯಕ ಕೂಡ ಆಗಿದೆ.