EPFO Withdrawal: ಇನ್ಮೇಲೆ PF ಹಣ ATM ಮೂಲಕವೇ ತಗೆಯಬಹುದು, PF ಖಾತೆ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್

EPF Money Withdraw Through ATM: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನೌಕರರು PF ಹಣವನ್ನು ಹಿಂಪಡೆಯಲು ಬಹಳ ಕಷ್ಟಪಡುತ್ತಿರುವುದು ಈಗ ಸರ್ಕಾರದ ಗಮನಕ್ಕೆ ಬಂದಿದೆ. ಹೌದು ಸಾಕಷ್ಟು ನೌಕರರು ತಮ್ಮ PF ಹಣವನ್ನು ಹಿಂಪಡೆಯಲು ಪ್ರತಿನಿತ್ಯ ಬ್ಯಾಂಕುಗಳಿಗೆ ಅಲೆದಾಡುತ್ತಿರುವುದು ಈಗ ಸರ್ಕಾರದ ಗಮನಕ್ಕೆ ಬಂದಿದೆ. ನೌಕರರ ಈ ಸಮಸ್ಯೆ ಅರಿತ ಭಾರತ ಸರ್ಕಾರ ಈಗ PF ಹಣವನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತರುವುದರ ಮೂಲಕ ಎಲ್ಲಾ ನೌಕರರಿಗೆ ಗುಡ್ ನ್ಯೂಸ್ ನೀಡಿದೆ.

WhatsApp Group Join Now
Telegram Group Join Now

ನೌಕರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ಹೌದು ಭಾರತ ಸರ್ಕಾರ ಈಗ ಎಲ್ಲಾ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ಇನ್ನುಮುಂದೆ ನೌಕರರು ತಮ್ಮ PF ಹಣವನ್ನು ATM ಮೂಲಕವೇ ಹಿಂಪಡೆಯಬಹುದಾಗಿದೆ. ಈ ಮೂಲಕ ದೇಶದ ಎಲ್ಲಾ ನೌಕರರು ಇನ್ನುಮುಂದೆ ತಮ್ಮ PF ಹಣವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಹಿಂಪಡೆಯಬಹುದು. ಹೌದು ಈಗ PF ಹಣವನ್ನು ATM ಸೇರಿದಂತೆ ಮೊಬೈಲ್ ಅಪ್ಲಿಕೇಶನ್ ಮೂಲಕ ಕೂಡ ಹಿಂಪಡೆಯಬಹುದಾಗಿದೆ.

EPFO money withdrawal
Govt change the EPFO money withdrawal method

ಫೋನ್ ಪೆ, ಗೂಗಲ್ ಪೆ ಪೆಟಿಎಂ ಮೂಲಕ ಕೂಡ EPF ಹಣ ಹಿಂಪಡೆಯಬಹುದು
ಹೌದು, ಹೊಸ ನಿಯಮದ ಪ್ರಕಾರ ಇನ್ನುಮುಂದೆ ನೌಕರರು ತಮ್ಮ EPF ಹಣವನ್ನು ಫೋನ್ ಪೆ, ಗೂಗಲ್ ಪೆ ಮತ್ತು ಪೆಟಿಎಂ ಮೂಲಕ ಕೂಡ ಹಿಂಪಡೆಯಬಹುದು. ಇನ್ನು ಈ ಹೊಸ ಸೇವೆಯನ್ನು ಆದಷ್ಟು ಬೇಗ ಜಾರಿಗೆ ತರಲು ನೌಕರರ ಭವಿಷ್ಯ ನಿಧಿ ಸಂಸ್ಥೆ ರಾಷ್ಟ್ರೀಯ ಪಾವತಿ ನಿಮಗಾದ ಜೊತೆ ಚರ್ಚೆ ಮಾಡಿದೆ ಎಂದು ವರದಿಯಿಂದ ತಿಳಿದುಬಂದಿದೆ. ಇನ್ನು ಈ ಹೊಸ ಸೇವೆ ಇದೆ ಜೂನ್ ತಿಂಗಳ ಒಳಗಾಗಿ ದೇಶದಲ್ಲಿ ಜಾರಿಗೆ ಬರುವ ಸಾಧ್ಯತೆ ಕೂಡ ಇದೆ.

ಈ ಹಿಂದೆ 23 ದಿನ ಕಾಯಬೇಕಾಗಿತ್ತು
ಹೌದು, ಈ ಹಿಂದೆ ನೌಕರರು ತಮ್ಮ EPF ಹಣವನ್ನು ಹಿಂಪಡೆಯಲು ಸುಮಾರು 23 ದಿನಗಳು ಕಾಯಬೇಕಾಗಿತ್ತು ಮತ್ತು ಸಾಕಷ್ಟು ಬಾರಿ ಬ್ಯಾಂಕುಗಳಿಗೆ ಅಲೆದಾಡಬೇಕಾಗಿತ್ತು. ಆದರೆ ಇನ್ನುಮುಂದೆ ನೌಕರರು ತ್ವರಿತವಾಗಿ ಕೆಲವೇ ನಿಮಿಷದಲ್ಲಿ ತಮ್ಮ EPF ಹಣವನ್ನು ಸುಲಭವಾಗಿ ತಮ್ಮ ಉಳಿತಾಯ ಖಾತೆಯಿಂದ ATM ಮೂಲಕವೇ ಹಿಂಪಡೆಯಬಹುದು. ಇನ್ನು ದೇಶದಲ್ಲಿ EPFO 2.0 ಜಾರಿಗೆ ಬಂದನಂತರ ಉಳಿತಾಯ ಖಾತೆಯ ರೀತಿಯಲ್ಲಿಯೇ EPF ಖಾತೆಯಿಂದ ಕೂಡ ಹಣ ಹಿಂಪಡೆಯಬಹುದು.

Leave a Comment