Gruha Lakshmi Pending Money: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಕಳೆದ ಎರಡು ತಿಂಗಳಿಂದ ಯಾವುದೇ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಹೌದು ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯ ಅರ್ಹ ಮಹಿಳೆಯರು ಪ್ರತಿ ತಿಂಗಳು 2000 ರೂ ಪಡೆದುಕೊಳ್ಳೂತ್ತಿದ್ದರು, ಆದರೆ ಕಳೆದ ಎರಡು ತಿಂಗಳಿಂದ ರಾಜ್ಯದ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ. ಈ ನಡುವೆ ಕರ್ನಾಟಕ ರಾಜ್ಯ ಸರ್ಕಾರ (Karnataka State Government) ಹೊಸ ಆದೇಶವನ್ನು ಹೊರಡಿಸಿದೆ. ಹೌದು, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಈಗ ಕರ್ನಾಟಕ ರಾಜ್ಯ ಇನ್ನೊಂದು ಆದೇಶ ಹೊರಡಿಸಿದೆ ಮತ್ತು ಮಹಿಳೆಯರು ಈ ಕೆಲಸ ಬೇಗ ಮುಗಿಸಿಕೊಳ್ಳುವಂತೆ ಸೂಚನೆ ಕೂಡ ನೀಡಿದೆ.
ಹೊಸ ಆದೇಶ ಹೊರಡಿಸಿದ ಕರ್ನಾಟಕ ರಾಜ್ಯ ಸರ್ಕಾರ
ಸದ್ಯ ಕರ್ನಾಟಕ ರಾಜ್ಯ ಸರ್ಕಾರ ಈಗ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ. ಹೊಸ ಆದೇಶದ ಪ್ರಾಕಾರ ರಾಜ್ಯ ಮಹಿಳೆಯರು ಈ ಕೆಲಸ ತಕ್ಷಣ ಮುಗಿಸಿಕೊಂಡರೆ ಅವರು ಆದಷ್ಟು ಬೇಗ ಗೃಹಲಕ್ಷ್ಮಿ ಯೋಜನೆಯ ಭಾಕಿ ಇರುವ ಎಲ್ಲಾ ಹಣವನ್ನು ಪಡೆದುಕೊಳ್ಳಬಹುದು. ಹೌದು ಗೃಹಲಕ್ಷ್ಮಿ ಯೋಜನೆಯ ಭಾಕಿ ಇರುವ 4000 ರೂ ಹಣವನ್ನು ಈ ಚಿಕ್ಕ ಕೆಲಸವನ್ನು ಪೂರ್ಣಗೊಳಿಸಿಕೊಳ್ಳದೆ ಅವರು ಅವರು ಆ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ.
ಗೃಹಲಕ್ಷ್ಮಿ ಹಣ ಬೇಕಾದರೆ ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ
ರಾಜ್ಯ ಸರ್ಕಾರದ ಹೊಸ ಆದೇಶದ ಪ್ರಕಾರ ಇನ್ನುಮುಂದೆ ಈ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ.
- ತಮ್ಮ ಬ್ಯಾಂಕ್ ಖಾತೆಗೆ ಇನ್ನೂ ಕೂಡ NPCI ಮ್ಯಾಪಿಂಗ್ ಮಾಡಿಸಿಕೊಳ್ಳದ ಮಹಿಳೆಯರು.
- ಬ್ಯಾಂಕ್ ಖಾತೆಗೆ ಇನ್ನೂ ಕೂಡ ಆಧಾರ್ ಸಂಖ್ಯೆ ಲಿಂಕ್ ಮಾಡದ ಮಹಿಳೆಯರು.
- ಬ್ಯಾಂಕ್ ಖಾತೆಗೆ ಇನ್ನೂ ಕೂಡ KYC ಅಪ್ಡೇಟ್ ಮಾಡದೆ ಇರುವ ಮಹಿಳೆಯರು.
- ಬ್ಯಾಂಕ್ ಖಾತೆಗೆ ಇನ್ನೂ ಕೂಡ ಮೊಬೈಲ್ ಸಂಖ್ಯೆ ಲಿಂಕ್ ಮಾಡದ ಮಹಿಳೆಯರು.
- ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಮಾಡದ ಮಹಿಳೆಯರು.
- ಬ್ಯಾಂಕ್ ಖಾತೆಗೆ ಇನ್ನು ಪಾನ್ ಸಂಖ್ಯೆ ಲಿಂಕ್ ಮಾಡದ ಮಹಿಳೆಯರು.
- ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವ ಮಹಿಳೆಯರು.
- BPL ರೇಷನ್ ಕಾರ್ಡ್ ರದ್ದಾದ ಮಹಿಳೆಯರು.
ಇನ್ನು ರಾಜ್ಯವೂ ಸರ್ಕಾರ ನೀಡುವ ಮಾಹಿತಿಯ ಪ್ರಕಾರ ಯಾವ ಮಹಿಳೆಯರು ಈ ಕೆಲಸವನ್ನು ಇನ್ನೂ ಕೂಡ ಮಾಡಿಸಿಕೊಂಡಿಲ್ಲವೋ ಅವರು ಇನ್ನುಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಈ ಎಲ್ಲಾ ಕೆಲಸವನ್ನು ಮುಗಿಸಿಕೊಂಡವರು ಇನ್ನೇನು ಕೆಲವೇ ದಿನಗಳಲ್ಲಿ ಭಾಕಿ ಇರುವ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲಿದ್ದಾರೆ.
ತಾಂತ್ರಿಕ ದೋಷದ ಕಾರಣ ಭಾಕಿ ಉಳಿದುಕೊಂಡ ಗೃಹಲಕ್ಷ್ಮಿ ಹಣ
ಹೌದು, ರಾಜ್ಯ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಕೆಲವು ತಾಂತ್ರಿಕ ದೋಷಗಳ ಕಾರಣ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮಾ ಆಗದೆ ಭಾಕಿ ಉಳಿದುಕೊಂಡಿದೆ ಮತ್ತು ಆ ಹಣವನ್ನು ಈಗ ಜಮಾ ಮಾಡುವ ಕೆಲಸ ಕೂಡ ಮಾಡಲಾಗುತ್ತಿದೆ. ಮಾರ್ಚ್ ತಿಂಗಳ ಅಂತ್ಯದ ಒಳಗಾಗಿ ಭಾಕಿ ಇರುವ ಎಲ್ಲಾ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ. ಇನ್ನು ಮಹಿಳೆಯರು DBT ಕರ್ನಾಟಕ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಕೂಡ ಚೆಕ್ ಮಾಡಿಕೊಳ್ಳಬಹುದು.