UPI Mobile Number: ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಅಂತ ನಿಮಗೆಲ್ಲ ತಿಳಿದಿದೆ. ದೇಶದಲ್ಲಿ ಡಿಜಿಟಲ್ ವಹಿವಾಟು (Digital Payments) ಹೆಚ್ಚಾಗಿದ್ದು ಪ್ರತಿಯೊಬ್ಬರೂ ಕೂಡ ಮೊಬೈಲ್ ಮೂಲಕ ಪೇಮೆಂಟ್ ಮಾಡುತ್ತಿದ್ದಾರೆ. ಇದರ ನಡುವೆ ದೇಶದಲ್ಲಿ UPI ವಂಚನೆಗಳು ಹೆಚ್ಚಾಗಿರುವುದು ಕೇಂದ್ರದ ಗಮನಕ್ಕೆ ಬಂದಿದೆ. UPI ಮೂಲಕ ಸೈಬರ್ ವಂಚನೆ ನಡೆಯುತ್ತಿರುವ ಕಾರಣ NPCI ಈಗ ದೇಶದಲ್ಲಿ UPI ಪೇಮೆಂಟ್ ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತಂದಿದೆ. ಏಪ್ರಿಲ್ 1 ನೇ ತಾರೀಕಿನಿಂದ ದೇಶದಲ್ಲಿ UPI ಪೇಮೆಂಟ್ ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ಬರಲಿದೆ.
UPI ನಿಯಮದಲ್ಲಿ ಹೊಸ ಬದಲಾವಣೆ
ಹೌದು ಏಪ್ರಿಲ್ 1 ನೇ ತಾರೀಕಿನಿಂದ UPI ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದ್ದು ಈ ಕೆಲವು ಮೊಬೈಲ್ ಸಂಖ್ಯೆಗಳಿಂದ ಇನ್ನುಮುಂದೆ UPI ಪೇಮೆಂಟ್ (UPI Payments) ಗಳನ್ನೂ ಮಾಡಲು ಸಾಧ್ಯವಿಲ್ಲ ಎಂದು NPCI ಹೇಳಿದೆ. ದೇಶದಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗಿ UPI ಮೂಲಕ ನಡೆಯುತ್ತಿರುವ ಕಾರಣ NPCI ಈಗ ಕೆಲವು ಫೋನ್ ನಂಬರ್ ಗಳನ್ನೂ UPI ಸೇವೆಯಿಂದ ಹೊರಹಾಕಲು ತೀರ್ಮಾನ ಮಾಡಿದೆ. ಇನ್ನು ಈ NPCI ದೇಶದ ಎಲ್ಲಾ ಬ್ಯಾಂಕುಗಳಿಗೆ ಆದೇಶವನ್ನು ಕೂಡ ಹೊರಡಿಸಿದೆ.

ಇನ್ನುಮುಂದೆ ಈ ಮೊಬೈಲ್ ಸಂಖ್ಯೆಯಲ್ಲಿ ವರ್ಕ್ ಆಗಲ್ಲ UPI
ಹೌದು, ಮೋಸದ ವಹಿವಾಟುಗಳನ್ನು ತಡೆಗಟ್ಟುವ ನಿಟ್ಟಿನಿಂದ NPCI ಈಗ ಸಿಸ್ಟಮ್ ನಲ್ಲಿ ಬಹುದೊಡ್ಡ ಬದಲಾವಣೆ ಜಾರಿಗೆ ತಂದಿದೆ. UPI ಮೋಸವನ್ನು ತಡೆಗಟ್ಟಲು ಎಲ್ಲಾ ಬ್ಯಾಂಕುಗಳು ತಮ್ಮ ವ್ಯವಸ್ಥೆಯಲ್ಲಿ ನಿಯಮಿತವಾಗಿ ನವೀಕರಣ ಮಾಡುವಂತೆ NPCI ಈಗ ಎಲ್ಲಾ ಬ್ಯಾಂಕುಗಳಿಗೆ ಆದೇಶ ನೀಡಿದೆ. UPI ವಹಿವಾಟು ಮಾಡುವ ಮೊಬೈಲ್ ಸಂಖ್ಯೆಯನ್ನು ಪ್ರತಿ ವಾರ ನವೀಕರಣ ಮಾಡುವಂತೆ ಈಗ NPCI ಎಲ್ಲಾ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ. ಮೋಸದ ವಹಿವಾಟು ಮತ್ತು ತಪ್ಪಾದ ವಹಿವಾಟು ತಡೆಗಟ್ಟಲು ಎಲ್ಲಾ ಬ್ಯಾಂಕುಗಳು ಪ್ರತಿ ವಾರ ಮೊಬೈಲ್ ಸಂಖ್ಯೆಗಳ ನವೀಕರಣ ಮಾಡಿದ ಟೊಪ್ಪಿಯನ್ನು ಬಿಡುಗಡೆ ಮಾಡಬೇಕು ಈಗ NPCI ಆದೇಶ ಹೊರಡಿಸಿದೆ.
ಮೊಬೈಲ್ ಸಂಖ್ಯೆ ನವೀಕರಿಸಿದರೆ ಈ ಸಂಖ್ಯೆಯಿಂದ UPI ಸಾಧ್ಯವಿಲ್ಲ
ಇನ್ನು ಎಲ್ಲಾ ಬ್ಯಾಂಕುಗಳಿಗೆ ತನ್ನ ಬಳಕೆದಾರರಿಂದ ಒಪ್ಪಿಗೆ ಪಡೆದುಕೊಂಡು ಮೊಬೈಲ್ ಸಂಖ್ಯೆ ನವೀಕರಣ ಮಾಡಬೇಕು. ಅದೇ ರೀತಿಯಲ್ಲಿ ಒಮ್ಮೆ ಮೊಬೈಲ್ ಸಂಖ್ಯೆ ನವೀಕರಣ ಮಾಡಿದರೆ ಆ ಮೊಬೈಲ್ ಸಂಖ್ಯೆಯಿಂದ ಮತ್ತೆ UPI ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಎಲ್ಲಾ ಬ್ಯಾಂಕುಗಳು ವಾರಕ್ಕೆ ಬಳಕೆದಾರರ UPI ಮೊಬೈಲ್ ಸಂಖ್ಯೆ ಬಗ್ಗೆ NCPI ಗೆ ಮಾಹಿತಿ ನೀಡಬೇಕು. ಇನ್ನು ಈ ಹೊಸ ನಿಯಮವನ್ನು UPI ಬಳಸುವವರಿಗೆ ಮಾತ್ರ ಜಾರಿಗೆ ತರಲಾಗುತ್ತಿದೆ. NPCI ಜಾರಿಗೆ ತಂದಿರುವ ಈ ಹೊಸ ನಿಯಮದಿಂದ UPI ವಂಚನೆಗಳು ಕಡಿಮೆ ಆಗುವುದು ಮಾತ್ರವಲ್ಲದೆ ಗ್ರಾಹಕರ ವಹಿವಾಟು ಕೂಡ ಬಹಳ ಸುರಕ್ಷಿತವಾಗಿ ಇರುತ್ತದೆ.