Vaya Vandana: ಹಿರಿಯ ನಾಗರಿಕರಿಗೆ ರಾಜ್ಯ ಸರ್ಕಾರದಿಂದ 5 ಲಕ್ಷ ಉಚಿತ, ವಯೋ ವಂದನಾ ಯೋಜನೆ ಜಾರಿ

Ayushman Bharat Vaya Vandana: ಈಗಿನ ಕಾಲದಲ್ಲಿ ಆರೋಗ್ಯ ಬಹಳ ಅಗತ್ಯ ಎಂದು ಹೇಳಬಹುದು, ಯಾವ ಸಮಯದಲ್ಲಿ ಯಾರಿಗೆ ಏನಾಗುತ್ತದೆ ಎಂದು ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಇದರ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಜ್ಯದ ಮತ್ತು ದೇಶದ ಬಡಜನರಿಗಾಗಿ ಹಲವು ಆರೋಗ್ಯ ಯೋಜನೆಯನ್ನು ಜಾರಿಗೆ ತರವಲ್ಲಿ ಯಶಸ್ವಿಯಾಗಿದೆ. ಶ್ರೀಮಂತರು ಆರೋಗ್ಯ ವಿಮೆ ಮಾಡಿಸಿಕೊಳ್ಳುತ್ತಾರೆ, ಆದರೆ ಬಡವರಿಗೆ ಅಷ್ಟು ಹಣ ಕೊಟ್ಟು ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಸರ್ಕಾರ ಹಲವು ಆರೋಗ್ಯ ವಿಮಾ ಯೋಜನೆಯಲ್ಲಿ ಜಾರಿಗೆ ತಂದಿದೆ. ಸದ್ಯ ಕರ್ನಾಟಕ ರಾಜ್ಯ ಸರ್ಕಾರ (Karnataka State Government) ರಾಜ್ಯದ ಎಲ್ಲಾ ಹಿರಿಯರಿಗೆ ಗುಡ್ ನ್ಯೂಸ್. ಕರ್ನಾಟಕ ರಾಜ್ಯ ಸರ್ಕಾರ ಈಗ ಹಿರಿಯರ ಆರೋಗ್ಯದ ಹಿತದೃಷ್ಟಿಯಿಂದ ವಯೋ ವಂದನಾ (Vaya Vandana Scheme) ಯೋಜನೆನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ.

WhatsApp Group Join Now
Telegram Group Join Now

ಏನಿದು ವಯೋ ವಂದನಾ ಯೋಜನೆ
ಕರ್ನಾಟಕ ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ್ (Ayushman Bharat Scheme) ಯೋಜನೆಯ ಅಡಿಯಲ್ಲಿ ಈ ವಯೋ ವಂದನಾ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 5 ಲಕ್ಷ ರೂ ತನಕ ಆರೋಗ್ಯ ವಿಮೆ ಪಡೆದುಕೊಳ್ಳಬಹುದು. ಆಯುಷ್ಮನ್ ಭಾರತ್ ಯೋಜನೆಯ ಅಡಿಯಲ್ಲಿ ಈ ವಯೋ ವಂದನಾ ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಇನ್ನು ದೇಶದ ಎಲ್ಲಾ ರಾಜ್ಯದಲ್ಲಿ ಈ ಆಯುಷ್ಮನ್ ಭಾರತ್ ಯೋಜನೆ ಜಾರಿಯಲ್ಲಿ ಇದೆ ಮತ್ತು ಅದರ ಅಡಿಯಲ್ಲಿ ವಯೋ ವಂದನಾ ಯೋಜನೆ ಮೂಲಕ ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು.

ayushman bharat vaya vandana scheme details
karnataka govt and central govt ayushman bharat vaya vandana scheme

ಈ ಯೋಜನೆಯಲ್ಲಿ ಕರ್ನಾಟಕ ಸರ್ಕಾರದ ಪಾಲು ಎಷ್ಟು
ಆಯುಷ್ಮಾನ್ ಭಾರತ್ ಮತ್ತು ವಯೋ ವಂದನಾ ಯೋಜನೆಯ ಅಡಿಯಲ್ಲಿ ಕರ್ನಾಟಕ ಸರ್ಕಾರ 60:40 ಅನುಪಾತದಲ್ಲಿ ಫಲಾನುಭವಿಗಳಿಗೆ ಹಣ ನೀಡುತ್ತದೆ. ಹೌದು ಕೆಂದ್ರದಿಂದ ಸರ್ಕಾರದಿಂದ ಶೇಕಡಾ 60 ರಷ್ಟು ಹಣ ಬಂದರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಸರಿಸುಮಾರು 40 ರಷ್ಟು ಹಣವನ್ನು ಈ ಯೋಜನೆಯ ಮೂಲಕ ಮಂಜೂರು ಮಾಡಲಾಗುತ್ತದೆ. ರಾಜ್ಯದ ಸುಮಾರು 1 ಕೋಟಿ 12 ಲಕ್ಷ ಕುಟುಂಬಗಳಿಗಾಗಿ ಈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.

ಈ ಯೋಜನೆಯಲ್ಲಿ 1953 ಚಿಕಿತ್ಸೆಗಳು ಲಭ್ಯವಿದೆ
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ವಯೋ ವಂದನಾ ಯೋಜನೆಯ ಅಡಿಯಲ್ಲಿ ಸುಮಾರು 1953 ಚಿಕಿತ್ಸೆಗಳು ಲಭ್ಯವಿದೆ ಮತ್ತು 70 ವರ್ಷ ಮೇಲ್ಪಟ್ಟವರು ಈ ಯೋಜನೆಯ ಅಡಿಯಲ್ಲಿ 5 ಲಕ್ಷ ರೂ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಇನ್ನು ಈ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಸುಮಾರು 70 ಅನುದಾನವಾಗಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಮೊದಲು ಚಿಕಿತ್ಸೆಯ ವೆಚ್ಚವನ್ನು ಜನರು ಪಾವತಿ ಮಾಡಿ ನಂತರ ಈ ಯೋಜನೆಯ ಮೂಲಕ ಮುಂದಿನ 30 ದಿನಗಳ ಒಳಗಾಗಿ ಹಣ ಪಡೆದುಕೊಳ್ಳಬಹುದು. ಸುಮಾರು 550 ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಈ ಯೋಜನೆ ಲಭ್ಯವಿದೆ. ಆದರೆ ಕೆಲವು ಚಿಕಿತ್ಸೆಗಳು ಈ ಯೋಜನೆಯ ಅಡಿಯಲ್ಲಿ ಲಭ್ಯ ಇರುವುದಿಲ್ಲ ಮತ್ತು ಅದನ್ನು ಜನರು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.

Leave a Comment