Siddaramaiah Budget: ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 16 ನೇ ಅತೀ ದೊಡ್ಡ ಬಜೆಟ್ ಘೋಷಣೆ ಮಾಡಿದ್ದಾರೆ. ಇನ್ನು ಈ ಬಾರಿಯ ಬಜೆಟ್ ನಲ್ಲಿ ಹಲವು ಕ್ಷೇತ್ರದಲ್ಲಿ ಹಲವು ಯೋಜನೆಯನ್ನು ಜಾರಿಗೆ ತರಲಾಗಿದೆ. ಕೃಷಿ ಕ್ಷೇತ್ರ, ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರ ಸರಿದಂತೆ ಹಲವು ಕ್ಷೇತ್ರದಲ್ಲಿ ಹಲವು ಹೊಸ ಯೋಜನೆ ಜಾರಿಗೆ ತರಲಾಗಿದೆ. ಇನ್ನು ಅಬಕಾರಿ ಕ್ಷೇತ್ರದಲ್ಲಿ ಕೂಡ ಹೊಸ ಬದಲಾವಣೆ ಜಾರಿಗೆ ತರಲಾಗಿದ್ದು ಇದು ಮದ್ಯಪ್ರಿಯರ ಬೇಸರಕ್ಕೆ ಕಾರಣವಾಗಿದೆ. ಇದರ ನಡುವೆ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಮಾತು ಬಹುದೊಡ್ಡ ನಿಯಮವನ್ನು ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದಾರೆ.
ಸಿನಿಮಾ ದರದಲ್ಲಿ ಏಕರೂಪದ ನಿಯಮ
ಹೌದು, ಈ ಬಾರಿಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಸಿನಿಮಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಹುದೊಡ್ಡ ಘೋಷಣೆ ಮಾಡಿದ್ದಾರೆ. ಇನ್ನುಮುಂದೆ ಎಲ್ಲಾ ಚಿತ್ರ ಮಂದಿರದಲ್ಲಿ ಒಂದೇ ರೀತಿಯ ಟಿಕೆಟ್ ನಿಯಮವನ್ನು ಜಾರಿಗೆ ತರುವಂತೆ ಆದೇಶ ಹೊರಡಿಸಿದ್ದಾರೆ. ಹೌದು ಎಲ್ಲಾ ಮಲ್ಟಿಫ್ಲೆಕ್ಸ್ ಗಳಲ್ಲಿ ಒಂದೇ ರೀತಿಯಲ್ಲಿ ಸಿನಿಮಾ ಟಿಕೆಟ್ ದರ ಇರಬೇಕು ಎಂದು ಈ ಬಾರಿಯ ಬಜೆಟ್ ನಲ್ಲಿ ನಿರ್ಧಾರ ತಗೆದುಕೊಂಡಿದ್ದಾರೆ ಸಿದ್ದರಾಮಯ್ಯ ಅವರು.
ಮಲ್ಟಿಫ್ಲೆಕ್ಸ್ ನಲ್ಲಿ ಟಿಕೆಟ್ ದರ 200 ರೂ ಮೀರಬಾರದು
ಬಜೆಟ್ ನಲ್ಲಿ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ರೂಲ್ಸ್ ಜಾರಿಗೆ ತರಲಾಗಿದೆ ಮತ್ತು ಇನ್ನುಮುಂದೆ ಎಲ್ಲಾ ಮಲ್ಟಿಫ್ಲೆಕ್ಸ್ ನಲ್ಲಿ ಸಿನಿಮಾ ಟಿಕೆಟ್ ದರ 200 ರೂ ಮೀರದೆ ಇರುವಂತೆ ನೋಡಿಕೊಳ್ಳಲು ಕ್ರಮ ಕೈಕೊಳ್ಳಲಾಗುತ್ತದೆ ಎಂದು ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದೇ ರೀತಿಯಲ್ಲಿ ಸಿನಿಮಾ ಕ್ಷೇತ್ರವನ್ನು ಕೈಗಾರಿಕಾ ಕ್ಷೇತ್ರದ ಅಡಿಯಲ್ಲಿ ತರಲು ನಿರ್ಧಾರ ತಗೆದುಕೊಳ್ಳುವುದು ಮಾತ್ರವಲ್ಲದೆ ಸಿನಿಮಾ ಕ್ಷೇತ್ರಗಳಿಗೆ OTT ವೇದಿಕೆ ನಿರ್ಮಾಣ ಮಾಡಲು ಕ್ರಮ ತಗೆದುಕೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಆಗಲಿದೆ ಫಿಲ್ಮ್ ಸಿಟಿ
ಇನ್ನು ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ ನಲ್ಲಿ ರಾಜ್ಯದಲ್ಲಿ ಫಿಲ್ಮ್ ಸಿಟಿ ಮಾಡುವ ಬಗ್ಗೆ ನಿರ್ಧಾರ ತಗೆದುಕೊಂಡಿದ್ದಾರೆ. ಇನ್ನು ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಲಾಗುತ್ತದೆ ಮತ್ತು ಫಿಲ್ಮ್ ಸಿಟಿಗಾಗಿ 150 ಎಕರೆ ಜಾಗವನ್ನು ಮೀಸಲು ಇಡಲಾಗುತ್ತೆ. ಮೈಸೂರಿನಲ್ಲಿ ಫಿಲ್ಮ್ ಸಿಟಿಯನ್ನು 500 ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಬಜೆಟ್ ನಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡಲು 500 ಕೋಟಿ ರೂಪಾಯಿ ಮೀಸಲು ಇಡಲಾಗಿದೆ.