Siddaramaiah Budget: ಸಿದ್ದರಾಮಯ್ಯ ಸರ್ಕಾರದಿಂದ ಗೃಹಲಕ್ಷ್ಮಿ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್, ಮಹತ್ವದ ಆದೇಶ

Karnataka Budget: ಸದ್ಯ ರಾಜ್ಯದಲ್ಲಿ ಮುಖಯ ಮಂತ್ರಿಯಾಗಿರುವ ಸಿದ್ದರಾಮಯ್ಯ (CM Siddaramaiah) ಅವರು 16 ನೇ ಬಜೆಟ್ (Budget) ಘೋಷಣೆ ಮಾಡುತ್ತಿದ್ದಾರೆ. ಇನ್ನು ಬಜೆಟ್ ನಲ್ಲಿ ಮುಂದಿನ 6 ಅಭಿವೃದ್ಧಿ ಕಾರ್ಯಕ್ರಮ ಮತ್ತು ರಾಜ್ಯದಲ್ಲಿ ಈಗಾಗಲೇ ಚಾಲ್ತಿಯಲ್ಲಿ ಯೋಜನೆಗಳ ಅಭುವೃದ್ದಿ ಬಗ್ಗೆ ಮಾತನಾಡುತ್ತ ಈಗ ಮತ್ತೆ ರಾಜ್ಯದ ಮಹಿಳೆಯರಿಗೆ ಮತ್ತೆ ಗುಡ್ ನ್ಯೂಸ್ ನೀಡಿದ್ದಾರೆ. ಹೌದು ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಈಗ ರಾಜ್ಯದ ಎಲ್ಲಾ ಮಹಿಳೆಯರಿಗೆ ಬಜೆಟ್ ಸಮಯದಲ್ಲಿ ಗುಡ್ ನ್ಯೂಸ್ ನೀಡಿದ್ದಾರೆ.

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯನ್ನು ಅಕ್ಕ ಕೋ ಆಪರೇಟಿವ್ ಅಡಿಯಲ್ಲಿ ತರಲಾಗುವುದು
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು (gruha Lakshmi Scheme) ಅಕ್ಕ ಕೋ ಆಪರೇಟಿವ್ ಸೊಸೈಟಿ (Akka Co-Operative Society)  ಅಡಿಯಲ್ಲಿ ತರಲಾಗುತ್ತದೆ ಎಂದು ಹೇಳಿದ್ದಾರೆ. ಸದ್ಯ ಗೃಹಲಕ್ಷ್ಮಿ ಯೋಜನೆಯ ಹಣ ಕೆಲವು ತಾಂತ್ರಿಕ ದೋಷಗಳ ಕಾರಣ ಮಹಿಳೆತರ ಖಾತೆಗೆ ಜಮಾ ಆಗುತ್ತಿಲ್ಲ ಮತ್ತು ಈ ಕಾರಣಗಳಿಂದ ಪದೇಪದೇ ಈ ಸಮಸ್ಯೆ ಆಗಬಾರದು ಅನ್ನುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು ಅಕ್ಕ ಕೋ ಆಪರೇಟಿವ್ ಸೊಸೈಟಿ ಅಡಿಯಲ್ಲಿ ತರಲು ಈಗ ಸರ್ಕಾರ ಮುಂದಾಗಿದೆ.

karnataka big budget 2025
siddaramaiah budget 2025 karnataka

ತಿಂಗಳ ಅಂತ್ಯದಲ್ಲಿ ಗೃಹಲಕ್ಷ್ಮಿ ಪೆಂಡಿಂಗ್ ಹಣ ರಿಲೀಸ್
ಸದ್ಯ ಗೃಹಲಕ್ಷ್ಮಿ ಯೋಜನೆಯ ಕಳೆದ ಎರಡು ತಿಂಗಳ ಹಣ ಜಮಾ ಆಗದೆ ಹಾಗೆ ಭಾಕಿ ಉಳಿದುಕೊಂಡಿದೆ. ಸದ್ಯ ಭಾಕಿ ಉಳಿದುಕೊಂಡಿರುವ ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು ಮಾರ್ಚ್ ತಿಂಗಳ ಅಂತ್ಯದ ಒಳಗಾಗಿ ಭಾಕಿ ಉಳಿದುಕೊಂಡಿರುವ ಎಲ್ಲಾ ಗೃಹಲಕ್ಷ್ಮಿ ಹಣವನ್ನು ಜಮಾ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ಹೇಳುವುದರ ಮೂಲಕ ರಾಜ್ಯ ಮಹಿಳೆಯರಿಗೆ ಇನ್ನೊಂದು ಗುಡ್ ನ್ಯೂಸ್ ನೀಡಿದ್ದಾರೆ.

ಬಜೆಟ್ ನಲ್ಲಿ ಹಲವು ಯೋಜನೆಗಳ ಅನುಷ್ಠಾನ
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್ ನಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಾಮಗಳ ಬಗ್ಗೆ ಮಾತನಾಡಿದ್ದಾರೆ. ಕೃಷಿ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ ಮತ್ತು ಗ್ರಾಮ ಹಾಗು ಹಳ್ಳಿಗಳ ಅಭಿವೃದ್ಧಿ ಕಾರ್ಯಮಗಳ ಅನುಷ್ಠಾನದ ಬಗ್ಗೆ ಮಾತನಾಡಿದ್ದಾರೆ ಸಿದ್ದರಾಮಯ್ಯ ಅವರು. ಅದೇ ರೀತಿಯಲ್ಲಿ ಪ್ರೌಢ ಹಾಗು ಅತಿಥಿ ಶಿಕ್ಷಕರ ಗೌರವಧನ ಏರಿಕೆ ಮಾಡುವ ಬಗ್ಗೆ ಕೂಡ ತೀರ್ಮಾನವನ್ನ ತಗೆದುಕೊಳ್ಳಲಾಗಿದೆ.

ಬೆಂಗಳೂರು ನಗರ ಅಭಿವೃದ್ದಿಗಾಗಿ ಸುಮಾರು 7000 ಕೋಟಿ ರೂ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಕರ್ನಾಟಕದಲ್ಲಿ 500 ಪಬ್ಲಿಕ್ ಶಾಲೆಗಳನ್ನು ತೆರೆಯಲು ಕೂಡ ಬಜೆಟ್ ನಲ್ಲಿ ತೀರ್ಮಾನ ತಗೆದುಕೊಳ್ಳಲಾಗಿದೆ. ಅದೇ ರೀತಿಯಲ್ಲಿ 100 ಪ್ರಾರ್ಥಮಿಕ 50 ಪ್ರೌಢ ಶಾಲೆಗಳ ಉನ್ನತೀಕರಣಕ್ಕೂ ಕೂಡ ಸರ್ಕಾರ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಿದೆ. 1080 ಕೋಟಿ ರೂ ವೆಚ್ಚದಲ್ಲಿ ವೃಷಭಾವತಿ ವ್ಯಾಲಿ ಯೋಜನೆ ಜಾರಿಗೆ ತರಲಾಗುತ್ತಿದೆ. ಇನ್ನು ಮದ್ಯಪ್ರಿಯರಿಗೆ ಸರ್ಕಾರ ಬೇಸರದ ಸುದ್ದಿ ನೀಡಿದೆ, ಹೌದು ಅಬಾಕರು ಸುಂಕ ಮತ್ತೆ ಏರಿಕೆ ಮಾಡಲು ಈಗ ಮತ್ತೆ ಸರ್ಕಾರ ಮುಂದಾಗಿದೆ. ಎತ್ತಿನಹೊಳೆ ಯೋಜನೆಗೆ ಸುಮಾರು 553 ಕೋಟಿ ರೂ ಮೀಸಲು ಇಡಲು ತೀರ್ಮಾನ ತಗೆದುಕೊಳ್ಳಲಾಗುತ್ತಿದೆ.

Leave a Comment