Renault Kwid Electric car: ಈಗಿನ ಕಾಲದಲ್ಲಿ ಹೆಚ್ಚಿನ ಜನರು ಎಲೆಕ್ಟ್ರಿಕ್ ಕಾರುಗಳನ್ನ (Electric Cars) ಖರೀದಿ ಮಾಡಲು ಇಷ್ಟಪಡುತ್ತಾರೆ. ಹೌದು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು. ಇದರ ನಡುವೆ ದೇಶದ ಕೆಲವು ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ಹಲವು ಬಗೆಯ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಇದರ ನಡುವೆ ಈಗ Renault ಕಾರು ಕಂಪನಿ ಹೊಸ ಬಗೆಯ ಇನ್ನೊಂದು ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಅತೀ ಕಡಿಮೆ ಬೆಲೆಗೆ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ.
2026 ಕ್ಕೆ ಭಾರತದಲ್ಲಿ ಲಾಂಚ್ ಆಗಲಿದೆ Renault Kwid EV
ಪ್ರತಿಷ್ಠಿತ ಕಾರು ತಯಾಕರ ಕಂಪನಿಯಾದ Renault ಈಗ 2026 ಕ್ಕೆ ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ Kwid ಕಾರನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಇನ್ನು Renault Kwid ಕಾರು ಮತ್ತೆಗೆ ಲಾಂಚ್ ಆದರೆ ಮಾರುತಿ ಸ್ವಿಫ್ಟ್ (Maruti Swift) ಮತ್ತು ಮಾರುತಿ 800 (Maruri 800) ಕಾರುಗಳು ಬೇಡಿಕೆ ಕಳೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಇನ್ನು Renault Kwid ಎಲೆಕ್ಟ್ರಿಕ್ ಕಾರ್ ಕಡಿಮೆ ಬೆಲೆಯ ಕಾರ್ ಆಗಿರಲಿದ್ದು ಇದರ ಮೈಲೇಜ್ ಕೂಡ ಬಹಳ ಹೆಚ್ಚಾಗಿ ಇರಲಿದೆ ಎಂದು ಅಂದಾಜು ಮಾಡಲಾಗಿದೆ.

Renault Kwid ಎಲೆಕ್ಟ್ರಿಕ್ ಕಾರಿನ ಬೆಲೆ ಮತ್ತು ಮೈಲೇಜ್
2026 ಕ್ಕೆ ಲಾಂಚ್ ಆಗಲಿದೆ Renault Kwid ಎಲೆಕ್ಟ್ರಿಕ್ ಕಾರಿನ ಬೆಲೆ 7 ಲಕ್ಷ ರೂಪಾಯಿಯಿಂದ ಆರಂಭ ಆಗಲಿದೆ ಎಂದು ಅಂದಾಜು ಮಾಡಲಾಗಿದೆ. ಅದೇ ರೀತಿಯಲ್ಲಿ ಇನ್ನು Renault Kwid ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಗ್ಗೆ ಮಾತನಾಡುವುದಾದರೆ ಇದು 26.8 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಕಾರಣ ಈ ಕಾರಿನ ಮೈಲೇಜ್ ಸುಮಾರು 220 Km ಆಗಿರಲಿದೆ ಎಂದು ಅಂದಾಜು ಮಾಡಲಾಗಿದೆ.
Renault Kwid ಎಲೆಕ್ಟ್ರಿಕ್ ಕಾರಿನ ವಿಶೇಷತೆ
Renault Kwid ಎಲೆಕ್ಟ್ರಿಕ್ ಕಾರು 8 ಇಂಚಿನ ಡಿಸ್ಪ್ಲೇ ಸೇರಿದಂತೆ ಹಲವು ಏರ್ ಬ್ಯಾಗ್ ಹೊಂದಿರಲಿದೆ. ಕಾರಿನ ಹಿಂಬದಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿದ್ದು ಇದು ಕಾರ್ ರಿವರ್ಸ್ ಮಾಡುವ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತದೆ. ವೈರ್ ಲೆಸ್ ಚಾರ್ಜರ್ ಸೇರಿದಂತೆ ನೀವು ಈ ಕಾರಿನಲ್ಲಿ ಬಹಳ ಉತ್ತಮವಾದ AC ಕೂಡ ನೋಡಬಹುದಾಗಿದೆ. ಇನ್ನು ಈ ಕಾರಿನ ನಾಲ್ಕು ವಿಂಡೋ ಗಳು ಪವರ್ ವಿಂಡೋ ಆಗಿರುತ್ತದೆ. ಈ ಕಾರಿನ ಒಮ್ಮೆ ಚಾರ್ಜ್ ಮಾಡಲು ಸುಮಾರು 5 ಘಂಟೆ ಸಮಯ ತಗೆದುಕೊಳ್ಳುತ್ತದೆ ಎಂದು ಅಂದಾಜು ಮಾಡಲಾಗಿದೆ.