General Insurance: 1000 ರೂ ಗೆ 20 ಲಕ್ಷ ರೂ ವಿಮೆ, SBI ಉತ್ತಮ ವಿಮಾ ಯೋಜನೆ ಬಗ್ಗೆ ಇಲ್ಲಿದೆ ಮಾಹಿತಿ

SBI General Insurance: ಈಗಿನ ಕಾಲದಲ್ಲಿ ಯಾವ ಸಮಯದಲ್ಲಿ ಯಾರಿಗೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಆರೋಗ್ಯ ಅಥವಾ ಅಪಘಾತ ವಿಮೆ (Health And General Insurance) ಮಾಡಿಸಿಕೊಂಡಿರುವುದು ಅತೀ ಅಗತ್ಯ ಕೂಡ ಆಗಿದೆ. ಇದರ ನಡುವೆ ಸಾಕಷ್ಟು ಜನರು ಯಾವ ರೀತಿಯ ಆರೋಗ್ಯ ವಿಮೆ ಮತ್ತು ಅಪಘಾತ ವಿಮೆ ಮಾಡಿಸಬೇಕು, ಎಷ್ಟು ರೂಪಾಯಿಯ ವಿಮೆ ಮಾಡಿಸಬೇಕು, ಮತ್ತು ಯಾವ ಕಂಪನಿಯ ಆರೋಗ್ಯ ವಿಮೆ ಅಥವಾ ಅಪಘಾತ ವಿಮೆ ಮಾಡಿಸಬೇಕು ಅನ್ನುವ ಅರಿವು ಇರುವುದಿಲ್ಲ. ಆರೋಗ್ಯ ಅಥವಾ ಅಪಘಾತ ವಿಮೆ ಮಾಡಿಸುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳುವುದು ಅತೀ ಉತ್ತಮ ಆಗಿದೆ. ಸದ್ಯ ದೇಶದ ಪ್ರತಿಷ್ಠಿತ ಮತ್ತು ಅತೀ ದೊಡ್ಡ ವಿಮ ಕಂಪನಿಯಾದ SBI ಜನರಲ್ ಇನ್ಶೂರೆನ್ಸ್ (SBI General Insurance) ಈಗ ಅಪಘಾತ ವಿಮೆ ಮಾಡಿಸುವವರಿಗೆ ಬಂಪರ್ ಆಫರ್ ನೀಡಿದೆ.

WhatsApp Group Join Now
Telegram Group Join Now

SBI ನಿಂದ ಅಪಘಾತ ವಿಮೆ ಮಾಡಿಸುವವರಿಗೆ ಗುಡ್ ನ್ಯೂಸ್
ಹೌದು SBI ಜನರಲ್ ಇನ್ಶೂರೆನ್ಸ್ ಈಗ ಅಪಘಾತ ವಿಮೆ ಮಾಡಿಸುವವರಿಗೆ ಉತ್ತಮ ಆಫರ್ ನೀಡಿದೆ ಮತ್ತು SBI ಜನರಲ್ ಇನ್ಶೂರೆನ್ಸ್ ಯೋಜನೆಯ ಅಡಿಯಲ್ಲಿ ಅತೀ ಕಡಿಮೆ ಕಂತುಗಳನ್ನ ಕಟ್ಟುವುದರ ಮೂಲಕ ದೊಡ್ಡ ಮೊತ್ತ ಅಪಘಾತ ವಿಮೆ ಪಡೆದುಕೊಳ್ಳಬಹುದು. ಇನ್ನು SBI ಜನರಲ್ ಇನ್ಶೂರೆನ್ಸ್ ಸರ್ಕಾರೀ ಸ್ವಾಮ್ಯದ ಕಂಪನಿಯಾದ ಆದಕಾರಣ ಬಹುತೇಕ ಎಲ್ಲಾ ಅಪಘಾತಗಳಿಗೆ ಈ ಇನ್ಶೂರೆನ್ಸ್ ಲಭ್ಯ ಇರಲಿದೆ.

SBI general insurance details
SBI general insurance premium and coverage details

100 ರೂಪಾಯಿಯಿಂದ ಆರಂಭ ಆಗುತ್ತೆ ಪ್ರೀಮಿಯಂ
SBI ಜನರಲ್ ಇನ್ಶೂರೆನ್ಸ್ ಜಾರಿಗೆ ತಂದಿರುವ ಈ SBI ಜನರಲ್ ಇನ್ಶೂರೆನ್ಸ್ ಪ್ರೀಮಿಯಂ (SBI General Insurance Premium) ಕೇವಲ 100 ರೂಪಾಯಿಯ ಪ್ರೀಮಿಯಂ ನಿಂದ ಆರಂಭ ಆಗಲಿದೆ. ಇನ್ನು ನೀವು ಪಡೆದುಕೊಳ್ಳುವ ಕವರೇಜ್ ನಿಮ್ಮ ವಿಮ ಮೊತ್ತದ ಮೇಲೆ ನಿರ್ಧಾರ ಆಗುತ್ತದೆ. ಅದೇ ರೀತಿಯಲ್ಲಿ 100 ರೂ ಪ್ರೀಮಿಯಂ ಮತ್ತು 1000 ರೂ ಪ್ರೀಮಿಯಂ ನಲ್ಲಿ ದೊಡ್ಡ ಮೊತ್ತದ ಅಪಘಾತ ವಿಮೆ ಈ SBI ಜನರಲ್ ಇನ್ಶೂರೆನ್ಸ್ ನಲ್ಲಿ ಲಭ್ಯ ಇರುತ್ತದೆ.

1000 ರೂ ಪ್ರೀಮಿಯಂ ನಲ್ಲಿ ಸಿಗಲಿದೆ 20 ಲಕ್ಷ ರೂ
SBI ಜನರಲ್ ಇನ್ಶೂರೆನ್ಸ್ ನಲ್ಲಿ ನೀವು 1000 ಪ್ರೀಮಿಯಂ ಪಡೆದುಕೊಂಡರೆ ನೀವು 20 ಲಕ್ಷ ರೂ ತನಕ ಅಪಘಾತ ವಿಮೆ ಪಡೆದುಕೊಳ್ಳಬಹುದು. SBI ಜನರಲ್ ಇನ್ಶೂರೆನ್ಸ್ ನಿಮಗೆ ಅಪಘಾತ ಮತ್ತು ಇತರೆ ತುರ್ತು ಸಮಯದಲ್ಲಿ ಈ ಅಪಘಾತ ವಿಮೆ ಒದಗಿಸುವ ಕೆಲಸ ಮಾಡುತ್ತದೆ. ಇನ್ನು ನೀವು 1000 ರೂ SBI ಜನರಲ್ ಇನ್ಶೂರೆನ್ಸ್ ಪ್ರೀಮಿಯಂ ಕಟ್ಟಿದರೆ ನೀವು ಅಪಘಾತದಿಂದ ಮರಣ ಹೊಂದಿದರೆ ನಿಮ್ಮ ಕುಟುಂಬಕ್ಕೆ 20 ಲಕ್ಷ ರೂ ಇನ್ಶೂರೆನ್ಸ್ ಸಿಗುತ್ತದೆ.

ಆಸ್ಪತ್ರೆ ಬಿಲ್ ಗಳಿಗೆ ಈ ಇನ್ಶೂರೆನ್ಸ್ ಲಭ್ಯ ಇರುವುದಿಲ್ಲ
ಇನ್ನು SBI ಜನರಲ್ ಇನ್ಶೂರೆನ್ಸ್ ಮಾಡಿಸುವವರು ಒಂದು ವಿಷಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು, ಹೌದು ಯಾವುದೇ ಅಪಘಾತದ ಸಮಯದಲ್ಲಿ ನೀವು ಗಾಯಗೊಂಡರೆ ನಿಮಗೆ ಈ ಇನ್ಶೂರೆನ್ಸ್ ನಿಂದ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಿಲ್ಲ. ಇನ್ನು 18 ವರ್ಷದಿಂದ 65 ವರ್ಷದ ಒಳಗಿನ ಎಲ್ಲಾ ಜನರು ಈ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು. ಇನ್ನು SBI ಜನರಲ್ ಇನ್ಶೂರೆನ್ಸ್ ಮಾಡಿಸಲು ನೀವು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಅತೀ ಮುಖ್ಯ ಕೂಡ ಆಗಿದೆ. ಅದೇ ರೀತಿಯಲ್ಲಿ ನೀವು ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವುದರ ಮೂಲಕ SBI ಜನರಲ್ ಇನ್ಶೂರೆನ್ಸ್ ಮಾಡಿಸಬಹುದು.

Leave a Comment