Anna Bhagya Scheme March: BPL ರೇಷನ್ ಕಾರ್ಡ್ ಇದ್ದವರಿಗೆ ಮತ್ತು ಅಂತ್ಯೋದಯ ಕಾರ್ಡ್ ಇದ್ದವರಿಗೆ ಕರ್ನಾಟಕ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ನಿನ್ನೆ ರಾಜ್ಯದಲ್ಲಿ ಬಜೆಟ್ ಮಂಡನೆ ಆಗಿದ್ದು ಹಲವು ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಇದರ ನಡುವೆ ಈಗ ರಾಜ್ಯದಲ್ಲಿ ಅಂತ್ಯೋದಯ ಮತ್ತು BPL ಕಾರ್ಡ್ ಇದ್ದವರಿಗೆ ಆಹಾರ ಮತ್ತು ನಾಗರೀಕ ಇಲಾಖೆ ಗುಡ್ ನ್ಯೂಸ್ ನೀಡಿದೆ. ಹೌದು ಮಾರ್ಚ್ ತಿಂಗಳಲ್ಲಿ ಫಲಾನುಭವಿಗಳಿಗೆ 15 ಅಕ್ಕಿ ವಿತರಣೆ ಮಾಡಲು ಈಗ ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾದರೆ 15 ಕೆಜಿ ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡಿರುವ ಆದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಫೆಬ್ರವರಿ ಅನ್ನಭಾಗ್ಯ ಹಣ
ಹೌದು ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆಯ (Anna Bhagya Scheme) ಹಣ ಇನ್ನು ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಹೌದು , ರಾಜ್ಯ ಸರ್ಕಾರ ಪ್ರತಿ ತಿಂಗಳು 5 ಅಕ್ಕಿ ಬದಲಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಕೆಲಸವನ್ನು ಮಾಡುತ್ತಿತ್ತು, ಆದರೆ ಫೆಬ್ರವರಿ ತಿಂಗಳ ಹಣವನ್ನು ರಾಜ್ಯ ಸರ್ಕಾರ ಫಲಾನುಭವಿಗಳ ಖಾತೆಗೆ ಜಮಾ ಮಾಡಿಲ್ಲ, ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ ಇನ್ನೊಂದು ಹೊಸ ನಿರ್ಧಾರ ಮಾಡಿದೆ.

ಮಾರ್ಚ್ ತಿಂಗಳ ಫಲಾನುಭವಿಗಳಿಗೆ ಸಿಗಲಿದೆ 15 ಕೆಜಿ ಅಕ್ಕಿ
ಸದ್ಯ ರಾಜ್ಯ ಸರ್ಕಾರ ಹೊಸ ತೀರ್ಮಾನ ಮಾಡಿದ್ದು ಈಗ ಹಣದ ಬದಲಾಗಿ ಅಕ್ಕಿ ನೀಡಲು ಮುಂದಾಗಿದೆ. ಹೌದು, ಮಾರ್ಚ್ ತಿಂಗಳಲ್ಲಿ ನೇರವಾಗಿ ಫಲಾನುಭವಿಗಳಿಗೆ 15 ಅಕ್ಕಿ ನೀಡಲು ಈಗ ರಾಜ್ಯ ಸರ್ಕಾರ ತೀರ್ಮಾನವನ್ನು ಮಾಡಿದೆ. ಫೆಬ್ರವರಿ ತಿಂಗಳ ಹಣ ಹಾಕದ ಕಾರಣ ಹಣದ ಬದಲು 5 ಅಕ್ಕಿ ಮತ್ತು ಮಾರ್ಚ್ ತಿಂಗಳ 5 ಅಕ್ಕಿ ಮತ್ತು 5 ಅಕ್ಕಿ ಹಣದ ಬದಲಾಗಿ ಅಕ್ಕಿ, ಹೀಗೆ ಒಟ್ಟಾಗಿ 15 KG ಅಕ್ಕಿಯನ್ನು ಫಲಾನುಭವಿಗಳಿಗೆ ನೀಡಲು ಈಗ ರಾಜ್ಯ ಸರ್ಕಾರ ಮುಂದಾಗಿದೆ.
ಬಯೋಮೆಟ್ರಿಕ್ ನೀಡಿ ಅಕ್ಕಿ ಪಡೆದುಕೊಳ್ಳಬೇಕು
ಹೌದು, BPL ಮತ್ತು ಅಂತ್ಯೋದಯ ಕಾರ್ಡ್ ಇದ್ದವರು ನ್ಯಾಯ ಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ನೀಡಿ 15 ಅಕ್ಕಿಯನ್ನು ಪಡೆದುಕೊಳ್ಳಬಹುದು. ಇನ್ನು ಫಲಾನುಭವಿಗಳು ಅಕ್ಕಿ ಬೇಕಾದರೆ ಬಯೋಮೆಟ್ರಿಕ್ ನೀಡುವುದು ಅತೀ ಕಡ್ಡಾಯವಾಗಿದೆ. ಫೆಬ್ರವರಿ ತಿಂಗಳಲ್ಲಿ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗದ ಕಾರಣ ಫಲಾನುಭವಿಗಳು ರಾಜ್ಯ ಸರ್ಕಾರದ ಮೇಲೆ ಬೇಸರ ಹೊರಹಾಕಿದ್ದರು, ಸದ್ಯ ರಾಜ್ಯ ಸರ್ಕಾರ ಈಗ ಈ ಮೂಲಕ ರಾಜ್ಯದ BPL ಮತ್ತು ಅಂತ್ಯೋದಯ ರೇಷನ್ ಕಾರ್ಡುದಾರರಿಗೆ ಸಿಹಿಸುದ್ದಿ ನೀಡಿದೆ.
ಪ್ರತಿ ಸದ್ಯರಿಗೆ ಸಿಗಲಿದೆ 15 KG ಅಕ್ಕಿ
ಮಾರ್ಚ್ ತಿಂಗಳಲ್ಲಿ BPL ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರಿಗೆ 15 ಅಕ್ಕಿ ಸಿಗಲಿದೆ. ಇನ್ನು ಯಾರು ತಮ್ಮ ಪಡಿತರ ಖಾತೆಗೆ KYC ಅಪ್ಡೇಟ್ ಮಾಡಿಕೊಂಡಿಲ್ಲವೋ ಅವರು ಮುಂದಿನ ದಿನಗಳಲ್ಲಿ ಅಕ್ಕಿ ಹಾಗು ಅನ್ನಭಾಗ್ಯ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ. ಸದ್ಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬರಿಗೂ ಈಗ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.