HSRP Number: ರಾಜ್ಯ ಸಾರಿಗೆ ಇಲಾಖೆ ಈಗ ರಾಜ್ಯದ ಎಲ್ಲಾ ವಾಹನ ಸವಾರರಿಗೆ ಹೊಸ ನಿಯಮ ಜಾರಿಗೆ ತಂದಿರುವುದು ನಿಮಗೆಲ್ಲ ತಿಳಿದೇ ಇದೆ. ಹೌದು ರಾಜ್ಯದಲ್ಲಿ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ರಾಜ್ಯ ಸರ್ಕಾರ 2024 ರ ವರ್ಷದಲ್ಲಿ ರಾಜ್ಯದಲ್ಲಿ HSP ನಂಬರ್ ಪ್ಲೇಟ್ ಕಡ್ಡಾಯ ಮಾಡಿತ್ತು. ಸದ್ಯ ಈಗ HSRP ನಂಬರ್ ಪ್ಲೇಟ್ ವಿಷಯವಾಗಿ ರಾಜ್ಯ ಸರ್ಕಾರ ಇನ್ನೊಂದು ಆದೇಶವನ್ನು ಹೊರಡಿಸಿದೆ. ಇನ್ನು ಕೂಡ ಸಾಕಷ್ಟು ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳದೆ ಇರುವುದು ಈಗ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣಗಳಿಂದ ರಾಜ್ಯ ಸಾರಿಗೆ ಇಲಾಖೆ ಈಗ HSRP ನಂಬರ್ ಪ್ಲೇಟ್ ವಿಷಯವಾಗಿ ಇನ್ನೊಂದು ಆದೇಶವನ್ನು ಹೊರಡಿಸಿದೆ.
ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ
ಹೌದು, ವಾಹನಗಳ ಕಳ್ಳತನ ಮತ್ತು ನಕಲಿ ವಾಹನಗಳನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ನಿಯಮವನ್ನು ಜಾರಿಗೆ ತಂದಿತ್ತು ಮತ್ತು ಬಹುತೇಕ ಎಲ್ಲಾ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಹಾಕಿಸಿಕೊಡಿದ್ದಾರೆ. ಸದ್ಯ ಇನ್ನು ಕೂಡ ಸಾಕಷ್ಟು ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳದೆ ಇರುವುದರಿಂದ ರಾಜ್ಯ ಈಗ HSRP ನಂಬರ್ ಪ್ಲೇಟ್ ವಿಷಯವಾಗಿ ಮತ್ತೊಂದು ಆದೇಶ ಹೊರಡಿಸಿದೆ.

ಏಪ್ರಿಲ್ 30 ರೊಳಗೆ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು
ಹೌದು, HSRP ನಂಬರ್ ಪ್ಲೇಟ್ ವಿಷಯವಾಗಿ ಇನ್ನೊಂದು ಆದೇಶ ಹೊರಡಿಸಿಸುವ ರಾಜ್ಯ ಸಾರಿಗೆ ಇಲಾಖೆ ಈಗ ಏಪ್ರಿಲ್ 30 ರ ಒಳಗಾಗಿ ಎಲ್ಲಾ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಆದೇಶವನ್ನು ಹೊರಡಿಸಿದೆ. ಇನ್ನು HSRP ನಂಬರ್ ಪ್ಲೇಟ್ ಅನ್ನು ಏಪ್ರಿಲ್ 30 ಅಳವಡಿಸಿಕೊಳ್ಳದೆ ಇದ್ದರೆ ಅಂತಹ ವಾಹನಗಳ ಮಾಲೀಕರು 1000 ರೂ ದಂಡ ವಿಧಿಸಲು ಆದೇಶ ಹೊರಡಿಸಲಾಗಿದೆ.
ಮೇ 1 ರಿಂದ ಕಟ್ಟಬೇಕು 1000 ರೂ ದಂಡ
ಇನ್ನು ಕೂಡ ವಾಹನಗಳಿಗೆ HSRP ನಂಬರ್ ಪ್ಲೇಟ್ ನಂಬರ್ ಹಾಕಿಸಿಕೊಳ್ಳದೆ ಇರುವವರು ಮೇ ತಿಂಗಳ 1 ನೇ ತಾರೀಕಿನಿಂದ 1000 ರೂ ದಂಡ ಕಟ್ಟಬೇಕು ಎಂದು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗ ಆದೇಶ ಹೊರಡಿಸಿದೆ. ಈಗಾಗಲೇ ಹಲವು ಗಡುವು ನೀಡಿದರೂ ಕೂಡ ಸಾಕಷ್ಟು ವಾಹನಗಳ ಮಾಲೀಕರು ಇನ್ನೂ ಕೂಡ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳದೆ ಇರುವುದರಿಂದ ಸಾರಿಗೆ ಇಲಾಖೆ ಈ ನಿರ್ಧಾರ ತಗೆದುಕೊಂಡಿದೆ. ಅದೇ ರೀತಿಯಲ್ಲಿ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳದೆ ಪದೇಪದೇ ವಾಹನಗಳನ್ನು ರಸ್ತೆಗೆ ತಂದರೆ ಅಂತಹ ವಾಹನಗಳನ್ನು ಸೀಜ್ ಮಾಡುವಂತೆ ಕೂಡ ಆದೇಶ ಹೊರಡಿಸಲಾಗಿದೆ.