ICC Champians Trophy Final Match: ದುಬೈ ನಲ್ಲಿ ನಡೆಯಲಿರುವ ICC Champians Trophy ಫೈನಲ್ ಪಂದ್ಯ ನೋಡಲು ಇಡೀ ವಿಶ್ವವೇ ಕಾದು ಕುಳಿತಿದೆ ಎಂದು ಹೇಳಬಹುದು. ಹೌದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ICC Champians Trophy ಯ ಫೈನಲ್ ಪಂದ್ಯ ನಡೆಯುತ್ತಿದೆ. ಇನ್ನು ಭಾರತ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್ ತಲುಪಿದರೆ ನ್ಯೂಜಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಫೈನಲ್ ತಲುಪಿದೆ.
ನಾಳಿನ ಪಂದ್ಯ ರೋಚಕ ಪಂದ್ಯ ಆಗಿದ್ದು ನಾಳೆ ಯಾರು ವಿನ್ ಆಗುತ್ತಾರೋ ಅವರ ಹೆಗಲಿಗೆ ICC Champians Trophy ಹೋಗಲಿದೆ. ಇದರ ನಡುವೆ ನಾಳೆಯಿಂದ ಪಂದ್ಯದ ಬಗ್ಗೆ ಸಾಕಷ್ಟು ಅನುಮಾನಗಳು ಜನರಲ್ಲಿ ಮೂಡಿದೆ ಎಂದು ಹೇಳಬಹುದು. ಹೌದು ಮಳೆ ಬಂದು ಅಥವಾ ವಾತಾವರಣ ಸರಿ ಇಲ್ಲದ ಕಾರಣ ಪಂದ್ಯ ರದ್ದಾದರೆ ಯಾರು ವಿನ್ ಅನ್ನುವ ಅನುಮಾನ ಈಗ ಎಲ್ಲರಿಗೂ ಕಾಡುತ್ತಿದೆ.
ನಾಳೆ ಮಳೆ ಬಂದರೆ ಯಾರು ICC Champians Trophy ವಿನ್ನರ್ ಆಗಲಿದ್ದಾರೆ
ICC ನಿಯಮದ ಪ್ರಕಾರ ನಾಳಿನ ಫೈನಲ್ ಪಂದ್ಯದಲ್ಲಿ ಮಳೆ ಬಂದರೆ ಆ ಪಂದ್ಯವನ್ನು ನಾಡಿದ್ದು ಆಡಿಸಲಾಗುತ್ತದೆ ಮತ್ತು ICC ಫೈನಲ್ ಪಂದ್ಯಕ್ಕಾಗಿ ಒಂದು ದಿನದ ಗ್ರೇಸ್ ಅವಧಿಯನ್ನು ಈಗ ನಿಗದಿ ಮಾಡಿದೆ. ನಾಳೆ ಒಂದು ಇನ್ನಿಂಗ್ಸ್ ಆದ ನಂತರ ಮಳೆ ಬಂದರೆ ಮಳೆ ಹೋಗುವ ತನಕ ಕಾಯಲಾಗುತ್ತದೆ ಮತ್ತು ಮಳೆ ಮುಂದುವರೆದರೆ ಪಂದ್ಯವನ್ನು ಒಂದು ದಿನಕ್ಕೆ ಮುಂದೂಡಲಾಗುತ್ತದೆ.

ಫೈನಲ್ ಪಂದ್ಯ ಟೈ ಆದರೆ ವಿನ್ನರ್
ICC ನಿಯಮದ ಪ್ರಕಾರ ನಾಳಿನ ಫೈನಲ್ ಪಂದ್ಯ ಟೈ ಆದರೆ ಸೂಪರ್ ಓವರ್ ಆಡಿಸಲಾಗುತ್ತದೆ. ಇನ್ನು ಸೂಪರ್ ಓವರ್ ನಲ್ಲಿ ಕೂಡ ಪಂದ್ಯ ಟೈ ಆದರೆ ಇನ್ನೊಂದು ಸೂಪರ್ ಓವರ್ ಆಡಿಸಲಾಗುತ್ತದೆ. ಹಿಂದೆ ICC ಸೂಪರ್ ಓವರ್ ಪಂದ್ಯ ರದ್ದಾದರೆ ಯಾವ ತಂಡ ಹೆಚ್ಚು ಫೋರ್ ಹೊಡೆದಿರುತ್ತೋ ಆ ತಂಡವನ್ನು ವಿನ್ನರ್ ಎಂದು ಘೋಷಣೆ ಮಾಡುತ್ತಿತ್ತು, ಆದರೆ ಈಗ ಆ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಒಂದುವೇಳೆ ನಾಳಿನ ಪಂದ್ಯ ಎರಡು ಬಾರಿ ಟೈ ಆದರೆ ಮೂರನೇ ಬಾರಿ ಕೂಡ ಸೂಪರ್ ಓವರ್ ಪಂದ್ಯ ಆಡಿಸಲಾಗುತ್ತದೆ.
ನ್ಯೂಜಿಲ್ಯಾಂಡ್ ವಿನ್ ಆದರೆ ಇದು ಅವರಿಗೆ ಚೊಚ್ಚಲ ಟ್ರೋಫಿ
ಹೌದು, ಇಲ್ಲಿಯತನಕ ನ್ಯೂಜಿಲ್ಯಾಂಡ್ ಯಾವುದೇ ICC ಟ್ರೋಫಿ ವಿನ್ ಆಗಿಲ್ಲ. ಭಾರತ ಈಗಾಗಲೇ ಒಂದು ಬಾರಿ ICC Champians Trophy ವಿನ್ ಆಗಿದ್ದು ಈಗ ಮೂರನೇ ಬಾರಿ ICC Champians Trophy ಯಲ್ಲಿ ಫೈನಲ್ ಪ್ರವೇಶ ಪಡೆದುಕೊಂಡಿದೆ. ಕಳೆದಬಾರಿ ಇಂಗ್ಲೆಂಡ್ ವಿರುದ್ಧ ICC ವರ್ಲ್ಡ್ ಕಪ್ ನಲ್ಲಿ ನ್ಯೂಜಿಲ್ಯಾಂಡ್ ಫೈನಲ್ ಪ್ರವೇಶ ಮಾಡಿ ಸೋತಿತ್ತು ಮತ್ತು ಕಳೆದ ವರ್ಲ್ಡ್ ಕಪ್ ಇಂಡಿಯಾ ವಿರುದ್ಧ ಸೆಮಿ ಫೈನಲ್ ನಲ್ಲಿ ಸೋಲು ಅನುಭವಿಸಿತ್ತು. ಸದ್ಯ ಈಗ ಮತ್ತೆ ನ್ಯೂಜಿಲ್ಯಾಂಡ್ ICC Champians Trophy ಯಲ್ಲಿ ಫೈನಲ್ ಪ್ರವೇಶ ಪಡೆದುಕೊಂಡಿದೆ. ನಾಳಿನ ಪಂದ್ಯ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ (Dubai International Stadium) ನಲ್ಲಿ ನಡೆಯಲಿದೆ.
ನಾಳೆ ಬರಲು ಸಾಧ್ಯವೇ ಇಲ್ಲ ಅಂದ ಹವಾಮಾನ ಇಲಾಖೆ
ಹವಾಮಾನ ಇಲಾಖೆಯ ವರದಿಯ ಪ್ರಕಾರ ನಾಳೆ ದುಬೈ ನಲ್ಲಿ ಯಾವುದೇ ಕಾರಣಕ್ಕೂ ಮಳೆ ಬರಲ್ಲ ಎಂದು ತಿಳಿದುಬಂದಿದೆ. ಅದೇ ರೀತಿಯಲ್ಲಿ ನಾಳೆ ಬಿಸಿಲಿನ ತಾಪ ಇನ್ನಷ್ಟು ಹೆಚ್ಚಿರಲಿದ್ದು ಮೊದಲು ಬ್ಯಾಟಿಂಗ್ ಮಾಡುವವರು ಸ್ವಲ್ಪ ಕಷ್ಟ ಅನುಭವಿಸಬೇಕಾಗುತ್ತದೆ. ದುಬೈ ನಲ್ಲಿ ಇಬ್ಬನಿ ಕಡಿಮೆ ಬೀಳುವ ಕಾರಣ ನಾಳೆ ಟಾಸ್ ವಿನ್ ಆಗುವವರು ಫೀಲ್ಡಿಂಗ್ ಆಯ್ಕೆ ಮಾಡುಕೊಳ್ಳುವ ಸಾಧ್ಯತೆ ಹೆಚ್ಚಿದೆ.