Ration Card Karnataka: ಕರ್ನಾಟಕ ರಾಜ್ಯ ಸರ್ಕಾರ ಈಗ BPL ಮತ್ತು APL ರೇಷನ್ ಕಾರ್ಡುಗಳಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹೌದು ರಾಜ್ಯದಲ್ಲಿ ಬಡವರ ಹಾಗೆ ಶ್ರೀಮಂತರು ಕೂಡ BPL ರೇಷನ್ ಕಾರ್ಡುಗಳನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿರುವುದು ಈಗ ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ BPL ಮತ್ತು APL ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮ ಜಾರಿಗೆ ತಂದಿದೆ. ಸದ್ಯ ಹೊಸ ಪಡಿತರ ಕಾರ್ಡುಗಳಿಗೆ ಅರ್ಜಿ ಕರೆಯಲಾಗಿದೆ, ಪಡಿತರ ಚೀಟಿ ಇಲ್ಲದೆ ಇರುವವರು ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.
ಶೀಘ್ರವೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಆರಂಭ
ಹೊಸ ರೇಷನ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಈಗ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು ಹೊಸ ರೇಷನ್ ಕಾರ್ಡುಗಳಿಗೆ ಮತ್ತೆ ಹೊಸ ಅರ್ಜಿ ಕರೆಯಲು ಈಗ ರಾಜ್ಯ ಸರ್ಕಾರ ಮುಂದಾಗಿದೆ. 2025 ರ ವರ್ಷದಲ್ಲಿ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಕರೆಯಲು ಈಗ ರಾಜ್ಯ ಸರ್ಕಾರ ಮುಂದಾಗಿದೆ ಮತ್ತು ಅಗತ್ಯ ದಾಖಲೆ ನೀಡುವುದರ ಮೂಲಕ ಆಸಕ್ತ ಕುಟುಂಬದವರು ಹೊಸ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಏನು ನೋಡಿ
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು ಈ ಕೆಲವು ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು
* ಅರ್ಜಿ ಸಲ್ಲಿಸುವವರ ಆಧಾರ್ ಕಾರ್ಡ್
* ಆದಾಯ ಪ್ರಮಾಣಪತ್ರ
* ವಯಸ್ಸಿನ ಪ್ರಮಾಣಪತ್ರ
* ಡ್ರೈವಿಂಗ್ ಲೈಸೆನ್ಸ್
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಸ್ವಯಂಘೋಷಿತ ಪ್ರಮಾಣಪತ್ರ
ಯಾರು ಯಾರು ಹೊಸ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸಬಹುದು…?
* ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ ಪಡಿತರ ಚೀಟಿಯಿಂದ ಡಿಲೀಟ್ ಆದವರು ಹೊಸ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು.
* ಹೊಸದಾಗಿ ಮದುವೆಯಾದ ದಂಪತಿಗಳು ಕೂಡ ಅರ್ಜಿ ಸಲ್ಲಿಸಬಹುದು.
* ಸರ್ಕಾರೀ ನೌಕರಿಗೆ ಸೇರಿಸವರು ಹೊಸ APL ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು
* BPL ಕಾರ್ಡಿನಿಂದ ಹೊರಬಂದವರು ಹೊಸ APL ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು
ಆಸಕ್ತರು http://www.kar.nic.in ಭೇಟಿ ನೀಡುವುದರ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ನಿಮ್ಮ ಆದಾಯ ಪ್ರಮಾಣಪತ್ರವನ್ನು ಪರಿಗಣನೆ ಮಾಡಿ ನಿಮಗೆ ಪಡಿತರ ಚೀಟಿ ವಿತರಣೆ ಮಾಡಲಾಗುತ್ತದೆ.