PM Awas Yojana: ಸ್ವಂತ ಮನೆ ನಿರ್ಮಾಣ ಮಾಡುವ ಕನಸು ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ, ಆದರೆ ಹಣಕಾಸಿನ ಸಮಸ್ಯೆಯ ಕಾರಣ ಸಾಕಷ್ಟು ಜನರು ಮನೆ ಕಟ್ಟಲಾಗದೆ ಕಷ್ಟಪಡುತ್ತಾರೆ. ಇದರ ನಡುವೆ ಸ್ವಂತ ಮನೆ ಕಟ್ಟುವ ಜನರಿಗೆ ಕೇಂದ್ರ ಸರ್ಕಾರ ಆವಾಸ್ ಯೋಜನೆಯನ್ನು ಜಾರಿಗೆ ತಂದಿತು. ಹೌದು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸ್ವಂತ ಮನೆ ಕಟ್ಟಲು ಸಹಾಯಧನ ನೀಡುವ ನಿಟ್ಟಿನಿಂದ PM ಆವಾಸ್ ಯೋಜನೆಯನ್ನು (PM Awas Yojana) ಜಾರಿಗೆ ತಂದಿದೆ. ಈ PM ಆವಾಸ್ ಯೋಜನೆ ಲಾಭವನ್ನ ಸಾಕಷ್ಟು ಜನರು ಈಗಾಗಲೇ ಪಡೆದುಕೊಂಡಿದ್ದಾರೆ. ಇನ್ನು ಬೇಸರದ ಸಂಗತಿ ಏನು ಅಂದರೆ, ಸಾಕಷ್ಟು ಜನರಿಗೆ ಈ PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಅನ್ನುವುದರ ಬಗ್ಗೆ ಅರಿವು ಇಲ್ಲ.
PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ…?
ಈಗ PM ಆವಾಸ್ ಯೋಜನೆಗೆ ಅರ್ಜಿಯನ್ನು ಬಹಳ ಸುಲಭವಾಗಿ ಸಲ್ಲಿಸಬಹುದಾಗಿದೆ. ಇನ್ನು PM ಆವಾಸ್ ಯೋಜನೆ ಅರ್ಜಿಯನ್ನು ಡಿಜಿಟಲೀಕರಣ ಕೂಡ ಮಾಡಲಾಗಿದೆ.
* ಆಸಕ್ತರು PM ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡುವುದರ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
* ವೆಬ್ಸೈಟ್ ಓಪನ್ ಮಾಡಿದ ನಂತರ ಆವಾಸ್ ಯೋಜನೆಯ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಿಮ್ಮ ಆಧಾರ್ ಸಂಖ್ಯೆ ಕೊಟ್ಟು OTP ನಮೂದಿಸಿ ಲಾಗಿನ್ ಮಾಡಬೇಕು.
* ಆಧಾರ್ OTP ನಮೂದಿಸಿದ ನಂತರ ನೀವು ಬೇಕಾದ ಅಗತ್ಯ ದಾಖಲೆಗಳನ್ನು ಕೂಡ ಸಲ್ಲಿಸಬೇಕಾಗುತ್ತದೆ.
* ಇನ್ನು ನಿಮ್ಮ ಅರ್ಜಿ ಅಪ್ರೋವಲ್ ಆದನಂತರ ನೀವು ಹತ್ತಿರದ ಸೇವಾ ಕೇಂದ್ರ ಅಥವಾ ಹತ್ತಿರದ ಬ್ಯಾಂಕಿಗೆ ಹೋಗಿ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.

ಯಾರು ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಕುಟುಂಬದ ಪುರುಷರು ಮಾತ್ರ ಈ PM ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸುವ ವ್ಯಕ್ತಿ ಭಾರತದ ನಿವಾಸಿಯಾಗಿರಬೇಕು ಮತ್ತು ವರ್ಷ 18 ವರ್ಷದಿಂದ 70 ವರ್ಷದ ಒಳಗೆ ಇರಬೇಕು.
* ಇನ್ನು ಅರ್ಜಿ ಸಲ್ಲಿಸುವರು ಯಾವುದೇ ಸರ್ಕಾರೀ ಯೋಜನೆಯಿಂದ ಮನೆ ಕಟ್ಟಲು ಸಹಾಯಧನವನ್ನು ಪಡೆದಿರಬಾರದು.
* ಈ ಯೋಜನೆಯ ಅರ್ಜಿ ಸಲ್ಲಿಸುವ ಮನೆ ಮಾಲೀಕತ್ವ ಮಹಿಳೆಯ ಹೆಸರಿನಲ್ಲಿ ಇರಬೇಕು.
* ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ಮಾಸಿಕ ಆದಾಯ 10 ಸಾವಿರಕ್ಕಿತ ಕಡಿಮೆ ಇರಬೇಕು.
* ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯ ಮತ್ತು APL ಕಾರ್ಡ್ ಇದ್ದವರು ಈ ಯೋಜನೆಯ ಲಾಭ ಪಡೆಯಲು ಅರ್ಹರು ಆಗಿರುವುದಿಲ್ಲ.
* ಆರ್ಥಿಕವಾಗಿ ಸಬಲರಲ್ಲದವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಿ
PM ಆವಾಸ್ ಯೋಜನೆಗೆ ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. BPL ರೇಷನ್ ಕಾರ್ಡ್ ಮತ್ತು ಆದಾಯ ಪ್ರಮಾಣಪತ್ರ ನೀಡಿ ಅರ್ಜಿ ಸಲ್ಲಿಸಬಹುದು. ನೀವು ಸಲ್ಲಿಸಿದ ಅರ್ಜಿ ಪರಿಶೀಲನೆ ಮಾಡಿದ ನಂತರ ನೀವು ಈ ಯೋಜನೆಗೆ ಅರ್ಹತೆ ಪಡೆದುಕೊಂಡಿದೀರಾ ಅಥವಾ ಇಲ್ಲವಾ ಅನ್ನುವುದನ್ನು ನಿರ್ಧಾರ ಮಾಡಲಾಗುತ್ತದೆ.