Sukanya samriddhi Yojana: ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಪ್ರಗತಿ ಮತ್ತು ಅವರ ಸಬಲೀಕರಣದ ಉದ್ದೇಶದಿಂದ ದೇಶದಲ್ಲಿ ಮತ್ತು ರಾಜ್ಯದಲ್ಲಿ ಈಗಾಗಲೇ ಹಲವು ಹೊಸ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ಅಂಚೆ ಕಚೇರಿ ಮತ್ತು ಬ್ಯಾಂಕುಗಳಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಆ ಯೋಜನೆಗಳ ಲಾಭ ಜನರು ಕೂಡ ಪಡೆದುಕೊಳ್ಳುತ್ತಿದ್ದಾರೆ.
ಸದ್ಯ ಪೋಸ್ಟ್ ಆಫೀಸ್ ಜಾರಿಯಲ್ಲಿ ಇರುವ ಕೇಂದ್ರದ ಈ ಯೋಜನೆಯ ಅಡಿಯಲ್ಲಿ 3000 ರೂ ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಿದರೆ ಬರೋಬ್ಬರಿ 16 ಲಕ್ಷ ರೂ ಲಾಭ ಪಡೆದುಕೊಳ್ಳಬಹುದು. ಹಾಗಾದರೆ ಹೆಣ್ಣು ಮಗುವಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಯಾವುದು ಮತ್ತು ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.
ಹೆಣ್ಣು ಮಗುವಿಗಾಗಿ ಜಾರಿಗೆ ಬಂತು ಸುಕನ್ಯಾ ಸಮೃದ್ಧಿ ಯೋಜನೆ
ಹೌದು, ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯ ಮತ್ತು ಅವರ ಶಿಕ್ಷಣ ಹಾಗು ಮದುವೆಯ ಉದ್ದೇಶದಿಂದ ಈ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya samriddhi Scheme) ದೇಶದಲ್ಲಿ ಜಾರಿಗೆ ತಂದಿದೆ. ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ಹೆಣ್ಣು ಮಕ್ಕಳ ಪೋಷಕರು ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದು. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಪೋಷಕರು ಹೆಣ್ಣು ಮಗುವಿನ ಹೆಸರಿನಲ್ಲಿ ಕೆಲವು ವರ್ಷಗಳ ಹಣವನ್ನು ಹೂಡಿಕೆ ಮಾಡಿದರೆ ಯೋಜನೆಯ ಮುಕ್ತಾಯದ ಸಮಯದಲ್ಲಿ ದೊಡ್ಡ ಮೊತ್ತ ಲಾಭ ಪಡೆದುಕೊಳ್ಳಬಹುದು.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 3000 ರೂ ಇಟ್ಟರೆ ಸಿಗಲಿದೆ 16 ಲಕ್ಷ
ಹೌದು, ಪೋಸ್ಟ್ ಆಫೀಸ್ ಈ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಕೇವಲ 3000 ರೂ ಹೂಡಿಕೆ ಮಾಡುವುದರ ಮೂಲಕ ಯೋಜನೆಯ ಮುಕ್ತಾಯದ ಅವಧಿಯಲ್ಲಿ ಬರೋಬ್ಬರಿ 16 ಲಕ್ಷ ರೂ ಲಾಭ ಪಡೆದುಕೊಳ್ಳಬಹುದು. ಈ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಪೋಷಕರು ಹೆಣ್ಣು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಿದರೆ ಹಣಕ್ಕೆ ಬರೋಬ್ಬರಿ 8.2 % ಬಡ್ಡಿ ನೀಡಲಾಗುತ್ತದೆ. ಇನ್ನು ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 3000 ರೂಪಾಯಿಯನ್ನು 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ನೀವು ಯೋಜನೆಯ ಮುಕ್ತಾಯದ ಸಮಯದಲ್ಲಿ ಬರೋಬ್ಬರಿ 16 ಲಕ್ಷ ರೂ ಲಾಭ ಗಳಿಸಿಕೊಳ್ಳಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮಗಳು
* ಪೋಷಕರು ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಬಹುದು.
* ಈ ಯೋಜನೆಯಲ್ಲಿ ಕನಿಷ್ಠ ಪ್ರತಿ ತಿಂಗಳು 250 ರೂ ಹೂಡಿಕೆ ಮಾಡಬಹುದು ಮತ್ತು ಗರಿಷ್ಠವಾಗಿ 1.5 ಲಕ್ಷ ರೂ ತನಕ ಹೂಡಿಕೆ ಮಾಡಬಹುದು.
* ಹೆಣ್ಣು ಮಗುವಿನ ಹತ್ತು ವರ್ಷ ಪೂರ್ಣಗೊಂಡ ನಂತರ ಈ ಯೋಜನೆಯಲ್ಲಿ ಖಾತೆ ತೆರೆಯಬಹುದಾಗಿದೆ.
* ನೀವು ಮಾಡಿದ ಹೂಡಿಕೆಯ ಆಧಾರದ ಮೇಲೆ ನೀವು ಈ ಯೋಜನೆಯಲ್ಲಿ ಹೆಚ್ಚು ಲಾಭ ಗಳಿಸಬಹುದು.
* ಯೋಜನೆಯ ಮುಕ್ತಾಯದ ಅವಧಿ 21 ವರ್ಷ ಆಗಿದೆ ಮತ್ತು 21 ವರ್ಷದ ನಂತರ ಬಡ್ಡಿ ಸಮೇತ ಸಂಪೂರ್ಣ ಹಣ ಪಡೆದುಕೊಳ್ಳಬಹುದು.
* ಪೋಸ್ಟ್ ಆಫೀಸ್ ಮತ್ತು ಎಲ್ಲಾ ಬ್ಯಾಂಕುಗಳಲ್ಲಿ ಈ ಯೋಜನೆಯ ಖಾತೆ ತೆರೆಯಬಹುದು.
* ಒಂದು ಕುಟುಂಬದ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಈ ಯೋಜನೆಯ ಖಾತೆ ತೆರೆಯಬಹುದು. ಮೂರನೇ ಮಗುವಿನ ಹೆಸರಿನಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ.
* ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಈ ಯೋಜನೆಯ ಅರ್ಧದಷ್ಟು ಹಣವನ್ನು ನೀವು ಹಿಂಪಡೆದು ಅದನ್ನು ಆ ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ಬಳಸಿಕೊಳ್ಳಬಹುದು.