UIDAI Rules: ಕೇಂದ್ರ ಸರ್ಕಾರ ಈಗ ಆಧಾರ್ ಕಾರ್ಡಿಗೆ (Aadhaar Card) ಸಂಬಂಧಿಸಿದಂತೆ ಹಲವು ನಿಯಮಗಳನ್ನು ದೇಶದಲ್ಲಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಹೌದು, ದೇಶದಲ್ಲಿ ಬಹುತೇಕ ಯಾವುದೇ ಕೆಲಸ ಮಾಡಬೇಕು ಅಂದರೂ ಕೂಡ ಅದಕ್ಕೆ ಆಧಾರ್ ಕಾರ್ಡ್ ಬೇಕೇಬೇಕು. ಇನ್ನು ಸಾಕಷ್ಟು ಜನರು ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಕೇಂದ್ರ ಜಾರಿಗೆ ತಂದಿರುವ ಹಲವು ನಿಯಮಗಳ ಬಗ್ಗೆ ಗಮನ ಕೊಡುತ್ತಿಲ್ಲ.
ಸದ್ಯ UIDAI ಈಗ ಮತ್ತೆ ಆಧಾರ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ದೇಶದಲ್ಲಿ ಜಾರಿಗೆ ತಂದಿದೆ. ಕೇಂದ್ರದ ಆದೇಶದ ಪ್ರಕಾರ ಸರ್ಕಾರೀ ಕೆಲಸ ಮತ್ತು ಇತರೆ ಯಾವುದೇ ಕೆಲಸಗಳಿಗೆ ಆಧಾರ್ ಕಾರ್ಡ್ ಬಳಕೆ ಮಾಡುವವರು ತಕ್ಷಣ ಈ ಕೆಲಸ ಪೂರ್ಣಗೊಳಿಸಿಕೊಳ್ಳಬೇಕು ಎಂದು ದೇಶ ಹೊರಡಿಸಿದೆ.

ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಿ
ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಈಗ UIDAI ಹೊಸ ಆದೇಶ ಹೊರಡಿಸಿದೆ ಮತ್ತು ಇಂತಹ ಜನರು ತಕ್ಷಣ ತಮ್ಮ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕು ಎಂದು ತಿಳಿಸಿದೆ. ಒಂದುವೇಳೆ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳದೆ ಇದ್ದರೆ ಅಂತಹ ಜನರ ಆಧಾರ್ ಕಾರ್ಡ್ ರದ್ದು ಮಾಡುವಂತೆ ಆದೇಶ ಹೊರಡಿಸಲಾಗಿದೆ. ಸಾಕಷ್ಟು ಜನರು ತಮ್ಮ ಹಳೆಯ ಆಧಾರ್ ಕಾರ್ಡನ್ನು ಇನ್ನೂ ಕೂಡ ಒಂದು ಬಾರಿಯೂ ನವೀಕರಣ ಮಾಡಿಕೊಂಡಿಲ್ಲ.
ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ರದ್ದು
UIDAI ನೀಡಿರುವ ಮಾಹಿತಿಯ ಪ್ರಕಾರ ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಬಳಕೆ ಮಾಡುವವರು ತಕ್ಷಣ ತಮ್ಮ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ಅನ್ನುವುದು ದೇಶದ ಪ್ರಮುಖ ಗುರುತಿನ ಚೀಟಿಯಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ವಂಚನೆ ಕೂಡ ಹೆಚ್ಚಾಗಿದೆ.
ಈ ಕಾರಣಗಳಿಂದ UIDAI ಈಗ ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಯಾರು ಯಾರು ಬಳಕೆ ಮಾಡುತ್ತಿದ್ದರೂ ಅವರು ತಮ್ಮ ಫೋಟೋ, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಮತ್ತೊಮ್ಮೆ ಅಪ್ಡೇಟ್ ಮಾಡಿಕೊಳ್ಳಬೇಕು. ಇನ್ನು ಹತ್ತು ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳದೆ ಇದ್ದರೆ ಅಂತಹ ಆಧಾರ್ ಕಾರ್ಡನ್ನು ರದ್ದು ಮಾಡಲು UIDAI ಆದೇಶ ಹೊರಡಿಸಿದೆ. ಇನ್ನು ಒಮ್ಮೆ ಆಧಾರ್ ಕಾರ್ಡ್ ರದ್ದಾದರೆ ಮತ್ತೆ ಆ ಕಾರ್ಡನ್ನು ಸಕ್ರಿಯ ಮಾಡಲು ಸಾಧ್ಯವಿಲ್ಲ.
130 ರೂಪಾಯಿ ಶುಲ್ಕ ಪಾವತಿ ಮಾಡಬೇಕು
UIDAI ನೀಡಿರುವ ಮಾಹಿತಿಯ ಪ್ರಕಾರ ಆಧಾರ್ ಕಾರ್ಡ್ ನವೀಕರಣ ಮಾಡಿಸಿಕೊಳ್ಳುವವರು ಕೆಲವು ಸರ್ಕಾರೀ ಶುಲ್ಕ ಪಾವತಿ ಮಾಡಬೇಕು. ಹೌದು ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳುವವರು ಬಯೋಮೆಟ್ರಿಕ್ ಶುಲ್ಕವಾಗಿ 50 ರೂಪಾಯಿ, ದಾಖಲೆ ನವೀಕರಣ ಶುಲ್ಕಕ್ಕೆ 50 ರೂಪಾಯಿ ಮತ್ತು ಆಧಾರ್ ಡೌನ್ಲೋಡ್ ಮತ್ತು ಮುದ್ರಣಕ್ಕೆ 30 ರೂ ಸೇರಿದಂತೆ ಒಟ್ಟಾರೆಯಾಗಿ 130 ರೂ ಶುಲ್ಕ ಪಾವತಿ ಮಾಡಬೇಕು.