Top 7 Banks For FD Scheme: ಈಗಿನ ಕಾಲದಲ್ಲಿ ಬಹುತೇಕ ಎಲ್ಲಾ ಜನರು ತಮ್ಮ ಭವಿಷ್ಯದ ಉದ್ದೇಶದಿಂದ FD ಯೋಜನೆಯಲ್ಲಿ (Fixed Deposit Scheme) ಹೆಚ್ಚು ಹಣ ಹೂಡಿಕೆ ಮಾಡಲು ನಿರ್ಧಾರ ಮಾಡುತ್ತಿದ್ದಾರೆ. ಹೌದು FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಹೂಡಿಕೆ ಮಾಡಿದ ಹಣಕ್ಕೆ ಗ್ಯಾರೆಂಟಿ ಇರುತ್ತದೆ ಮತ್ತು ಉತ್ತಮವಾದ ಬಡ್ಡಿ ಕೂಡ ಸಿಗುತ್ತದೆ ಅನ್ನುವ ಕಾರಣಕ್ಕೆ ಜನರು ಹೆಚ್ಚು ಹೆಚ್ಚು ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ನಾವು ನೀವೆಲ್ಲ ಗಮನಿಸಬಹುದು.
ಅದೇ ರೀತಿಯಲ್ಲಿ ಬ್ಯಾಂಕುಗಳು ಕೂಡ ಗ್ರಾಹಕರ FD ಹಣದ ಮೇಲೆ ಬೇರೆಬೇರೆ ರೀತಿಯಲ್ಲಿ ಬಡ್ಡಿ ನೀಡುತ್ತಿದೆ. ಇದರ ನಡುವೆ ಸಾಕಷ್ಟು ಜನರಿಗೆ ಯಾವ ಬ್ಯಾಂಕಿನಲ್ಲಿ FD ಇಟ್ಟರೆ ಹೆಚ್ಚು ಬಡ್ಡಿ ಸಿಗಲಿದೆ ಅನ್ನುವ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾದರೆ ಯಾವ ಬ್ಯಾಂಕಿನಲ್ಲಿ FD ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈಗ ತಿಳಿಯೋಣ.
ಈ 7 ಬ್ಯಾಂಕುಗಳು FD ಹಣದ ಮೇಲೆ ಹೆಚ್ಚು ಬಡ್ಡಿ ನೀಡುತ್ತದೆ.
ಹೌದು, ನಾವು FD ಯೋಜನೆಯಲ್ಲಿ ಹೂಡಿಕೆ ಮಾಡುವ ಯಾವ ಬ್ಯಾಕ್ FD ಮೇಲೆ ಹೆಚ್ಚು ಬಡ್ಡಿ ನೀಡುತ್ತದೆ ಅನ್ನುವುದನ್ನು ತಿಳಿದುಕೊಂಡು FD ಯೋಜನೆಯಲ್ಲಿ ಹೂಡಿಕೆ ಮಾಡಬೇಕು. RBI ನೀಡಿರುವ ಮಾಹಿತಿಯ ಪ್ರಕಾರ ಈ 7 ಬ್ಯಾಂಕುಗಳಲ್ಲಿ ನಾವು FD ಯೋಜನೆಯಲ್ಲಿ 3 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಬಡ್ಡಿ ಪಡೆದುಕೊಳ್ಳಬಹುದು.

HDFC ಬ್ಯಾಂಕ್ ನಲ್ಲಿ FD ಇಟ್ಟರೆ ಸಿಗಲಿದೆ ಅಧಿಕ ಬಡ್ಡಿ (HDFC Bank FD Rate)
ಭಾರತದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ HDFC ಬ್ಯಾಂಕ್ ಈಗ 3 ವರ್ಷಗಳ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದ ಮೊತ್ತದ ಮೇಲೆ 7% ಬಡ್ಡಿ ನೀಡುತ್ತದೆ ಮತ್ತು ಹಿರಿಯ ನಾಗರಿಕರು 7.5% ಬಡ್ಡಿ ನೀಡುತ್ತದೆ.
ICICI ಬ್ಯಾಂಕಿನ FD ಬಡ್ಡಿ ಕೂಡ ಹೆಚ್ಚಿದೆ (ICICI Bank FD Rate)
ಭಾರತದ ಇನ್ನೊಂದು ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಆಗಿರುವ ICICI ಬ್ಯಾಂಕ್ ಕೂಡ 3 ವರ್ಷಗಳ ಕಾಲ FD ಇಡುವವರಿಗೆ 7% ಬಡ್ಡಿ ನೀಡುತ್ತದೆ ಮತ್ತು ಹಿರಿಯ ನಾಗರಿಕರಿಗೆ 7.5% ರಷ್ಟು ಬಡ್ಡಿ ನೀಡುತ್ತದೆ.
ಕೋಟಕ್ ಮಹಿಂದ್ರಾ ಬ್ಯಾಂಕಿನ FD ದರ ಈ ರೀತಿ ಇದೆ (Kotak Mahindra Bank FD Rate)
ಕೋಟಕ್ ಮಹಿಂದ್ರಾ ಬ್ಯಾಂಕ್ ಕೂಡ FD ಮೇಲೆ ಹೆಚ್ಚಿನ ಬಡ್ಡಿ ನೀಡುತ್ತದೆ. 3 ವರ್ಷಗಳ FD ಯೋಜನೆಗೆ 7% ಮತ್ತು ಹಿರಿಯ ನಾಗರಿಕರಿಗೆ 7.6% ನಲ್ಲಿ ಬಡ್ಡಿ ನೀಡಲಾಗುತ್ತದೆ.
ಫೆಡರಲ್ ಬ್ಯಾಂಕ್ ಕೂಡ ಹೆಚ್ಚಿನ ಬಡ್ಡಿ ನೀಡುತ್ತದೆ (Federal Bank FD Rate)
ಇನ್ನೊಂದು ಪ್ರತಿಶಿತ ಖಾಸಗಿ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್ ಕೂಡ FD ಇರುವವರಿಗೆ 3 ವರ್ಷಗಳ ಅವಧಿಗೆ 7.1% ಮತ್ತು ಹಿರಿಯ ನಾಗರಿಕರಿಗೆ 7.6% ಬಡ್ಡಿ ನೀಡುತ್ತದೆ,
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರ (SBI FD Rate)
ದೇಶದ ಅತೀ ದೊಡ್ಡ ಸರ್ಕಾರೀ ಬ್ಯಾಂಕ್ ಅನಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಕೂಡ ಗ್ರಾಹಕರಿಗೆ FD ಮೇಲೆ ಹೆಚ್ಚಿನ ಬಡ್ಡಿ ನೀಡುತ್ತದೆ. 3 ವರ್ಷಗಳ ಕಾಲ FD ಇಡುವವರಿಗೆ 6.75% ಮತ್ತು ಹಿರಿಯ ನಾಗರಿಕರಿಗೆ 7.25% ಬಡ್ಡಿ ನೀಡುತ್ತದೆ.
ಬ್ಯಾಂಕ್ ಆಫ್ ಬರೋಡಾ ಬಡ್ಡಿ ಈ ರೀತಿ ಇದೆ Bank O Baroda FD Rate)
ಇನ್ನೊಂದು ಸರ್ಕಾರೀ ಸ್ವಾಮ್ಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ 3 ವರ್ಷಗಳ ಕಾಲ FD ಇಡುವವರಿಗೆ 7.15% ಮತ್ತು ಹಿರಿಯ ನಾಗರಿಕರಿಗೆ 7.65% ಅಡಿಯಲ್ಲಿ ಬಡ್ಡಿ ನೀಡುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರ (Union Bank Of India FD Rate)
ಇನ್ನೊಂದು ಖಾಸಗಿ ಬ್ಯಾಂಕ್ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಾಮಾನ್ಯರಿಗೆ 6.7% ಮತ್ತು ಹಿರಿಯ ನಾಗರಿಕರಿಗೆ 7.2% ಬಡ್ಡಿಯಲ್ಲಿ 3 ವರ್ಷಗಳಿಗೆ ನೀಡುತ್ತದೆ.