Dharmasthala: ಧರ್ಮಸ್ಥಳ ಹಿಂದೂ ದೇವಸ್ಥಾನನ ಅಥವಾ ಜೈನ ದೇವಸ್ಥಾನ…? ಐತಿಹಾಸಿಕ ಮಾಹಿತಿಯಲ್ಲಿ ಏನಿದೆ ನೋಡಿ

History Of Dharmasthala Manjunatha Temple: ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೇಶದ ಪವಿತ್ರ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ (Shree Kshetra Dharmasthala) ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹೌದು Sameer MD ಅನ್ನುವ Youtuber ಧರ್ಮಸ್ಥಳ ಸೌಜನ್ಯ ವಿಚಾರವಾಗಿ ವಿಡಿಯೋ ಶೇರ್ ಮಾಡಿದ ನಂತರ ಸಾಕಷ್ಟು ಜನರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ವಿಷಯವಾಗಿ ಸಾಕಷ್ಟು ಪ್ರಶ್ನೆ ಮೂಡಿದೆ ಎಂದು ಹೇಳಬಹುದು. Dhootha Sameer MD ಅನ್ನುವ Youtube ಚಾನೆಲ್ ನಲ್ಲಿ ಸಮೀರ್ ಅನ್ನುವ Youtuber ಧರ್ಮಸ್ಥಳ ದೇವಸ್ಥಲ ಜೈನ ದೇವಸ್ಥಾನ ಎಂದು ಹೇಳಿ ಅದಕ್ಕೆ ಸಾಕ್ಷಿ ಕೂಡ ತೋರಿಸಿದ್ದಾರೆ.

WhatsApp Group Join Now
Telegram Group Join Now

ವೈರಲ್ ಆಗಿದೆ Dhootha sameer MD Youtube ವಿಡಿಯೋ
ಹೌದು, ಧರ್ಮಸ್ಥಳ ಸೌಜನ್ಯ (Dharmasthala Soujanya) ಪ್ರಕರಣಕ್ಕೆ ಸಂಬಂಧಿಸಿದಂತೆ Dhootha Sameer MD ಅನ್ನುವ Youtube ಚಾನೆಲ್ ನಲ್ಲಿ ವಿಡಿಯೋ ಶೇರ್ ಮಾಡಲಾಗಿದೆ ಮತ್ತು ವಿಡಿಯೋ ಸುಮಾರು 2 ಕೋಟಿ ವೀಕ್ಷಣೆ ಕೂಡ ಕಂಡಿದೆ. ಇನ್ನು Dhootha Sameer MD ಅವರು ಈ ವಿಡಿಯೋದಲ್ಲಿ ಧರ್ಮಸ್ಥಳ ದೇವಸ್ಥಾನ ಜೈನ ದೇವಾಲಯ ಎಂದು ಹೇಳಿ ಅದಕ್ಕೆ ಸಾಕ್ಷಿ ಕೂಡ ತೋರಿಸಿದ್ದಾರೆ. ಇನ್ನು ಸಮೀರ್ MD ಅವರ ಈ ವಿಡಿಯೋ ನೋಡಿ ಸಾಕಷ್ಟು ಧರ್ಮದ ವಿಷಯವಾಗಿ ವಿರೋಧ ಕೂಡ ವ್ಯಕ್ತಪಡಿಸಿದ್ದರು. ಸದ್ಯ ಈ ನಡುವೆ ಧರ್ಮಸ್ಥಳ ಮಂಜುನಾಥನ ದೇವಸ್ಥಾನ ಹಿಂದೂ ದೇವಸ್ಥಾನನ ಅಥವಾ ಜೈನ ದೇವಾಲಯನ ಅನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.

History of dharmasthala temple
complete deails about dharmasthala manjunathaa temple

ಧರ್ಮಸ್ಥಳ ಹಿಂದೂ ದೇವಸ್ಥಾನನ ಅಥವಾ ಜೈನ ದೇವಸ್ಥಾನನ
ಕೋಟ್ಯಾಂತರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿರುವ ಧರ್ಮಸ್ಥಳ ದೇವಸ್ಥಾನ ಸುಮಾರು 800 ವರ್ಷಗಳ ಇತಿಹಾಸವನ್ನು ಕೂಡ ಹೊಂದಿದೆ. ಇನ್ನು ಧರ್ಮಸ್ಥಳದಲ್ಲಿ ಕೇವಲ ಮಂಜುನಾಥನ ದೇವಸ್ಥಾನ ಮಾತ್ರವಲ್ಲದೆ ಹಲವು ಶಾಲೆ ಮತ್ತು ಕಾಲೇಜು, ಧರ್ಮ ಪೀಠಗಳು ಮತ್ತು ಆಸ್ಪತ್ರೆಗಳು ಕೂಡ ಇರುವುದನ್ನು ನಾವು ನೋಡಬಹುದು.

ಇತಿಹಾಸದ ಪ್ರಕಾರ, ಸುಮಾರು 800 ವರ್ಷಗಳ ಹಿಂದೆ ಜೈನ ಬಂಟ ಸಮುದಾಯ ಈ ದೇವಸ್ಥಾನ ಸ್ಥಾಪನೆ ಮಾಡಿತು. ಇನ್ನು ಧರ್ಮಸ್ಥಳದಲ್ಲಿ ಮುಖ್ಯವಾಗಿ ಧರ್ಮಪಾಲಕ ಮಂಜುನಾಥ ಸ್ವಾಮಿಯನ್ನು ಆರಾಧನೆ ಮಾಡಲಾಗುತ್ತದೆ. ಈ ಧರ್ಮ ಕ್ಷೇತ್ರದಲ್ಲಿ ಪ್ರತಿನಿತ್ಯ ಹಲವು ಧರ್ಮ ಕಾರ್ಯ ನಡೆಯುತ್ತದೆ ಮತ್ತು ಪ್ರತಿನಿತ್ಯ ಸಾವಿರಾರು ಈ ಪ್ರಸಾದದ ಊಟವನ್ನು ಸೇವನೆ ಮಾಡುತ್ತಾರೆ. ಇನ್ನು ಈ ದೇವಸ್ಥಾನದ ಪವಿತ್ರ ನದಿಯಾದ ನೇತ್ರಾವತಿ ನದಿಯ ತಪ್ಪಲಿನಲ್ಲಿ ಇರುವುದನ್ನು ಕೂಡ ನಾವು ನೋಡಬಹುದು.

ಇನ್ನು ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳ ಕ್ಷೇತ್ರ ಹಿಂದೆ “ಕಡುಮ” ಅನ್ನುವ ಹೆಸರಿನಲ್ಲಿ ಕರೆಯಲ್ಪಡುತ್ತಿತ್ತು ಎಂದು ಹೇಳಲಾಗುತ್ತಿದೆ. ಐತಿಹಾಸಿಕ ಮೂಲಗಳ ಪ್ರಕಾರ ಡಿ ಧರ್ಮಸ್ಥಳ ದೇವಾಸ್ಥವನ್ನು ಜೈನ ಧರ್ಮದ ನೆಲ್ಯಾಡಿ ನೀಡು ಅನ್ನುವ ಮನೆಯಲ್ಲಿ ಧರ್ಮನಿಷ್ಠನಾಗಿ ವಾಸವಾಗಿದ್ದ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಳ್ಳಾಲಿ ಅನುವ ದಂಪತಿಗಳು ತಮ್ಮ ಕನಸಿನಲ್ಲಿ ದೈವಗಳು ಬಂತು ನಾವು ಇಲ್ಲಿ ನೆಲೆಸುತ್ತೇವೆ ಮತ್ತು ಇಲ್ಲಿ ನಮಗೆ ಗುಡಿ ಕಟ್ಟಿಸಿಕೊಂಡು ಧರ್ಮ ಕಾಪಾಡಿದರೆ ನಿಮಗೆ ನಾವು ಸಕಲ ಇಷ್ಟಾರ್ಥಗಳ ನೀಡುತ್ತೇವೆ ಎಂದು ಹೇಳಿದ ನಂತರ ಈ ದಂಪತಿಗಳು ಧರ್ಮಸ್ಥಳದಲ್ಲಿ ಧರ್ಮ ದೇವತೆಗಳು ಗೂಡು ಕಟ್ಟಿಸುತ್ತಾರೆ.

ಈ ಈ ದೈವಗಳಿಗೆ ಬ್ರಾಹ್ಮಣರಿಂದ ಪೂಜೆ ಕೂಡ ಮಾಡಿಸಲಾಗುತ್ತಿತ್ತು, ಇದಾದ ನಂತರ ಶಿವಯೋಗಿಯೊಬ್ಬರು ಇಲ್ಲಿ ಶಿವಲಿಂಗ ಸ್ಥಾಪನೆ ಮಾಡಬೇಕು ಎಂದು ಹೇಳಿದರೆ ಕದ್ರಿಯಿಂದ ಶಿವಲಿಂಗವನ್ನು ಅಣ್ಣಪ್ಪ ಸ್ವಾಮಿಯ ಉಪಸ್ಥಿತಿಯಲ್ಲಿ ತಂದು ಪೂಜೆ ಮಾಡಲಾಗುತ್ತದೆ. ಇನ್ನು ಅತ್ಯಂತ ಪುರಾತನವಾಗಿದ್ದ ಈ ದೇವಸ್ಥಾನಕ್ಕೆ ಈ ಹಿಂದೆ ಗರ್ಭಗುಡಿಯ ಒಳಗೆ ವೈಷ್ಣವ ಬ್ರಾಹ್ಮಣರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶ ಕೂಡ ಇರಲಿಲ್ಲ. ಇನ್ನು ಐತಿಹಾಸಿಕ ವರದಿಯ ಪ್ರಕಾರ ಜೈನ ಬಂಟ ಸಮುದಾಯದವರು ನಿರ್ಮಾಣ ಮಾಡಿದ ಈ ದೇವಾಲಯ ವೈಷ್ಣವ ಬ್ರಾಹ್ಮಣರು ಪೂಜೆ ಮಾಡುವ ಏಕೈಕ ಕ್ಷೇತ್ರ ಎಂದು ಹೇಳಬಹುದು.

Leave a Comment