Honda Mileage Bike: ಭಾರತದಲ್ಲಿ ಈಗ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು. ಪ್ರತಿಯೊಬ್ಬರೂ ಕೂಡ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಲು ಇಷ್ಟಪಡುತ್ತಿದ್ದಾರೆ. ಇದರ ನಡುವೆ ಜನರು ಯಾವ ಬೈಕ್ ಹೆಚ್ಚು ಮೈಲೇಜ್ ಕೊಡುತ್ತೋ ಅಂತಹ ಬೈಕ್ ಖರೀದಿ ಮಾಡುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಬೈಕ್ ಪ್ರಿಯರು ಹೆಚ್ಚು ಹೆಚ್ಚು ಮೈಲೇಜ್ ಕೊಡುವ ಬೈಕ್ ಹುಡುಕುವ ಕಾರಣ ವಾಹನ ತಯಾರಕ ಕಂಪನಿ ಗಳು ತಮ್ಮ ವಾಹನಗಳ ಮೈಲೇಜ್ ಹೆಚ್ಚಳ ಮಾಡುವ ವಿಷಯವಾಗಿ ಹೆಚ್ಚು ಗಮನ ಕೊಡುತ್ತಿದೆ.
ಇನ್ನು ಹೋಂಡಾ ಕಂಪನಿಯ ಈ ಬೈಕ್ ಖರೀದಿ ಮಾಡಿದರೆ ನೀವು ಉತ್ತಮ ಮೈಲೇಜ್ ಪಡೆದುಕೊಳ್ಳಬಹುದು. ಹೌದು ಈ ಹೋಂಡಾ ಬೈಕ್ ಗೆ ಒಮ್ಮೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದರೆ 700 Km ತನಕ ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣ ಮಾಡಬಹುದು. ಹಾಗಾದರೆ ಈ ಹೋಂಡಾ ಬೈಕ್ ಯಾವುದು ಮತ್ತು ಈ ಬೈಕ್ ಬೆಲೆ ಮತ್ತು ಮೈಲೇಜ್ ಎಷ್ಟು ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

ಹೋಂಡಾ SP 125 ಬೈಕ್ ಖರೀದಿಗೆ ಜನರು ಫಿದಾ
ಹೌದು, ಹೋಂಡಾ ಕಂಪನಿಯ ಹೋಂಡಾ SP 125 ಬೈಕ್ ದೇಶದಲ್ಲಿ ದಾಖಲೆಯ ಮಾರಾಟ ಆಗುತ್ತಿರುವುದನ್ನು ನಾವು ನೀವೆಲ್ಲರೂ ನೋಡಬಹುದಾಗಿದೆ. ಇನ್ನು ಹೋಂಡಾ SP 125 ಬೈಕ್ Ex-Showroom ಬೆಲೆ 84 ಸಾವಿರ ರೂ ಆಗಿದ್ದು ನೀವು 89 ರೂಪಾಯಿಯ ಒಳಗೆ ಈ ಬೈಕ್ ಖರೀದಿ ಮಾಡಬಹುದು. ಇನ್ನು ಹೋಂಡಾ SP 125 ಬೈಕ್ ನೀವು ಹಲವು ವೇರಿಯೆಂಟ್ ಗಳಲ್ಲಿ ಖರೀದಿ ಮಾಡಬಹುದಾಗಿದೆ. ಹೌದು ಹೋಂಡಾ SP 125 ಬೈಕ್ ನಿಮಗೆ ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಎರಡರಲ್ಲೂ ಲಭ್ಯವಿದೆ.
ಹೋಂಡಾ SP 125 ಬೈಕ್ ಬೆಲೆ ಮತ್ತು ಮೈಲೇಜ್
ಹೋಂಡಾ SP 125 ಬೆಲೆ 1 ಲಕ್ಷ ರೂಪಾಯಿ ಆಗಿದೆ ಮತ್ತು ನೀವು 5000 ರೂ ಡೌನ್ ಪೇಮೆಂಟ್ ಮಾಡುವುದರ ಮೂಲಕ ಬೈಕ್ ಖರೀದಿ ಮಾಡಬಹುದು. ಇನ್ನು ಹೋಂಡಾ SP 125 ಬೈಕ್ ಸುಮಾರು 65 Km ಮೈಲೇಜ್ ಕೊಡುತ್ತದೆ ಎಂದು ನಾವು ಅಂದಾಜು ಮಾಡಬಹುದು.ಕಂಪನಿ ಮೂಲಗಳ ಪ್ರಕಾರ ಹೋಂಡಾ SP 125 ಬೈಕ್ ಗೆ ಒಮ್ಮೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದರೆ ಯಾವುದೇ ಸಮಸ್ಯೆ ಇಲ್ಲದೆ 700 Km ತನಕ ಪ್ರಯಾಣ ಮಾಡಬಹುದಾಗಿದೆ. 5000 ರೂ ಡೌನ್ ಪೇಮೆಂಟ್ ಮಾಡಿ ನೀವು ಈ ಬೈಕ್ EMI ನಲ್ಲಿ ಖರೀದಿ ಮಾಡಿದರೆ ಪ್ರತಿ ತಿಂಗಳು 3700 ರೂ EMI ಪಾವತಿ ಮಾಡಬೇಕು.