Karnataka Rain: ಮಾರ್ಚ್ 11 ರಿಂದ 3 ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ, ಯಲ್ಲೋ ಅಲರ್ಟ್

Rain In Karnataka: ಕರ್ನಾಟಕದಲ್ಲಿ ಬೇಸಿಗೆ ಬಿಸಿ ಜೋರಾಗುತ್ತಿದ್ದಂತೆ ಈಗ ಅಕಾಲಿಕ ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೌದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಾರ್ಚ್ 11 ತಾರೀಕಿನಿಂದ ಸತತ ಮೂರೂ ದಿನಗಳ ಕಾಲ ಮಳೆಯಾಗಲಿದ್ದು ಯಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಬೇಸಿಗೆ ಬಿಸಿಯ ನಡುವೆ ಹವಾಮಾನ ಇಲಾಖೆ ಈಗ ಮಳೆಯ ಮುನ್ಸೂಚನೆ ನೀಡಿದ್ದು ಇದು ಜನರ ಸಂತಸಕ್ಕೆ ಕೂಡ ಕಾರಣವಾಗಿದೆ. ಹಾಗಾದರೆ ಮಾರ್ಚ್ 11 ನೇ ತಾರೀಕಿನಿಂದ ಸತತ ಮೂರೂ ದಿನಗಳ ಕಾಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಮಾರ್ಚ್ 11 ರಿಂದ ಜಿಲ್ಲೆಗಳಲ್ಲಿ ಭಾರಿ ಮಳೆ
ಹವಾಮಾನ ಇಲಾಖೆ ಈಗ ಮುನ್ಸೂಚನೆ ನೀಡಿದ್ದು ಮಾರ್ಚ್ 11 ನೇ ತಾರೀಕಿನಿಂದ ಸತತ ಮೂರೂ ದಿನಗಳ ಕಾಲ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ. ಮುಂಗಾರು ಪೂರ್ವ ಮಳೆ ಇದಾಗಿದ್ದು ಸತತ ಮೂರೂ ದಿನ ಎಡಬಿಡದೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಚ್ 11 ನೇ ತಾರೀಕಿನಿಂದ 14 ನೇ ತಾರೀಕಿನ ತನಕ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಾಗುತ್ತಿದೆ. ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾದ ಕಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾರ್ಚ್ ತಿಂಗಳಿಂದ ಮೇ ತಿಂಗಳ ವರೆ ಮುಂಗಾರು ಪೂರ್ವ ಮಳೆಯ ಅವಧಿಯಾಗಿದೆ ಮತ್ತು ಈ ಮಳೆ ಸಾಮಾನ್ಯವಾಗಿ ಬಿಸಿಲಿನ ಹೆಚ್ಚಾದ ತಾಪದ ಕಾರಣ ಆಗುತ್ತದೆ.

karnataka rain update
rain update karnataka in march month

ಮಾರ್ಚ್ 11 ರಿಂದ 14 ರ ತನಕ ಗುಡುಗು ಸಹಿತ ಮಳೆ
ಹವಾಮಾನ ಇಲಾಖೆಯ ವರದಿಯ ಪ್ರಕಾರ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಚ್ 11 ರಿಂದ 14 ರ ತನಕ ಗುಡುಗು ಸಹಿತ ಮಳೆ ಆಗಲಿದ್ದು ಜನರು ಎಚ್ಚರಿಂದ ಇರಬೇಕಾಗಿದೆ. ಇನ್ನು ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಮೀನುಗಾರರಿಗೆ ಕೂಡ ಎಚ್ಚರಿಕೆ ನೀಡಲಾಗಿದೆ.

Leave a Comment