Credit Score: ಸಿಬಿಲ್ ಸ್ಕೋರ್ ವಿಚಾರವಾಗಿ ರಿಸರ್ವ್ ಬ್ಯಾಂಕ್ ಹೊಸ 3 ನಿಯಮ ಘೋಷಣೆ, ಎಲ್ಲಾ ಬ್ಯಾಂಕುಗಳಿಗೆ

RBI New Rules On Cibil Score: ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳಲು ಮುಖ್ಯವಾಗಿ ನಿಮ್ಮ Cibil Score ಬಹಳ ಉತ್ತಮ ಆಗಿರಬೇಕು. ಇನ್ನು ನಿಮ್ಮ Cibil Score ಕೆಟ್ಟದಾಗಿದ್ದರೆ ನೀವು ಸಾಲ ಪಡೆದುಕೊಳ್ಳಲು ಸಾಧ್ಯವಿಲ್ಲ ಮತ್ತು ಸಾಲ ಪಡೆದುಕೊಂಡರೂ ಕೂಡ ಅದಕ್ಕೆ ದೊಡ್ಡ ಮೊತ್ತ ಬಡ್ಡಿ ಪಾವತಿ ಮಾಡಬೇಕಾಗುತ್ತದೆ. ಇನ್ನು Cibil Score ಗೆ ಸಂಬಂಧಿಸಿದಂತೆ RBI ಈಗಾಗಲೇ ಹಲವು ಹೊಸ ನಿಯಮವನ್ನು ದೇಶದಲ್ಲಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಹೌದು ಗ್ರಾಹಕರಿಗೆ Cibil Score ವಿಷಯವಾಗಿ ಹಣಕಾಸು ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಆಗಬಾರದು ಅನ್ನುವ ಉದ್ದೇಶದಿಂದ RBI ಈಗಾಗಲೇ Cibil Score ಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮವನ್ನು ದೇಶದಲ್ಲಿ ಜಾರಿಗೆ ತಂದಿದೆ.

WhatsApp Group Join Now
Telegram Group Join Now

ಪ್ರತಿ 15 ದಿನಕ್ಕೆ ಚೇಂಜ್ ಆಗಲಿದೆ ನಿಮ್ಮ Cibil Score
ಹೌದು, RBI ಜಾರಿಗೆ ತಂದಿರುವ ಹೊಸ ಆದೇಶದ ಪ್ರಕಾರ ಎಲ್ಲಾ ಹಣಕಾಸು ಸಂಸ್ಥೆಗಳು ಗ್ರಾಹಕರ Cibil Score ಅನ್ನು ಪ್ರತಿ 15 ದಿನಗಳಿಗೆ ಒಮ್ಮೆ ನವೀಕರಣ ಮಾಡಬೇಕು ಮತ್ತು Cibil Score ನವೀಕರಣ ಮಾಡಿದ ಬಗ್ಗೆ ಹಾಗು ನವೀಕರಣ ಮಾಡಿದ ನಂತರ ಅವರ Cibil Score ಎಷ್ಟಿದೆ ಅನ್ನುವುದರ ಬಗ್ಗೆ ಅವರಿಗೆ ಮಾಹಿತಿಯನ್ನು ನೀಡಬೇಕು. ತಿಂಗಳ ಮಧ್ಯದಲ್ಲಿ ಅಥವಾ ತಿಂಗಳ ಕೊನೆಯ ಗ್ರಾಹಕರ Cibil Score ನವೀಕರಣ ಆಗಬೇಕು. Cibil Score ಅನ್ನು ತಿಂಗಳಿಗೆ ಎರಡು ಬಾರಿ ನವೀಕರಣ ಮಾಡಿದರೆ ಸಾಲ ಪಡೆಯಲು Cibil Score ಬಹಳ ಸಹಕಾರಿ ಆಗುತ್ತದೆ.

RBI Implement three new rules on cibil score
RBI rules on cibil score

SMS ಅಥವಾ ಇಮೇಲ್ ಮೂಲಕ Cibil Score ಕಳುಹಿಸಬೇಕು
ಇನ್ನುಮುಂದೆ ಎಲ್ಲಾ ಬ್ಯಾಂಕುಗಳು ತನ್ನ ಗ್ರಾಹಕರಿಗೆ ತಿಂಗಳಿಗೆ ಎರಡು ಬಾರಿ SMS ಅಥವಾ ಇಮೇಲ್ ಮೂಲಕ Cibil Score ಮಾಹಿತಿಯನ್ನು ನೀಡಬೇಕು. ತಿಂಗಳಿಗೆ ಎರಡು ಬಾರಿ ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ Cibil Score ಚೇಂಜ್ ಆಗಿರುವ ಬಗ್ಗೆ ಮಾಹಿತಿಯನ್ನು SMS ಅಥವಾ ಇಮೇಲ್ ಮೂಲಕ ಕಳುಹಿಸುವುದು ಕಡ್ಡಾಯ ಆಗಿದೆ. ಇನ್ನು SMS ಅಥವಾ ಇಮೇಲ್ ಕಳುಹಿಸಲು ಯಾವುದೇ ಶುಲ್ಕ ವಿಧಿಸುವಂತಿಲ್ಲ.

Cibil Score ದೂರು ನಿವಾರಣೆ ಮಾಡಲು ಅಧಿಕಾರಿ ನೇಮಕ
ದೇಶದ ಎಲ್ಲಾ ಬ್ಯಾಂಕುಗಳು ಇನ್ನುಮುಂದೆ ಕ್ರೆಡಿಟ್ ಸ್ಕೋರ್ ಗೆ ಸಂಬಂಧಿಸಿದಂತೆ ಎಲ್ಲಾ ದೂರುಗಳನ್ನು ಬಗೆಹರಿಸಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕು ಮತ್ತು ಆ ಅಧಿಕಾರಿ ಗ್ರಾಹಕರಿಗೆ Cibil Score ಗೆ ಸಂಬಂಧಿಸಿದ ಎಲ್ಲಾ ಮಾಹಿತಿ ನೀಡುವುದರ ಜೊತೆಗೆ Cibil Score ಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಆತ ನಿವಾರಣೆ ಮಾಡಬೇಕು.

ದೂರ ಪರಿಹಾರ ವಿಳಂಬವಾದರೆ 100 ರೂ ದಂಡ
RBI ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಇನ್ನುಮುಂದೆ ಗ್ರಾಹಕರಿಗೆ ಬ್ಯಾಂಕುಗಳು Cibil Score ಗೆ ಸಂಬಂಧಿಸಿದಂತೆ ಯಾವುದಾದರೂ ದೂರು ನೀಡಿದರೆ ಬ್ಯಾಂಕುಗಳು ಆ ದೂರನ್ನು 30 ದಿನಗಳ ಒಳಗೆ ನಿವಾರಣೆ ಮಾಡಬೇಕು ಮತ್ತು ನಿವಾರಣೆ ಮಾಡಿದ ನಂತರ ಅದರ ಬಗ್ಗೆ ಮಾಹಿತಿಯನ್ನು ಗ್ರಾಹಕರಿಗೆ ನೀಡಬೇಕು. ಒಂದುವೇಳೆ ಬ್ಯಾಂಕ್ Cibil Score ಗೆ ಸಂಬಂಧಿಸಿದ ಗ್ರಾಹಕರ ದೂರನ್ನು 30 ದಿನಗಳ ಒಳಗೆ ನಿವಾರಣೆ ಮಾಡದೆ ಇದ್ದರೆ ಬ್ಯಾಂಕ್ ತನ್ನ ಗ್ರಾಹಕರಿಗೆ ಪ್ರತಿ ದಿದಕ್ಕೆ 100 ದಂಡ ಕೊಡಬೇಕು. ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಪಾರದರ್ಶಕತೆ ಹೆಚ್ಚಿಸಲು RBI ಈ ಹೊಸ ನಿಯಮವನ್ನು ದೇಶದಲ್ಲಿ ಜಾರಿಗೆ ತಂದಿದೆ. ಇನ್ನು ಈ ಹೊಸ ನಿಯಮ ಮಾರ್ಚ್ 1 ನೇ ತಾರೀಕಿನಿಂದಲೇ ದೇಶಾದ್ಯಂತ ಜಾರಿಗೆ ಬಂದಿರುತ್ತದೆ.

Leave a Comment