ICC Prize Money: ಫೈನಲ್ ಗೆದ್ದ ಭಾರತಕ್ಕೆ ಸಿಕ್ಕ ಒಟ್ಟು ಹಣ ಎಷ್ಟು…? ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಅವಮಾನ

India Win Champians Trophy: ಸದ್ಯ ಚಾಂಪಿಯನ್ಸ್ ಟ್ರೋಫಿ (Champians Trophy) ಮುಗಿದಿದ್ದು ಭಾರತ ಮೂರನೇ ಬಾರಿ ಚಾಂಪಿಯನ್ಸ್ ಆಗುವುದರ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಹೆಗಲಿಗೆ ಹಾಕಿಕೊಂಡಿದೆ. ಕೇವಲ 9 ತಿಂಗಳಲ್ಲಿ ಎರಡನೆಯ ಬಾರಿ ಭಾರತ ICC ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. (India and New Zealand Final Match) ಇನ್ನು ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸುವುದರ ಮೂಲಕ ಭಾರತ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ನ್ಯೂಜಿಲ್ಯಾಂಡ್ ತಂಡ ನೀಡಿದ 252 ರನ್ ಟಾರ್ಗೆಟ್ ಅನ್ನು ಚೇಸ್ ಮಾಡುವುದರ ಮೂಲಕ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಮಡಿಲಿಗೆ ಹಾಕಿಕೊಂಡಿದೆ.

WhatsApp Group Join Now
Telegram Group Join Now

ಚಾಂಪಿಯನ್ಸ್ ಟ್ರೋಫಿ ವಿನ್ ಆದ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು…? (ICC Champians Trophy Prize Money)
ಚಾಂಪಿಯನ್ಸ್ ಟ್ರೋಫಿ 2025 ಅನ್ನು ತನ್ನ ಮಡಿಲಿಗೆ ಹಾಕಿಕೊಂಡ ಭಾರತ ತಂಡಕ್ಕೆ ಭರ್ಜರಿ ಬಹುಮಾನ ಸಿಕ್ಕಿದೆ ಎಂದು ಹೇಳಬಹುದು. ಹೌದು ICC ಚಾಂಪಿಯನ್ಸ್ ಟ್ರೋಫಿಯನ್ನು ತನ್ನದೇ ಮಡಿಲಿಗೆ ಹಾಕಿಕೊಂಡ ಭಾರತಕ್ಕೆ ಭರ್ಜರಿ 2.4 ಅಮೆರಿಕನ್ ಮಿಲಿಯನ್ ಡಾಲರ್ ಹಣವನ್ನು ಬಹುಮಾನವಾಗಿ ನೀಡಲಾಗಿದೆ. 2.4 ಅಮೆರಿಕನ್ ಮಿಲಿಯನ್ ಡಾಲರ್ ಅಂದರೆ ಸುಮಾರು 19.5 ಕೋಟಿ ರೂಪಾಯಿಯನ್ನು ಬಹುಮಾನದ ಮೊತ್ತವಾಗಿ ಭಾರತಕ್ಕೆ ನೀಡಲಾಗಿದೆ. ಅದೇ ರೀತಿಯಲ್ಲಿ ಭಾರತದ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಆದ ನ್ಯೂಜಿಲ್ಯಾಂಡ್ ತಂಡಕ್ಕೆ 1.12 ಮಿಲಿಯನ್ ಡಾಲರ್ ಅಂದರೆ ಸುಮಾರು 9.72 ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ.

india win champians trophy final match
price money for icc champians trophy winners

ಚಾಂಪಿಯನ್ಸ್ ಟ್ರೋಫಿ ಒಟ್ಟು ಬಹುಮಾನದ ಮೊತ್ತ 60 ಕೋಟಿ
ಹೌದು, ICC ಆಯೋಜನೆ ಮಾಡಿದ್ದ ಚಾಂಪಿಯನ್ಸ್ ಟ್ರೋಫಿಗೆ ಸುಮಾರು 60 ಕೋಟಿ ರೂ ಬಹುಮಾನ ಘೋಷಣೆ ಮಾಡಲಾಗಿತ್ತು. ವಿನೀರ್ ತಂಡಕ್ಕೆ 19.5 ಕೋಟಿ ರೂ, ರನ್ನರ್ ಅಪ್ ತಂಡಕ್ಕೆ 9.72 ಕೋಟಿ ರೂ ನಿಗದಿ ಮಾಡಲಾಗಿತ್ತು. ಅದೇ ರೀತಿಯಲ್ಲಿ ಗ್ರೂಪ್ ಹಂತದಲ್ಲಿ ವಿನ್ ಆಗುವ ಪ್ರತಿ ತಂಡಕ್ಕೆ ಸುಮಾರು 30 ಲಕ್ಷ ರೂಪಾಯಿಯನ್ನು ಪ್ರತಿ ಪಂದ್ಯಕ್ಕೂ ಘೋಷಣೆ ಮಾಡಲಾಗಿತ್ತು. ಇನ್ನು ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಕ್ಕೆ ಸುಮಾರು 1.08 ರೂ ಹಣವನ್ನು ನೀಡಲಾಗಿದೆ. ಇನ್ನು ಐದು ಮತ್ತು ಆರನೇ ಸ್ಥಾನ ಪಡೆದುಕೊಂಡ ತಂಡಕ್ಕೆ ತಲಾ 3 ಕೋಟಿ ರೂ ಬಹುಮಾನ ನೀಡಲಾಗಿದೆ. ಇನ್ನು ಏಳು ಮತ್ತು ಎಂಟನೇ ಸ್ಥಾನ ಪಡೆದುಕೊಂಡ ತಂಡಕ್ಕೆ 1.02 ಕೋಟಿ ರೂ ಹಣವನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ.

ಅವಮಾನ ಅನುಭವಿಸಿದ ಪಾಕಿಸ್ತಾನ (Pakistan Host ICC Champians Trophy)
ಈ ಪಾಕಿಸ್ತಾನ ICC ಚಾಂಪಿಯನ್ಸ್ ಟ್ರೋಫಿ ಪ್ರಾಯೋಜಕತ್ವವನ್ನು ಪಡೆದುಕೊಂಡು ICC ಯಿಂದ ಸುಮಾರು 1200 ಕೋಟಿ ರೂ ಹಣ ಪಡೆದುಕೊಂಡಿತ್ತು. ಪಾಕಿಸ್ತಾನದಲ್ಲಿ ಪಂದ್ಯಗಳು ನಡೆದ ಭಾರತ ಅಲ್ಲಿಗೆ ಬರುವುದಿಲ್ಲ ಅನ್ನುವ ಕಾರಣಕ್ಕೆ ಭಾರತ ಎಲ್ಲಾ ಪಂದ್ಯವನ್ನು ದುಬೈನಲ್ಲಿ ಆಯೋಜನೆ ಮಾಡಲಾಗಿತ್ತು. ಭಾರತ ಫೈನಲ್ ಗೆ ಬಂದಕರಣ ಫೈನಲ್ ಪಂದ್ಯವನ್ನು ಕೂಡ ದುಬೈನಲ್ಲಿ ಆಡಿಸಲಾಗಿದೆ. ICC ಚಾಂಪಿಯನ್ಸ್ ಟ್ರೋಫಿ ಹೋಸ್ಟಿಂಗ್ ಮಾಡಿದ್ದ ಪಾಕಿಸ್ತಾನದಲ್ಲೇ ಫೈನಲ್ ಪಂದ್ಯ ನಡೆಯದೆ ಇರುವುದು ಪಾಕಿಸ್ತಾನಕ್ಕೆ ದೊಡ್ಡ ಅವಮಾನ ಆದಂತೆ ಆಗಿದೆ. ಇದೆ ಮೊದಲ ಬಾರಿಯ ಹೋಸ್ಟಿಂಗ್ ಮಾಡಿದ ದೇಶದಲ್ಲಿ ಫೈನಲ್ ಪದ್ಯ ನಡೆಯದೆ ಇರುವುದು ಆಗಿದೆ.

ವಿಶೇಷ ಸಾಧನೆ ಮಾಡಿದ ರೋಹಿತ್ ಶರ್ಮಾ
ICC ಚಾಂಪಿಯನ್ಸ್ ಟ್ರೋಫಿ ವಿನ್ ಆಗುವುದರ ಮೂಲಕ ರೋಹಿತ್ ಶರ್ಮ (Rohit Sharma) ಅವರು ಒಂದು ವಿಶೇಷವಾದ ಸಾಧನೆ ಮಾಡಿದ್ದಾರೆ. ಹೌದು, ಕೇವಲ 9 ತಿಂಗಳಲ್ಲಿ ಎರಡು ಬಾರಿ ICC ಟ್ರೋಫಿ ವಿನ್ ಆಗುವುದರ ಮೂಲಕ ರೋಹಿತ್ ಶರ್ಮಾ ಯಾರು ಮಾಡದ ದಾಖಲೆ ಮಾಡಿದ್ದಾರೆ ಎಂದು ಹೇಳಬಹುದು.

Leave a Comment