Taurian World School: M.S Dhoni Daughter School: IPL ಇನ್ನೇನು ಆರಂಭ ಆಗಬೇಕಿದೆ, ಇದರ ನಡುವೆ ಭಾರತ ತಂಡದ ಮಾಜಿ ನಾಯಕ ಮತ್ತು ಭಾರತದ ಮಾಜಿ ಕ್ರಿಕೆಟ್ ಆಟಗಾರ M.S ಧೋನಿ ಅವರ ವಿಷಯವಾಗಿ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಹೌದು M.S ಧೋನಿ ಅವರು ದೇಶದ ಶ್ರೀಮಂತ ಕ್ರಿಕೆಟ್ ಆಟಗಾರ, ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದ M.S ಧೋನಿ ಅವರು ಸದ್ಯ IPL ನಲ್ಲಿ ಈಗ ಬ್ಯುಸಿ ಇದ್ದಾರೆ. ಮಾರ್ಚ್ 21 ನೇ ತಾರೀಕಿನಿಂದ ಐಪಿಎಲ್ ಆರಂಭ ಆಗಲಿದೆ. ಸದ್ಯ ಇದರ ನಡುವೆ M.S ಧೋನಿ ಅವರ ಮಗಳ ಶಾಲೆಯ ಶುಲ್ಕದ ವಿಷಯ ಸಾಮಾಜಿಲ ಜಾಲತಾಣದಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ.
ರಾಂಚಿಯ ಸ್ವಂತ ನಿವಾಸದಲ್ಲಿ ವಾಸವಿದ್ದಾರೆ M.S ಧೋನಿ ಮತ್ತು ಪತ್ನಿ
ಮದುವೆಯ ನಂತರ ರಾಂಚಿಯಲ್ಲಿ ವಾಸವಿರುವ M.S ಧೋನಿ ಅವರು ಆಗಾಗ ಕೆಲವು ವಿಷಯಗಳ ಕಾರಣ ಸುದ್ದಿಯಾಗುತ್ತಾರೆ. ಇದರ ನಡುವೆ ಈಗ M.S ಧೋನಿ ಅವರು ಮಗಳ ಶಾಲೆಯ ಶುಲ್ಕದ ವಿಷಯವಾಗಿ ಚರ್ಚೆಗೆ ಕಾರಣವಾಗಿದ್ದಾರೆ. ಶ್ರೀಮಂತರ ಮಕ್ಕಳು ಅಂದಮೇಲೆ ಅವರ ಮಕ್ಕಳು ದೊಡ್ಡ ದೊಡ್ಡ ಐಷಾರಾಮಿ ಶಾಲೆಗಳಲ್ಲಿ ಓದಿಸಲಾಗುತ್ತದೆ. ಇನ್ನು ಅದೇ ರೀತಿಯಲ್ಲಿ M.S ಧೋನಿ ಅವರ ಪುತ್ರಿ ಝೀವಾ ಕೂಡ ಐಷಾರಾಮಿ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾಳೆ ಎಂದು ಹೇಳಬಹುದು.

M.S ಧೋನಿ ಅವರ ಮಗಳ ಶಾಲೆಯ ಶುಲ್ಕ
M.S ಧೋನಿ ಅವರ ಮಗಳು ಝೀವಾ ಅವರು ರಾಂಚಿಯ ಟೌರಿಯನ್ ವರ್ಲ್ಡ್ ಸ್ಕೂಲ್ (Taurian World School) ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಮತ್ತು M.S ಧೋನಿ ಅವರ ಮಗಳ ವಯಸ್ಸು ಕೇವಲ 10 ವರ್ಷ ಮಾತ್ರ. ಇನ್ನು M.S ಧೋನಿ ಅವರ ಮಗಳು ಓದುವ ಟೌರಿಯನ್ ವರ್ಲ್ಡ್ ಸ್ಕೂಲ್ 10 ಎಕರೆ ಜಾಗದಲ್ಲಿ ನಿರ್ಮಾಣವಾಗಿದೆ. 2008 ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಸಾಕಷ್ಟು ಶ್ರೀಮಂತರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣ ನೀಡಲಾಗುತ್ತದೆ.
ಈ ಶಾಲೆಯಲ್ಲಿ ಸಿಗುತ್ತೆ ಸಂಪ್ರಧಾಯಿಕ ಶಿಕ್ಷಣ
M.S ಧೋನಿ ಅವರ ಮಗಳು ಓದುವ ಈ ಶಾಲೆಯಲ್ಲಿ ಮಕ್ಕಳಿಗೆ ಸಾಂಸ್ಕ್ರತಿಕ ಮತ್ತು ಸಾಂಪ್ರದಾಯಿಕ ಶಿಕ್ಷಣ ಕೂಡ ನೀಡಲಾಗುತ್ತದೆ. ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಶಿಕ್ಷಣ ಕೂಡ ನೀಡಲಾಗುತ್ತದೆ. ತನ್ನ ಮಗಳಿಗೆ ಎಲ್ಲಾ ರೀತಿಯ ಶಿಕ್ಷಣ ಸಿಗಬೇಕು ಅನ್ನುವ ಉದ್ದೇಶದಿಂದ M.S ಧೋನಿ ಅವರು ಮಗಳನ್ನ ಈ ಶಾಲೆಗೆ ಸೇರಿಸಿದ್ದಾರೆ. M.S ಧೋನಿ ಅವರ ಮಗಳು ಮಾತ್ರವಲ್ಲದೆ ರಾಂಚಿಯ ಹಲವು ಶ್ರೀಮಂತರ ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.