Ration card Apply: ಇನ್ಮುಂದೆ ಮಕ್ಕಳನ್ನು BPL ಕಾರ್ಡಿಗೆ ಸೇರಿಸಲು ಈ ದಾಖಲೆ ಕಡ್ಡಾಯ, ಸರ್ಕಾರದ ಆದೇಶ

Ration card Online: ರಾಜ್ಯ ಸರ್ಕಾರ ಈಗ ಪಡಿತರ ಚೀಟಿಗೆ (Ration Card) ಸಂಬಂಧಿಸಿದಂತೆ ಇನ್ನೊಂದು ಹೊಸ ನಿಯಮ ಜಾರಿಗೆ ತಂದಿದೆ. ಸದ್ಯ ರಾಜ್ಯ ಸರ್ಕಾರ ಈಗ ಮತ್ತೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಮತ್ತು ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ ನೀಡಲು ಮುಂದಾಗಿದೆ. ಇದರ ನಡುವೆ ಈಗ ಹೊಸದಾಗಿ BPL ಅಥವಾ APL ರೇಷನ್ ಕಾರ್ಡಿನಲ್ಲಿ ತಮ್ಮ ಮಕ್ಕಳನ್ನ ಸೇರಿಸುವವರಿಗೆ ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ಹೊಸ ರೂಲ್ಸ್ ಜಾರಿಗೆ ತಂದಿದ್ದು ಈ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ.

WhatsApp Group Join Now
Telegram Group Join Now

ಮಕ್ಕಳನ್ನ ರೇಷನ್ ಕಾರ್ಡಿನಲ್ಲಿ ಸೇರಿಸುವವರಿಗೆ ಹೊಸ ರೂಲ್ಸ್
ಹೌದು, ಹೊಸದಾಗಿ ಮಕ್ಕಳನ್ನು APL ಅಥವಾ BPL ಕಾರ್ಡಿನಲ್ಲಿ ಸೇರಿಸುವವರಿಗೆ ಈಗ ಹೊಸ ನಿಯಮ ಜಾರಿಗೆ ತರಲಾಗಿದೆ. ಬರಿ ಸೇರಿಸುವುದು ಮಾತ್ರವಲ್ಲದೆ ಪಡಿತರ ಚೀಟಿಯಿಂದ ಸದಸ್ಯರನ್ನು ತಗೆದುಹಾಕುವ ನಿಯಮದಲ್ಲಿ ಕೂಸ ಬದಲಾವಣೆ ಜಾರಿಗೆ ತರಲಾಗಿದೆ. ಮಾರ್ಚ್ 31 ನೇ ತಾರೀಕಿನಿಂದ ರೇಷನ್ ಕಾರ್ಡ್ ಸೇರ್ಪಡೆ ಮತ್ತು ತಿದ್ದುಪಡಿ ಆರಂಭ ಆಗಲಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

New Ration cards applications starts ion karnataka
new ration cards update

ರೇಷನ್ ಕಾರ್ಡಿನಲ್ಲಿ ಮಕ್ಕಳನ್ನು ಸೇರಿಸಲು ಈ ದಾಖಲೆ ಕಡ್ಡಾಯ (Documents for ration card application)
ಮಗುವನ್ನು ನಿಮ್ಮ ರೇಷನ್ ಕಾರ್ಡಿನಲ್ಲಿ ಸೇರ್ಪಡೆ ಮಾಡಲು ಬೇಕಾದ ದಾಖಲೆಗಳು ಈ ಕೆಳಗಿನಂತಿದೆ.

* ಮಗುವಿನ ಜನನ ಪ್ರಮಾಣಪತ್ರ

* ಮಗುವನ್ನು ರೇಷನ್ ಕಾರ್ಡಿಗೆ ಸೇರಿಸುವ ಸಮಯದಲ್ಲಿ ಮತ್ತೊಮ್ಮೆ ಕುಟುಂಬ ಸದದ್ಯರ ಫೋಟೋ ಕೊಡುವುದು ಕಡ್ಡಾಯ.

* ಮಗುವನ್ನು ರೇಷನ್ ಕಾರ್ಡಿಗೆ ಸೇರಿಸುವ ಸಮಯದಲ್ಲಿ ಮಗುವಿನ ಆಧಾರ್ ಕಾರ್ಡ್ ಮತ್ತು KYC ಕೊಡುವುದು ಕೂಡ ಕಡ್ಡಾಯ.

ಮಗುವಿನ ಹೆಸರನ್ನು ರೇಷನ್ ಕಾರ್ಡಿಗೆ ಸೇರಿಸುವುದು ಹೇಗೆ…?
ಮಗುವನ್ನು ರೇಷನ್ ಕಾರ್ಡಿಗೆ ಸೇರಿಸಲು ಇಚ್ಚಿಸುವವರಿಗೆ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿನೀಡುವುದರ ಮೂಲಕ ಅರ್ಜಿ ಸಲ್ಲಿಸಬಹುದು. ಮಕ್ಕಳನ್ನು ಮಾತ್ರವಲ್ಲದೆ ಇತರರನ್ನು ಕೂಡ ರೇಷನ್ ಕಾರ್ಡಿಗೆ ಸೇರಿಸುವುದಾದರೆ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಭಾವಚಿತ್ರ ಸೇರಿದಂತೆ ಇನ್ನಿತರ ದಾಖಲೆ ನೀಡುವುದು ಕಡ್ಡಾಯ.

ಇಂತಹ ಕುಟುಂಬಗಳ BPL ರೇಷನ್ ಕಾರ್ಡ್ ರದ್ದು
ರಾಜ್ಯ ಸರ್ಕಾರ ಈಗ ಯಾರು ಬಡತನ ರೇಖೆಗಿಂತ ಮೇಲೆ ಇದ್ದು ಅವರು ಕೂಡ BPL ಕಾರ್ಡ್ ಮಾಡಿಸಿಕೊಂಡಿದ್ದಾರೋ ಅವರ BPL ರೇಷನ್ ಕಾರ್ಡುಗಳನ್ನು ಈಗ ರದ್ದು ಮಾಡಿದೆ.

* ಸರ್ಕಾರೀ ನೌಕರಿಯಲ್ಲಿ ಇರುವವರ BPL ರೇಷನ್ ರದ ರದ್ದು.

* ಪ್ರತಿ ವರ್ಷ ಆದಾಯ ತೆರಿಗೆ ಪಾವತಿ ಮಾಡುವವರ BPL ಕಾರ್ಡ್ ರದ್ದು.

* ಮನೆಯಲ್ಲಿ ಸ್ವಂತ ನಾಲ್ಕು ಚಕ್ರದ ವಾಹನ ಇದ್ದವರ BPL ರೇಷನ್ ಕಾರ್ಡ್ ರದ್ದು.

* ಸ್ವಂತ ಬಿಸಿನೆಸ್ ಮಾಡುತ್ತಿರುವವರ BPL ರೇಷನ್ ಕಾರ್ಡ್ ರದ್ದು.

ಇನ್ನು ರಾಜ್ಯ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 27 ಲಕ್ಷ BPL ರೇಷನ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಯಾವ ಕುಟುಂಬದ ರೇಷನ್ ಕಾರ್ಡ್ ರದ್ದಾಗಿದೆಯೋ ಅಂತಹ ಕುಟುಂಬದವರು ಇನ್ನುಮುಂದೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಸರ್ಕಾರಕ್ಕೆ ನಕಲಿ ದಾಖಲೆ ನೀಡಿ ರೇಷನ್ ಮಾಡಿಸಿಕೊಂಡರು ತಕ್ಷಣ ಆ ರೇಷನ್ ಕಾರ್ಡುಗಳನ್ನ ಕ್ಯಾನ್ಸಲ್ ಮಾಡಬೇಕು ಇಲ್ಲದವಾದರೆ ದೊಡ್ಡ ಮೊತ್ತದ ದಂಡ ಪಾವತಿ ಮಾಡಬೇಕಾಗುತ್ತದೆ.

Leave a Comment