BPL Card Rules: ರಾಜ್ಯದಲ್ಲಿ ಈಗ BPL ರೇಷನ್ (BPL Ration Card) ಕಾರ್ಡುಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಇನ್ನು ದೇಶದಲ್ಲಿ ಜಾರಿಗೆ ಬಂದಿರುವ ಈ ಹೊಸ ನಿಯಮದ ಪ್ರಕಾರ ರಾಜ್ಯದಲ್ಲಿ ಇದೆ ವಾರದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ BPL ರೇಷನ್ ಕಾರ್ಡುಗಳು ರದ್ದಾಗಲಿದೆ ಎಂದು ಹೇಳಲಾಗುತ್ತಿದೆ. BPL ರೇಷನ್ ಕಾರ್ಡುಗಳನ್ನು ರದ್ದು ಮಾಡಲು ಈಗ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಕಾರ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಕುಟುಂಬದವರು ತಮ್ಮ BPL ರೇಷನ್ ಕಾರ್ಡುಗಳನ್ನು ಕಳೆದುಕೊಳ್ಳಲಿದ್ದಾರೆ.
ಅನರ್ಹರು ಕೂಡ BPL ಕಾರ್ಡ್ ಮಾಡಿಸಿಕೊಂಡಿದ್ದಾರೆ
ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಅನರ್ಹರು ಕೂಡ BPL ರೇಷನ್ ಕಾರ್ಡ್ ಮಾಡಿಸಿಕೊಂಡಿರುವುದು ಈಗ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಹೌದು ರಾಜ್ಯದಲ್ಲಿ ಸುಮಾರು 22 ಲಕ್ಷಕ್ಕೂ ಅಧಿಕ ಕುಟುಂಬದವರು ಅನರ್ಹರಾಗಿದ್ದು ಅವರು BPL ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ ಎಂದು ಸರ್ಕಾರಕ್ಕೆ ವರದಿ ಬಂದಿದೆ. ಈ ಕಾರಣಕ್ಕೆ ಈಗ ರಾಜ್ಯ ಸರ್ಕಾರ ಬಹುದೊಡ್ಡ ತೀರ್ಮಾನ ಮಾಡಿದೆ ಮತ್ತು ಯಾವ ಕುಟುಂಬದವರು ಆರ್ಥಿಕವಾಗಿ ಸಬಲರಾಗಿದ್ದು ಅವರು BPL ಕಾರ್ಡ್ ಮಾಡಿಸಿಕೊಂಡಿದ್ದಾರೋ ಅವರ ಕಾರ್ಡ್ ರದ್ದು ಮಾಡಲು ಆದೇಶ ಹೊರಡಿಸಲಾಗಿದೆ.

ಮನೆ ಮನೆಗೆ ಬರಲಿದ್ದಾರೆ PDO ಮತ್ತು ಗ್ರಾಮ ಲೆಕ್ಕಾಧಿಕಾರಿ
ಹೌದು, ಅನರ್ಹ BPL ಕಾರ್ಡುಗಳಲ್ಲಿ ಪತ್ತೆಮಾಡಲು ಈಗ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ. ಆಹಾರ ಮತ್ತು ನಾಗರೀಕ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಗ್ರಾಮ ಲೆಕ್ಕಾಧಿಕಾರಿ ಮತ್ತು PDO ಮನೆ ಮನೆಗೆ ಭೇಟಿನೀಡಿ BPL ಕಾರ್ಡ್ ಪರಿಶೀಲನೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಬಡವರನ್ನು ಹೊರತುಪಡಿಸಿ ರಾಜ್ಯದಲ್ಲಿ ಸುಮಾರು 22 ಲಕ್ಷಕ್ಕೂ ಅಧಿಕ ಕುಟುಂಬದವರು BPL ಕಾರ್ಡ್ ಮಾಡಿಸಿಕೊಂಡಿದ್ದು ಅವರ BPL ಕಾರ್ಡ್ ರದ್ದತಿಗೆ ಆದೇಶ ಹೊರಡಿಸಲಾಗಿದೆ ಎಂದು ಸಚಿವರಾದ ಕೆ.ಹೆಚ್ ಮುನಿಯಪ್ಪ (k.H Muniyappa) ಅವರು ಹೇಳಿದ್ದಾರೆ.
ಇಂತಹ ಕುಟುಂಬಗಳ ರೇಷನ್ ರದ್ದಾಗಲಿದೆ
ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ನೀಡಿರುವ ವರದಿಯ ಪ್ರಕಾರ ರಾಜ್ಯದಲ್ಲಿ 20 ಲಕ್ಷಕ್ಕೂ ಅಧಿಕ BPL ಕಾರ್ಡ್ ರದ್ದಾಗಲಿದೆ ಮತ್ತು ಇಂತಹ ಕುಟುಂಬದವರ BPL ಕಾರ್ಡ್ ರದ್ದಾಗಲಿದೆ.
* ಸರ್ಕಾರೀ ನೌಕರಿಯಲ್ಲಿ ಇರುವವರು ಕೂಡ BPL ಕಾರ್ಡ್ ಮಾಡಿಸಿಕೊಂಡಿದ್ದರೆ ಅವರ ಕಾರ್ಡ್ ರದ್ದು.
* ಸ್ವಂತ ಬಿಸಿನೆಸ್ ಮಾಡುವವರು ಕೂಡ BPL ಕಾರ್ಡ್ ಮಾಡಿಸಿಕೊಂಡಿದ್ದರೆ ಅವರ ಕಾರ್ಡ್ ರದ್ದು.
* ಮನೆಯಲ್ಲಿ ಸ್ವಂತ ನಾಲ್ಕು ಚಕ್ರದ ವಾಹನ ಇದ್ದರೆ ಅವರ ರೇಷನ್ ಕಾರ್ಡ್ ರದ್ದು.
* ಪ್ರತಿ ವರ್ಷ ಆದಾಯ ತೆರಿಗೆ ಪಾವತಿ ಮಾಡುವವರು ಕೂಡ BPL ಕಾರ್ಡ್ ಮಾಡಿಸಿಕೊಂಡಿದ್ದರೆ ಅವರ ಕಾರ್ಡ್ ರದ್ದು.
* GST ಪಾವತಿ ಮಾಡುತ್ತಿರುವವರು BPL ಕಾರ್ಡ್ ಮಾಡಿಸಿಕೊಂಡಿದ್ದರೆ ಅವರ ಕಾರ್ಡ್ ರದ್ದು.
* ಕುಟುಂಬದ ವಾರ್ಷಿಕ ಆದಾಯ ಬಡತನ ರೇಖೆಗಿಂತ ಜಾಸ್ತಿ ಇದ್ದರೆ ಅವರ ರೇಷನ್ ಕಾರ್ಡ್ ರದ್ದು ಮಾಡಲು ಆದೇಶ ಹೊರಡಿಸಲಾಗಿದೆ.
ಸರ್ಕಾರಕ್ಕೆ ಮೋಸ ಮಾಡಿದ ದಂಡ ಮಾತು ಜೈಲು ಶಿಕ್ಷೆ
ಇನ್ನು ರಾಜ್ಯ ಆಹಾರ ಮತ್ತು ನಾಗರೀಕ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ರಾಜ್ಯ ಸರ್ಕಾರಕ್ಕೆ ಮೋಸ ಮಾಡಿ ಯಾರಾದರೂ BPL ಕಾರ್ಡ್ ಮಾಡಿಸಿಕೊಂಡರೆ ಅವರಿಗೆ ಭಾರೀ ಪ್ರಮಾಣದ ದಂಡ ಹಾಕಲು ಆದೇಶ ಹೊರಡಿಸಲಾಗಿದೆ. ಅದೇ ರೀತಿಯಲ್ಲಿ ನಕಲು ದಾಖಲೆಗಳನ್ನು ಸೃಷ್ಟಿಸಿಕೊಂಡು BPL ಕಾರ್ಡ್ ಮಾಡಿಸಿಕೊಂಡಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೂಡ ಆದೇಶ ಹೊರಡಿಸಲಾಗಿದೆ.