Micro Finance And Small Finance: ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರೂ ಸಾಲ (Loan_) ಮಾಡಿಕೊಂಡವರೇ ಎಂದು ಹೇಳಬಹುದು. ಹೌದು ಸಾಲ ಇಲ್ಲದ ವ್ಯಕ್ತಿಯನ್ನು ಹುಡುಕುವುದು ಬಹಳ ಕಷ್ಟ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸಾಕಷ್ಟು ಜನರು ಮಾಡಿಕೊಂಡ ಸಾಲವನ್ನು ಕಟ್ಟಲಾಗದೆ ಕಷ್ಟಪಡುತ್ತಿರುವುದನ್ನು ಕೂಡ ನಾವು ನೀವೆಲ್ಲ ಗಮನಿಸಿರಬಹುದು. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಕೂಡ ಮೈಕ್ರೋ ಫೈನಾನ್ಸ್ (Micro Finance) ಹಾವಳಿ ಹೆಚ್ಚಾದ ಕಾರಣ ಸಾಕಷ್ಟು ಜನರು ಸಾಲ ಕಟ್ಟಲಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಕರ್ನಾಟಕ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಮಾಡಿದವರಿಗೆ ಹೊಸ ಮಸೂದೆ ಜಾರಿಗೆ ತರುವುದರ ಮೂಲಕ ಎಲ್ಲಾ ಸಾಲಗಾರರಿಗೆ ಗುಡ್ ನ್ಯೂಸ್ ನೀಡಿತ್ತು. ಮೈಕ್ರೋ ಫೈನಾನ್ಸ್ ಅಥವಾ ಇತರೆ ಯಾವುದೇ ಸಂಸ್ಥೆಗಳಲ್ಲಿ ಸಾಲ ಮಾಡಿದವರು ಜಾರಿಯಲ್ಲಿ ಇರುವ ಮಸೂದೆಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.
ಸಾಲದ ಕಿರಿಕಿರಿಗೆ ಬ್ರೇಕ್ ಹಾಕು ನಾಲ್ಕು ಮಸೂದೆ ಜಾರಿ
ಕರ್ನಾಟಕ ಸರ್ಕಾರ ಈಗ ಬಡವರಿಗೆ ಸಾಲಗಳಿಂದ ಯಾವುದೇ ಕಿರಿಕಿರಿ ಆಗಬಾರದು ಮತ್ತು ಅವರನ್ನ ಸಾಲದ ಕಿರಿಕಿರಿಯಿಂದ ತಪ್ಪಿಸುವ ಸಲುವಾಗಿ ನಾಲ್ಕು ಹೊಸ ಮಸೂದೆಗೆ ಅಂಗೀಕಾರ ನೀಡಿದೆ. ಮೈಕ್ರೋ ಫೈನಾನ್ಸ್ ಮತ್ತು ಸಣ್ಣ ಸಾಲ ಮಸೂದೆಗೆ ಈಗ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಸೋಮವಾರ ವಿಧಾನಸಭೆಯಲ್ಲಿ ಹೊಸ ಮಸೂದೆ ಅಂಗೀಕಾರಕ್ಕೆ ನಿರ್ಧಾರ ತಗೆದುಕೊಳ್ಳಲಾಗಿದೆ. ಸಾಲ ಪಾವತಿಗೆ ಜನರನ್ನ ಪೀಡಿಸುವವರಿಗೆ ಈ ಮಸೂದೆ ಅಂಗೀಕಾರ ಆಗಲಿದೆ.

ರಾಜ್ಯದಲ್ಲಿ ಜಾರಿಗೆ ಹೊಸ ನಾಲ್ಕು ಸಾಲದ ಮಸೂದೆ
ಕೊಟ್ಟು ಕಿರಿಕಿರಿ ಕೊಡುವವರಿಗಾಗಿ ಈಗ ಹೊಸ ಮಸೂದೆ ಅಂಗೀಕಾರ ಮಾಡಲಾಗಿದೆ ಮತ್ತು ಈ ಮಸೂದೆ ಬಹುತೇಕ ಎಲ್ಲಾ ಸಣ್ಣ ಸಾಲ ಮತ್ತು ಮೈಕ್ರೋ ಫೈನಾನ್ಸ್ ಸಾಲಕ್ಕೆ ಅನ್ವಯ ಆಗಲಿದೆ.
* ಸಾಲ ಕೊಟ್ಟು ಬಲವಂತವಾಗಿ ದಂಡಿಸಿ ಸಾಲ ವಸೂಲಿ ಮಾಡುವಂತಿಲ್ಲ
ಹೌದು, ಹೊಸ ಮಸೂದೆಯ ಪ್ರಕಾರ ಇನ್ನುಮುಂದೆ ಸಾಲಕೊಟ್ಟ ಸಂಸ್ಥೆ ಸಾಲ ಕೊಟ್ಟವರಿಗೆ ಬಲವಂತ ಮಾಡುವುದು, ಹಿಂಸೆ ನೀಡುವುದು, ಮನೆಗೆ ಬಂದು ಅವರಿಗೆ ಅವಮಾನ ಮಾಡುವುದು, ಅವರ ಸ್ವತ್ತು ಕಿತ್ತುಕೊಳ್ಳುವುದು, ಕ್ರಿಮಿನಲ್ ಗಳನ್ನೂ ಕಳುಹಿಸಿ ಅವರಿಗೆ ಪದೇಪದೇ ತೊಂದರೆ ಕೊಡುವುದು, ಮನೆ ಮತ್ತು ಅವರು ಕೆಲಸ ಮಾಡುವ ಸ್ಥಳಕ್ಕೆ ಬಂದು ಅವರಿಗೆ ಕಿರಿಕಿರಿ ಕೊಡುವುದು ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಮಸೂದೆ ಮಂಡನೆ ಮಾಡಲಾಗಿದೆ. ಸಾಲದ ಮರುಪಾವತಿ ಸಮಯದಲ್ಲಿ ಯಾವುದೇ ದಸ್ತಾವೇಜುಗಳನ್ನು ವಶಪಡಿಸಿಕೊಳ್ಳುವಂತಿಲ್ಲ. ಅದೇ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧವಾಗಿ ಯಾರಾದರೂ ಪೊಲೀಸರಿಗೆ ದೂರು ನೀಡಿದರೆ ಪೊಲೀಸರು ತಕ್ಷಣ ದೂರು ಪಡೆದುಕೊಳ್ಳಬೇಕು ಮತ್ತು ಆರೋಪ ಸಾಭೀತಾದರೆ ಅವರಿಗೆ 10 ವರ್ಷ ಜೈಲು ಮತ್ತು 5 ಲಕ್ಷ ರೂ ದಂಡ ವಿಧಿಸಲಾಗುತ್ತದೆ.
* ಸಾಲದ ಬಡ್ಡಿಯಲ್ಲಿ ಇರಬೇಕು ಪಾರದರ್ಶಕತೆ
ಹೌದು, ಸಾಲ ನೀಡುವ ಸಮಯದಲ್ಲಿ ಸಾಲದ ಬಡ್ಡಿ ಪಾರದರ್ಶಕತೆಯ ಇರುವಂತೆ ನೋಡಿಕೊಳ್ಳಬೇಕು ಮತ್ತು ಕಚೇರಿಯಲ್ಲಿ ಸಾಲ ಬಡ್ಡಿ ಬಗ್ಗೆ ದೊಡ್ಡ ಬೋರ್ಡ್ ಹಾಕುವುದು ಕಡ್ಡಾಯ. ಇನ್ನು ಹೊಸ ನಿಯಮದ ಪ್ರಕಾರ ಎಲ್ಲಾ ರೀತಿಯ ಪತ್ರದ ಸಾಲಗಾರನ ಜೊತೆ ಕನ್ನಡದಲ್ಲಿ ಮಾಡುವುದು ಕಡ್ಡಾಯವಾಗಿದೆ. ಇನ್ನು ಅವರ ಹಿತಾಸಕ್ತಿಗೆ ದಕ್ಕೆ ತರುವಂತಹ ವಿಚಾರಗಳನ್ನು ಸಲಾದ ಅರ್ಜಿಯಲ್ಲಿ ನಮೂದಿಸುವಂತಿಲ್ಲ.
* ಶಿಕ್ಷೆ ಮತ್ತು ದಂಡದ ಮೊತ್ತದಲ್ಲಿ ಏರಿಕೆ ಮಾಡಿದ ಸರ್ಕಾರ
ಹೌದು ಮಸೂದೆಯ ಪ್ರಕಾರ, ಸಾಲ ಕೊಡುವ ಸಮಯದಲ್ಲಿ ಯಾವುದೇ ವಸ್ತುವನ್ನು ಗಿರವಿ ಇಟ್ಟುಕೊಳ್ಳುವಂತೆ ಇಲ್ಲ ಮತ್ತು ಮೊತ್ತೊಬ್ಬರ ಗಿರಿವಿ ಚೀಟಿ ಬಳಸಿಕೊಂಡು ಹಿಂಸೆ ನೀಡುವುದು ಕಂಡುಬಂದರೆ ಅವರಿಗೆ 10 ವರ್ಷ ಜೈಲು ಮತ್ತು 5 ಲಕ್ಷ ರೂ ದಂಡ ವಿಧಿಸಲು ಕೂಡ ಆದೇಶ ಹೊರಡಿಸಲಾಗಿದೆ. ಈ ನಿಯಮ ಸಣ್ಣ ಮತ್ತು ಮೈಕ್ರೋ ಫೈನಾನ್ಸ್ ಗಳಿಗೆ ಕಡ್ಡಾಯವಾಗಿ ಅನ್ವಯ ಆಗಲಿದೆ.
* ಅಧಿಕಾರಿಯಿಂದ ತನಿಖೆ ಮಾಡಲು ಆದೇಶ
ಒಂದುವೇಳೆ ಸಾಲದ ಸಮಯದಲ್ಲಿ ಗಿರವಿ ಇಟ್ಟರೆ ಅದನ್ನು ಇತ್ಯರ್ಥ ಮಾಡಿಕೊಳ್ಳಲು ಒಬ್ಬ ಸರ್ಕಾರೀ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ. ಈ ಹಿಂದೆ ದೂರು ತನಿಖೆ ಮಾಡುವ ಅಧಿಕಾರವನ್ನು ಪೊಲೀಸರಿಗೆ ಮಾತ್ರ ನೀಡಲಾಗಿತ್ತು, ಆದರೆ ಈಗ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ ಮತ್ತು ಇನ್ನುಮುಂದೆ ಇದರ ತನಿಖೆಯನ್ನು ಗ್ರೂಪ್ ಅಧಿಕಾರಿ, ರಿಜಿಸ್ಟರ್, ಸಹಾಯಕ ರಿಜಿಸ್ಟರ್ ಕೂಡ ತನಿಖೆ ಮಾಡಬಹುದು.