Pranay And Amrutha Case: ದೇಶಾದ್ಯಂತ ಎಲ್ಲರು ಕಾಯುತ್ತಿದ್ದ ಪ್ರಣಯ್ ಮತ್ತು ಅಮೃತ ಕೇಸ್ ನ ತೀರ್ಪು ಪ್ರಕಟ

Pranay And Amrutha Telangana: ಪ್ರಣಯ್ ಹತ್ಯೆ ಪ್ರಕರಣದ ಬಗ್ಗೆ ನೀವೆಲ್ಲರೂ ಕೂಡ ಕೇಳೇ ಇರುತ್ತೀರಿ. ಹೌದು ತೆಲಂಗಾಣದಲ್ಲಿ ನಡೆದ ಪ್ರಣಯ್ ಹತ್ಯೆ (Pranay Case Telangana) ಪ್ರಕಾರ ಈ ದೇಶವನ್ನೇ ಬೆಚ್ಚಿ ಬೀಳಿಸಿತ್ತು ಎಂದು ಹೇಳಬಹುದು. 2018 ನೇ ಇಸವಿಯಲ್ಲಿ ತೆಲಂಗಾಣದಲ್ಲಿ ಪ್ರಣಯ್ ಅನ್ನುವ ಯುವಕನಾದ ಮರ್ಯಾದಾ ಹತ್ಯೆ ನಡೆದಿತ್ತು ಮತ್ತು ಈ ಘಟನೆ ಕೇಳಿ ಅದೆಷ್ಟೋ ಜನರು ಬೇಸರವನ್ನು ಹೊರಹಾಕಿದ್ದರು. 2018 ರಲ್ಲಿ ಪ್ರಣಯ್ ಅನ್ನುವ ವ್ಯಕ್ತಿ ಅಮೃತ ಅನ್ನುವ ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಇನ್ನು ಇವರಿಬ್ಬರು ಮದುವೆಯಾದ ಕೆಲವೇ ದಿನಗಳಲ್ಲಿ ಅಮೃತ ಅವರ ಪೋಷಕರು ಪ್ರಣಯ್ ಅನ್ನು ಯುವಕನನ್ನು ಮರ್ಯಾದಾ ಹತ್ಯೆ ಮಾಡಿಸಿದ್ದರು.

WhatsApp Group Join Now
Telegram Group Join Now
amrutha pranay case,pranay amrutha case,miryalaguda pranay amrutha case,amrutha pranay,amrutha pranay case news,pranay amrutha,pranay case,amrutha about pranay,amrutha pranay latest news,amrutha pranay case judgement,miryalaguda pranay case,amrutha pranay miryalaguda incident,pranay amrutha wedding
Pranay And Amrutha Case latest update

ಇಬ್ಬರದ್ದು ಅಂತರ್ಜಾತಿ ವಿವಾಹವಾಗಿತ್ತು
ಹೌದು, ಪ್ರಣಯ್ ಮತ್ತು ಅಮೃತ (Pranay And Amrutha) ಅವರು ಬೇರೆಬೇರೆ ಜಾತಿಯವರಾಗಿದ್ದರು. ಒಬ್ಬರನ್ನ ಒಬ್ಬರು ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಪ್ರಣಯ್ ಮತ್ತು ಅಮೃತ ಮನೆಯವರ ವಿರೋಧದ ನಡುವೆಯೂ ವಿವಾಹ ಮಾಡಿಕೊಂಡಿದ್ದರು. ಇಬ್ಬರ ವಿವಾಹ ಅಮೃತ ಅವರ ಮನೆಯವರಿಗೆ ಸ್ವಲ್ಪಾನು ಇಷ್ಟವಿಲ್ಲ ಮತ್ತು ಇದರಿಂದ ನಮ್ಮ ಮರ್ಯಾದೆ ಹೋಗುತ್ತದೆ ಅನ್ನುವ ಕಾರಣಕ್ಕೆ ಮಗಳನ್ನ ಮದುವೆಯಾಗಿದ್ದ ಪ್ರಣಯ್ ಅನ್ನುವ ಯುವಕನನ್ನು ಹತ್ಯೆ ಮಾಡಿಸಿದ್ದರು. ಅಮೃತಾಳ ತಂದೆ ಮಾರುತಿ ರಾವ್ ಅನ್ನುವವರು ಸುಫಾರಿ ಕೊಟ್ಟು ಪ್ರಣಯ್ ಹತ್ಯೆ ಮಾಡಿಸಿದ್ದರು.

2018 ಸೆಪ್ಟೆಂಬರ್ 04 ರಂದು ನಡೆದಿತ್ತು ಈ ಘಟನೆ
ಪ್ರಣಯ್ ವಿದ್ಯಾಲಗೂಡದಲ್ಲಿ ತನ್ನ ತಾಯಿ ಮತ್ತು ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುತ್ತಿದ್ದ ಸಮಯದಲ್ಲಿ ದುಷ್ಕರ್ಮಿಗಳು ದಾಳಿಮಾಡಿ ಪ್ರಣಯ್ ಗೆ ಚಾಕುವಿನಿಂದ ಇರಿದು ಕೊಂದಿದ್ದರು. ಇನ್ನು ಪ್ರಣಯ್ ಅನ್ನುವ ಈ ಯುವಕನ ಹತ್ಯೆ ಪ್ರಕಾರ ಇಡೀ ತೆಲಂಗಾಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.

7 ವರ್ಷದ ನಂತರ ಬಂತು ತೀರ್ಪು
ಇನ್ನು ಪ್ರಣಯ್ ಹತ್ಯಾ ಪ್ರಕರಣಕ್ಕೆ ಈಗ 7 ವರ್ಷದ ನಂತರ ತೀರ್ಪು ಬಂದಿದೆ. ಇನ್ನು ಈ ಪ್ರಕರಣದಲ್ಲಿ A2 ಆರೋಪಿ ಆಗಿರುವ ಸುಭಾಷ್ ಕುಮಾರ್ ಶರ್ಮ ಅವರಿಗೆ ಕ್ರೂರ ಕೊಲೆ ಆರೋಪದ ಮೇಲೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇನ್ನು ಈ ಪ್ರಾಣದಲ್ಲಿ ಉಳಿದ ಐದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅದೇ ರೀತಿಯಲ್ಲಿ ಈ ಪ್ರಕರಣದಲ್ಲಿ A1 ಆರೋಪಿಯಾಗಿದ್ದ ಅಮೃತಾಳ ತಂದೆ ತನಿಖೆ ನಡೆಯುತ್ತಿರುವ ಸಮಯದಲ್ಲೇ, ಅಂದರೆ 2020 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ 7 ವರ್ಷದ ನಂತರ ಪ್ರಣಯ್ ಹತ್ಯೆಗೆ ನ್ಯಾಯ ಸಿಕ್ಕಿದ್ದು ಇದು ಪ್ರಣಯ್ ಕುಟುಂಬದವರ ಸಂತಸಕ್ಕೆ ಕಾರಣವಾಗಿದೆ.

Leave a Comment