Recurring Deposit Scheme Post Office: ಪೋಸ್ಟ್ ಆಫೀಸ್ (Post Office) ನಲ್ಲಿ ಈಗಾಗಲೇ ಹಲವು ಯೋಜನೆಯನ್ನು ಜಾರಿಗೆ ತರಲಾಗಿದೆ. ಹೌದು, ಹಣ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಒಂದು ಉತ್ತಮವಾದ ವೇದಿಕೆ ಎಂದು ಹೇಳಬಹುದು. ಪೋಸ್ಟ್ ಆಫೀಸ್ ಹೂಡಿಕೆ ಮಾಡಿದರೆ ತಮ್ಮ ಹಣಕ್ಕೆ ಸುರಕ್ಷತೆ ಸಿಗುತ್ತದೆ ಅನ್ನುವ ಕಾರಣಕ್ಕೆ ಸಾಕಷ್ಟು ಜನರು ಪೋಸ್ಟ್ ಆಫೀಸ್ ನಲ್ಲಿ ಕೋಟಿ ಕೋಟಿ ಹಣ ಹೂಡಿಕೆ ಮಾಡುತ್ತಿದ್ದಾರೆ.
ಇದರ ನಡುವೆ ಪೋಸ್ಟ್ ಆಫೀಸ್ ಇನ್ನೊಂದು ಹೊಸ ಯೋಜನೆಗೆ ಜಾರಿಗೆ ಬಂದಿದೆ ಮತ್ತು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಲಕ್ಷ ಲಕ್ಷ ರೂ ಹಣ ಗಳಿಸಬಹುದಾಗಿದೆ. ಹೌದು ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಹೂಡಿಕೆ ಮಾಡುವುದರ ಲಕ್ಷ ಲಕ್ಷ ರೂಪಾಯಿ ಹಣ ಗಳಿಸಬಹುದಾಗಿದೆ. ಹಾಗಾದರೆ ಪೋಸ್ಟ್ ಆಫೀಸ್ ನ ಈ ಯೋಜನೆ ಯಾವುದು ಮತ್ತು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಪೋಸ್ಟ್ ಆಫೀಸ್ ಯೋಜನೆಯಲ್ಲಿ ಲಕ್ಷ ಲಕ್ಷ ರೂ ಲಾಭ
ಮರುಕಳಿಸುವ ಠೇವಣಿ ಯೋಜನೆಯಲ್ಲಿ (Post Office Recurring deposit Scheme) ಹೂಡಿಕೆ ಮಾಡುವುದರ ಮೂಲಕ ಲಕ್ಷ ಲಕ್ಷ ರೂಪಾಯಿ ಲಾಭ ಗಳಿಸಿಕೊಳ್ಳಬಹುದು. ಹೌದು ಪೋಸ್ಟ್ ಆಫೀಸ್ ಈ ಮರುಕಳಿಸುವ ಠೇವಣಿ ಯೋಜನೆಯ ಮೂಲಕ ಲಕ್ಷ ಲಕ್ಷ ರೂ ಲಾಭ ಗಳಿಸಿಕೊಳ್ಳಬಹುದಾಗಿದೆ. ಪೋಸ್ಟ್ ಆಫೀಸ್ ಈ ಮರುಕಳಿಸುವ ಠೇವಣಿ ಯೋಜನೆಯಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡುವುದರ ಮೂಲಕ ಉತ್ತಮ ಲಾಭ ಗಳಿಸಿಕೊಳ್ಳಬಹುದು.

ಏನಿದು ಮರುಕಳಿಸುವ ಠೇವಣಿ ಯೋಜನೆ
ಪೋಸ್ಟ್ ಆಫೀಸ್ ನ ಈ ಮರುಕಳಿಸುವ ಠೇವಣಿ ಯೋಜನೆ ಒಂದು ಉತ್ತಮವಾದ ಲಾಭದಾಯಕ ಯೋಜನೆ ಆಗಿದ್ದು ಈ ಯೋಜನೆಯನ್ನು ಕೇವಲ 100 ರೂ ಕನಿಷ್ಠ ಹಣವನ್ನು ಠೇವಣಿ ಮಾಡುವುದರ ಮೂಲಕ ಹೂಡಿಕೆ ಮಾಡಬಹುದು. ನಿಮ್ಮ ಆದಾಯ ಮೇಲೆ ನೀವು ಹೂಡಿಕೆ ಮಾಡಬಹುದಾಗಿದೆ ಮತ್ತು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ಮಿತಿ ಇರುವುದಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಮರುಕಳಿಸುವ ಠೇವಣಿ ಯೋಜನೆಯ ಲಾಭ ಮತ್ತು ಹೂಡಿಕೆ ವಿಧಾನ
ಹೌದು, ಪೋಸ್ಟ್ ಆಫೀಸ್ ನ ಈ ಮರುಕಳಿಸುವ ಠೇವಣಿ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ 6.7% ಬಡ್ಡಿ ನೀಡಲಾಗುತ್ತದೆ. ಇನ್ನು ಈ ಯೋಜನೆಯಲ್ಲಿ ದಿನಕ್ಕೆ 50 ಅಥವಾ ಅಥವಾ ತಿಂಗಳಿಗೆ 1500 ರೂ ಹೂಡಿಕೆ ಮಾಡುವುದರ ಮೂಲಕ ಲಕ್ಷ ಲಕ್ಷ ರೂ ಲಾಭ ಗಳಿಸಬಹುದು. ತಿಂಗಳಿಗೆ 1500 ರೂ ಹೂಡಿಕೆಯಂತೆ ನೀವು ವರ್ಷಕ್ಕೆ 18000 ರೂ ಹೂಡಿಕೆ ಮಾಡಬೇಕಾಗುತ್ತದೆ.
ವರ್ಷಕ್ಕೆ 18,000 ರೂ ಹೂಡಿಕೆಯಂತೆ 5 ವರ್ಷಕ್ಕೆ 90,000 ರೂ ಹೂಡಿಕೆ ಮಾಡಬೇಕಾಗುತ್ತದೆ. ಇದೆ ರೀತಿಯಲ್ಲಿ ನೀವು ಹೂಡಿಕೆ ಮಾಡಿದರೆ ನೀವು ಐದು ವರ್ಷಕ್ಕೆ 17,500 ರೂ ತನಕ ಬಡ್ಡಿ ಪಡೆಯಬಹುದು ಮತ್ತು ಬಡ್ಡಿ ಕೂಡಿದರೆ ನೀವು ವಾರ್ಷಿಕವಾಗಿ ಹೂಡಿಕೆ ಮಾಡಿದ ಮೊತ್ತ 107500 ರೂ ಆಗುತ್ತದೆ. ಈ ರೀತಿಯಲ್ಲಿ ಐದು ವರ್ಷ ಹೂಡಿಕೆ ಮಾಡಿದ ನಂತರ ನೀವು ಮತ್ತೆ ಅದನ್ನು 5 ವರ್ಷಕ್ಕೆ ಮುಂದುಬಹುದು. ಹೀಗೆ 10 ವರ್ಷ ಹೂಡಿಕೆ ಮಾಡುವುದರ ಮೂಲಕ ಸುಮಾರು 2,56,283 ರೂಪಾಯಿ ಹಣ ಪಡೆಯಬಹುದು.