Cibil Score Low: ಸಾಲ ಮಾಡಲು ಸಿಬಿಲ್ ಸ್ಕೋರ್ (Cibil Score) ಎಷ್ಟು ಅವಶ್ಯಕ ಅನ್ನುವುದು ನಿಮಗೆಲ್ಲ ತಿಳಿದೇ ಇದೆ. ಹೌದು ಯಾವುದೇ ರೀತಿಯ ಸಾಲ ಮಾಡಲು ಸಿಬಿಲ್ ಸ್ಕೋರ್ ಬೇಕೇಬೇಕು ಎಂದು ಹೇಳಬಹುದು. ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ನೀವು ಬ್ಯಾಂಕುಗಳಲ್ಲಿ ಸಾಲ ಪಡೆಯಬಹುದು, ಆದರೆ ಸಿಬಿಲ್ ಸ್ಕೋರ್ ಚನ್ನಾಗಿ ಇಲ್ಲದಿದ್ದರೆ ನೀವು ಯಾವುದೇ ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಲು ಸಾಧ್ಯವಿಲ್ಲ.
ಸಾಲ ಸರಿಯಾಗಿ ತೀರಿಸದೆ ಇದ್ದರೆ, ಅಥವಾ ಹೆಚ್ಚು ಹೆಚ್ಚು ಸಾಲ ಮಾಡಿಕೊಂಡಿದ್ದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಆಗುತ್ತದೆ. ಇದರ ನಡುವೆ ಸಾಕಷ್ಟು ಜನರಿಗೆ ಸಿಬಿಲ್ ಹೇಗೆ ಏರಿಕೆ ಮಾಡಿಕೊಳ್ಳುವುದು ಅನ್ನುವುದರ ಬಗ್ಗೆ ಮಾಹಿತಿ ಇಲ್ಲ. ಹಾಗಾದರೆ ಒಮ್ಮೆ ಸಿಬಿಲ್ ಸ್ಕೋರ್ ಕಡಿಮೆಯಾದರೆ ಎಷ್ಟು ದಿನಗಳಲ್ಲಿ ಏರಿಕೆ ಮಾಡಿಕೊಳ್ಳಬಹುದು ಮತ್ತು ಅದರ ಪ್ರಕ್ರಿಯೆ ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಿಬಿಲ್ ಸ್ಕೋರ್ ಎಷ್ಟು ದಿನಗಳಲ್ಲಿ ಏರಿಕೆ ಆಗುತ್ತದೆ
ಒಮ್ಮೆ ನಿಮ್ಮ ಸಿಬಿಲ್ ಸ್ಕೋರ್ ಹಾಳಾದರೆ ಅದನ್ನು ಅಷ್ಟು ಸುಲಭವಾಗಿ ಏರಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ಸಿಬಿಲ್ ಸ್ಕೋರ್ ಹಾಳಾದರೆ ಅದನ್ನು ಸರಿಪಡಿಸಿಕೊಳ್ಳಲು ನೀವು ಹಲವು ಸಮಯ ಕಾಯಬೇಕಾಗುತ್ತದೆ. ಇನ್ನು ಒಮ್ಮೆ ನಿಮ್ಮ ಸಿಬಿಲ್ ಸ್ಕೋರ್ ಹಾಳಾದರೆ ಅದನ್ನು ಸರಿಪಡಿಸಿಕೊಳ್ಳಲು ಸುಮಾರು 6 ತಿಂಗಳು ಅಥವಾ ಒಂದು ವರ್ಷದ ತನಕ ನೀವು ಕಾಯಬೇಕಾಗುತ್ತದೆ. ಈ ಕಾರಣಗಳಿಂದ ಸಿಬಿಲ್ ಕಾಪಾಡಿಕೊಳ್ಳಲು ಕಾಲಕಾಲಕ್ಕೆ ಅದನ್ನು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. ನೀವು ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡು ಅದನ್ನು ಸರಿಯಾದ ಸಮಯದಲ್ಲಿ ತೀರಿಸದೆ ಇದ್ದರೆ ನಿಮ್ಮ ಸಿಬಿಲ್ ಸ್ಕೋರ್ ಹಾಳಾಗುವುದು ಖಚಿತ.

ಸಿಬಿಲ್ ಸ್ಕೋರ್ ಕಾಪಾಡಿಕೊಳ್ಳುವುದು ಹೇಗೆ
* ಕಾಲಕಾಲಕ್ಕೆ ನಿಮ್ಮ ನಿಮ್ಮ ಬ್ಯಾಂಕ್ EMI ಗಳನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡಬೇಕು.
* ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಸರಿಯಾದ ದಿನಾಂಕಕ್ಕೆ ಪಾವತಿ ಮಾಡಿ
* ಜಂಟಿ ಸಾಲ ಪಡೆದುಕೊಳ್ಳುವ ಸಮಯದಲ್ಲಿ ಎಚ್ಚರ ವಹಿಸುವುದು ಬಹಳ ಉತ್ತಮ.
* ಸಣ್ಣ ಸಾಲ ತಗೆದುಕೊಂಡಿದ್ದರೆ ಅದನ್ನು ಆದಷ್ಟು ಬೇಗ ಪಾವತಿ ಮಾಡಬೇಕು, ಇಲ್ಲವಾದರೆ ನಿಮ್ಮ ಸಿಬಿಲ್ ಸ್ಕೋರ್ ನಾಶವಾಗುತ್ತದೆ.
* ನಿಮ್ಮ ಕ್ರೆಡಿಟ್ ಕಾರ್ಡ್ ಅನುಪಾತ ಕಾಪಾಡಿಕೊಳ್ಳದೆ ಇದ್ದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ.
* ನೀವು ಬೇರೆಯವರ ಸಾಲಕ್ಕೆ ಜಾಮೀನು ಹಾಕಿದ್ದು ಅವರು ಸಾಲ ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡದೆ ಇದ್ದರೆ ನಿಮ್ಮ ಸಿಬಿಲ್ ಸ್ಕೋರ್ ಹಾಳಾಗುವ ಸಾಧ್ಯತೆ ಇದೆ.