Gold Loan: ಚಿನ್ನಾಭರಣಗಳನ್ನು ಬ್ಯಾಂಕ್ ಹಾಗು ಫೈನಾನ್ಸ್ ಗಳಲ್ಲಿ ಅಡವಿಟ್ಟು ಸಾಲ ಪಡೆದವರಿಗೆ ದೊಡ್ಡ ರಿಲೀಫ್! ನಿಯಮಗಳಲ್ಲಿ ಬದಲಾವಣೆ

Gold Loan New Rules: ಈಗಿನ ಕಾಲದಲ್ಲಿ ಹಣದ ಅವಶ್ಯಕತೆ ಎಲ್ಲರಿಗೂ ಇದ್ದೆ ಇರುತ್ತದೆ. ಹಣಕ್ಕಾಗಿ ಸಾಕಷ್ಟು ಜನರು ಸಾಲ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಅದೇ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಪಡೆದುಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಮೈಕ್ರೋ ಫೈನಾನ್ಸ್ (Micro Finance) ಗಳ ಹಾವಳಿ ತಡೆಗಟ್ಟುವ ಉದ್ದೇಶದಿಂದ ಈಗಾಗಲೇ ರಾಜ್ಯ ಸರ್ಕಾರ ಕೆಲವು ನಿಯಮವನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ. 

WhatsApp Group Join Now
Telegram Group Join Now

ಇದರ ನಡುವೆ ಈಗ ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಹೌದು ಫೈನಾನ್ಸ್ ಗಳಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡವರಿಗೆ ಈಗ ಗುಡ್ ನ್ಯೂಸ್ ನೀಡಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಹೊಸ ನಿಯಮ ಜಾರಿಗೆ ತಂದಿದೆ.

ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡವರಿಗೆ ಗುಡ್ ನ್ಯೂಸ್
ಹೌದು, ಅನಧಿಕೃತ ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈಗ ರಾಜತ ಸರ್ಕಾರ ರಾಜ್ಯದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದರ ಮೂಲಕ ಹೊಸ ನಿಯಮ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಇದರ ನಡುವೆ ಗೋಲ್ಡ್ ಲೋನ್ ದಂದೆಯಾಗಿ ಮಾಡಿಕೊಳ್ಳಲಾಗುತ್ತಿದೆ ಮತ್ತು ಗೋಲ್ಡ್ ಲೋನ್ ಕೊಟ್ಟು ಹಿಂಸೆ ನೀಡುತ್ತಿರುವುದು ಕೂಡ ಸರ್ಕಾರದ ಗಮನಕ್ಕೆ ಬಂದಿದೆ.

ಚಿನ್ನ ಅಡವಿಟ್ಟುಕೊಂಡು ಮೋಸ ಮಾಡಲಾಗುತ್ತಿದೆ
ಇತ್ತೀಚಿಗೆ ಮಧ್ಯದಲ್ಲಿ ಚಿನ್ನ ಅಡವಿಟ್ಟು ಸಾಲ ಕೊಟ್ಟ ಖಾಸಗಿ ಕಂಪನಿಯೊಂದು ಜನರಿಗೆ ಮೋಸ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಒಟ್ಟಾರೆಯಾಗಿ ಅಮಾಯಕರನ್ನು ಟಾರ್ಗೆಟ್ ಮಾಡಿ ಅವರಿಗೆ ವಂಚನೆ ಮಾಡುತ್ತಿರುದು ಸರ್ಕಾರದ ಗಮನಕ್ಕೆ ಬಂದಿದೆ ಮತ್ತು ಈ ಕಾರಣಗಳಿಂದ ಸರ್ಕಾರ ಮೈಕ್ರೋ ಫೈನಾನ್ಸ್ ಗಳು ಕೊಡುವ ಸಾಲಕ್ಕೆ ಪಾರದರ್ಶಕತೆ ಇರಬೇಕು ಎಂದು ಆದೇಶ ಹೊರಡಿಸಿದೆ.

ಇನ್ನುಮುಂದೆ ಮೈಕ್ರೋ ಫೈನಾನ್ಸ್ ಗಳು ಸಾಲ ಕೊಡುವ ಸಮಯದಲ್ಲಿ ಯಾವುದೇ ವಸ್ತುವನ್ನು ಗಿರವಿ ಇರಿಸಿಕೊಳ್ಳುವಂತೆ ಇಲ್ಲಾ ಎಂದು ಆದೇಶ ಹೊರಡಿಸಿದೆ. ಗಿರವಿ ಕೊಟ್ಟುಕೊಂಡು ಸಾಲ ಕೊಟ್ಟು ನಂತರ ಹಿಂಸೆ ಕೊಟ್ಟರೆ ಅವರಿಗೆ 10 ವರ್ಷ ಜೈಲು ಮತ್ತು 5 ಲಕ್ಷ ರೂ ದಂಡ ಹಾಕಲು ಆದೇಶ ಹೊರಡಿಸಲಾಗಿದೆ.

ಎಲ್ಲಾ ಫೈನಾನ್ಸ್ ಗಳಿಗೆ ಈ ನಿಯಮ ಅನ್ವಯ
ರಾಜ್ಯ ಸರ್ಕಾರ ನೀಡಿರುವ ಆದೇಶ ಪ್ರಕಾರ ಈ ನಿಯಮ ಮೈಕ್ರೋ ಫೈನಾನ್ಸ್ ಮತ್ತು ಸಣ್ಣ ಫೈನಾನ್ಸ್ ಗಳಿಗೆ ಅನ್ವಯ ಆಗಲಿದೆ. ಇನ್ನುಮುಂದೆ ಸಾಲ ಕೊಡುವ ಸಮಯದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಇತರೆ ಸಣ್ಣ ಹಣಕಾಸು ಸಂಸ್ಥೆಗಳು ಯಾವುದೇ ವಸ್ತು ಅಥವಾ ಯಾವುದೇ ದಸ್ತಾವೇಜುಗಳನ್ನು ಗಿರವಿ ಇಟ್ಟುಕೊಳ್ಳುವಂತಿಲ್ಲ. ಸದ್ಯ ಮೈಕ್ರೋ ಫೈನಾನ್ಸ್ ಹಾವಳಿ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈಗ ರಾಜ್ಯಾದ್ಯಂತ ಈ ಹೊಸ ಜಾರಿಗೆ ತಂದಿದೆ.

Leave a Comment