Gruha Lakshmi January: ಈ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಜನವರಿ ತಿಂಗಳ 2000 ರೂ ಜಮಾ, ಈ ರೀತಿ ಚೆಕ್ ಮಾಡಿಕೊಳ್ಳಿ

Gruha Lakshmi January Money Release: ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಹಣಕ್ಕಾಗಿ ಕಾಯುತ್ತಿರುವ ರಾಜ್ಯದ ಎಲ್ಲಾ ಮಹಿಳೆಯರಿಗೆ ಈಗ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹೌದು ಕಳೆದ ಎರಡು ತಿಂಗಳಿಂದ ರಾಜ್ಯದ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ. ಕೆಲವು ತಾಂತ್ರಿಕ ದೋಷಗಳ ಕಾರಣ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮಾ ಆಗದೆ ಬಾಕಿ ಉಳಿದುಕೊಂಡಿತ್ತು. 

WhatsApp Group Join Now
Telegram Group Join Now
ಇದರ ನಡುವೆ ಈಗ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ. ಹೌದು ರಾಜ್ಯದ ಮಹಿಳೆಯರ ಖಾತೆಗೆ ಈಗ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಿದೆ. ಹಾಗಾದರೆ ಯಾವ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಯಾವ ತಿಂಗಳ ಹಣ ಬಿಡುಗಡೆ ಆಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನವರಿ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಜಮಾ
ಹೌದು, ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. DBT ಕರ್ನಾಟಕ ಮೂಲಕ ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಹಣವನ್ನು ರಾಜ್ಯದ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ಇನ್ನು ಮಹಿಳೆಯರು DBT ಕರ್ನಾಟಕ ಅಪ್ಲಿಕೇಶನ್ (DBT Karnataka Application) ಇನ್ಸ್ಟಾಲ್ ಮಾಡಿಕೊಳ್ಳುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಕೂಡ ಚೆಕ್ ಮಾಡಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ (Google Playstore) DBT ಕರ್ನಾಟಕ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ನಿಮ್ಮ ಆಧಾರ್ ಸಂಖ್ಯೆ ಹಾಕಿ ಲಾಗಿನ್ ಮಾಡಿಕೊಂಡರೆ ನೀವು ನಿಮ್ಮ ಖಾತೆಗೆ ಯಾವ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ದಿನಾಂಕದಂದು ಜಮಾ ಆಗಿದೆ ಅನ್ನುವುದರ ಬಗ್ಗೆ ತಿಳಿದುಕೊಳ್ಳಬಹುದು.

Gruha Lakshmi scheme money credit
Gruha Lakshmi scheme latest update kannada


ಬಾಕಿ ಉಳಿದುಕೊಂಡಿದೆ ಫೆಬ್ರವರಿ ತಿಂಗಳ ಹಣ

ಸದ್ಯ ಜನವರಿ ತಿಂಗಳ ಗೃಹಲಕ್ಷ್ಮಿ ಯೋಜನೆಯ 2000 ರೂ ಹಣವನ್ನು ಬಿಡುಗಡೆ ಮಾಡಲಾಗಿದೆ ಮತ್ತು ಫೆಬ್ರವರಿ 2000 ರೂ ಇನ್ನೂ ಕೂಡ ಬಾಕಿ ಉಳಿದುಕೊಂಡಿದೆ. ಮಾರ್ಚ್ ತಿಂಗಳ ಅಂತ್ಯದ ಒಳಗಾಗಿ ಮಹಿಳೆಯರ ಖಾತೆಗೆ ಬಾಕಿ ಇರುವ ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಜಮಾ ಮಾಡಲಾಗುತ್ತದೆ. ಸದ್ಯ ರಾಜ್ಯ ಬಜೆಟ್ ನಲ್ಲಿ ಕೂಡ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಕೆಲವು ನಿರ್ಧಾರ ತಗೆದುಕೊಳ್ಳಲಾಗಿದೆ. ಹೌದು, ಇನ್ನುಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡುವಲ್ಲಿ ಯಾವುದೇ ಲೋಪದೋಷ ಆಗಬಾರದು ಅನ್ನುವ ಉದ್ದೇಶದಿಂದ ಈಗ ಮತ್ತೆ ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಅಕ್ಕ ಕೋ-ಆಪರೇಟಿವ್ ಸೊಸೈಟಿ ಮೂಲಕ ಹಣ ಜಮಾ
ಗೃಹಲಕ್ಷ್ಮಿ ಯೋಜನೆಯನ್ನು ಇನ್ನುಮುಂದೆ ಅಕ್ಕ ಕೋ-ಆಪರೇಟಿವ್ ಸೊಸೈಟಿ ಮೂಲಕ ಜಮಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಮತ್ತು ಬಜೆಟ್ ನಲ್ಲಿ ಕೂಡ ಈ ಬಗ್ಗೆ ತೀರ್ಮಾನವನ್ನು ತಗೆದುಕೊಳ್ಳಲಾಗಿದೆ. ಇನ್ನುಮುಂದೆ ಅಕ್ಕ ಕೋ-ಆಪರೇಟಿವ್ ಸೊಸೈಟಿ ಮೂಲಕ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಎಲ್ಲಾ ಕಂತುಗಳ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ. ಪ್ರತಿ ತಿಂಗಳು ಒಂದು ನಿಗದಿ ದಿನಾಂಕದಂದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ರಾಜ್ಯದ ಮಹಿಳೆಯರ ಖಾತೆಗೆ ಜಮಾ ಮಾಡಲು ಈಗ ಸರ್ಕಾರ ಮುಂದಾಗಿದೆ.

ಈ ಮಹಿಳೆಯರ ಖಾತೆಗೆ ಬರಲ್ಲ ಗೃಹಲಕ್ಷ್ಮಿ ಹಣ
ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ಯಾವ ಮಹಿಳೆಯರು ಇನ್ನು ಕೂಡ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್, ಪಾನ್ ಕಾರ್ಡ್ ಸಂಖ್ಯೆ ಲಿಂಕ್, KYC ಅಪ್ಡೇಟ್, NPCI ಮ್ಯಾಪಿಂಗ್ ಮತ್ತು ಮೊಬೈಲ್ ಸಂಖ್ಯೆ ಇನ್ನೂ ಕೂಡ ಲಿಂಕ್ ಮಾಡಿಸಿಕೊಂಡಿಲ್ಲವೋ ಅಂತಹ ಮಹಿಳೆಯರು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಈ ಮೂಲಕ ಖಚಿತಪಡಿಸಿದೆ.

Leave a Comment