New Property Law: ಆಸ್ತಿ ಮಾರಾಟ ಮತ್ತು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಕೆಲವು ಹೊಸ ನಿಯಮ ಜಾರಿಗೆ ತಂದಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ. ಹೌದು ಹೆತ್ತವರ ಮತ್ತು ವಂಶ ಪಾರಂಪರಿಕವಾಗಿ ಬಂದ ಆಸ್ತಿಯ ಹಂಚಿಕೆಯಲ್ಲಿ ಕೆಲವು ವ್ಯಾಜ್ಯಗಳು ನಡೆಯುತ್ತಲೇ ಇರುತ್ತದೆ. ಇದರ ನಡುವೆ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಭಾರತದಲ್ಲಿ ಈಗಾಗಲೇ ಅನೇಕ ಕಾನೂನುಗಳು ಜಾರಿಯಲ್ಲಿ ಇದೆ.
ಇದರ ನಡುವೆ ಈಗ ಭಾರತದಲ್ಲಿ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತರಲಾಗಿದೆ ಮತ್ತು ಈ ನಿಯಮದ ದೇಶದ ಎಲ್ಲಾ ನಾಗರಿಕರಿಗೆ ಅನ್ವಯ ಆಗಲಿದೆ. ಹಾಗಾದರೆ ತಂದೆ ತಾಯಿ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಜಾರಿಗೆ ಬಂದಿರುವ ಹೊಸ ಕಾನೂನು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಮತ್ತು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.
ತಂದೆ ತಾಯಿ ಮಾಡಿಟ್ಟ ಆಸ್ತಿಯಲ್ಲಿ ಇನ್ನುಮುಂದೆ ಸುಲಭವಾಗಿ ಪಾಲು ಸಿಗಲ್ಲ
ಹೌದು, ಈ ಹಿಂದೆ ಮಕ್ಕಳು ತಂದೆ ಮತ್ತು ತಾಯಿ ಮಾಡಿಟ್ಟ ಆಸ್ತಿಯಲ್ಲಿ ಸುಲಭವಾಗಿ ಪಾಲು ಪಡೆದುಕೊಳ್ಳುತ್ತಿದ್ದರು, ಆದರೆ ಇನ್ನುಮುಂದೆ ತಂದೆ ಮತ್ತು ತಾಯಿ ಮಾಡಿಟ್ಟ ಆಸ್ತಿಯಲ್ಲಿ ಯಾರಿಗೂ ಸುಲಭವಾಗಿ ಪಾಲು ಸಿಗುವುದಿಲ್ಲ. ಹೌದು, ಭಾರತ ಸರ್ಕಾರ ಈಗ ತಂದೆ ತಾಯಿ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿಗೆ ತಂದಿದೆ ಮತ್ತು ಮಕ್ಕಳು ಆಸ್ತಿಯಲ್ಲಿ ಪಾಲು ಪಡೆದುಕೊಳ್ಳುವ ಮುನ್ನ ಈ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಈ ಕಾನೂನು ಹೇಳುತ್ತದೆ.

ಇನ್ನುಮುಂದೆ ಈ ಕೆಲಸ ಮಾಡಿದರೆ ಮಾತ್ರ ಹೆತ್ತವರ ಆಸ್ತಿಯಲ್ಲಿ ಪಾಲು
ಹೌದು, ಸಾಕಷ್ಟು ಮಕ್ಕಳು ಹೆತ್ತವರ ಆಸ್ತಿ ಸಿಕ್ಕಮೇಲೆ ಅವರನ್ನು ಬೀದಿಪಾಲು ಮಾಡುತ್ತಿದ್ದಾರೆ. ಆಸ್ತಿಯನ್ನು ತಮ್ಮ ಪಾಲಿಗೆ ಬರೆಸಿಕೊಂಡು ನಂತರ ಹೆತ್ತವರನ್ನು ನಡುನೀರಿನಲ್ಲಿ ಕೈಬಿಡುತ್ತಿದ್ದಾರೆ. ಅದೆಷ್ಟೋ ಪೋಷಕರು ಎಲ್ಲವನ್ನು ಕಳೆದುಕೊಂಡು ವೃದ್ದಾಶ್ರಮ ಸೇರಿಸಿರುವ ಅದೆಷ್ಟೋ ಉದಾಹರಣೆಯನ್ನು ನಾವು ನೀವೆಲ್ಲ ಕೇಳಿದ್ದೇವೆ. ಈ ಕಾರಣಗಳಿಂದ ಸರ್ಕಾರ ಈಗ ಆಸ್ತಿ ಪಾಲು ಪಡೆಯುವ ಎಲ್ಲಾ ಮಕ್ಕಳಿಗೆ ಹೊಸ ನಿಯಮ ಜಾರಿಗೆ ತಂದಿದೆ.
ಇನ್ನು ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಪ್ರಕಾರ, ಆಸ್ತಿಯಲ್ಲಿ ಪಾಲು ಪಡೆದುಕೊಂಡ ಮಕ್ಕಳು ಹೆತ್ತವರನ್ನು ಕಡೆಯತನಕ ನೋಡಿಕೊಳ್ಳದೆ ಇದ್ದರೆ ಅಥವಾ ಅನಾಥ ಆಶ್ರಮಕ್ಕೆ ಸೇರಿಸಿದ ಸಮಯದಲ್ಲಿ ಹೆತ್ತವರು ಮಕ್ಕಳಿಗೆ ಕೋಟ ಆಸ್ತಿಯನ್ನು ಮರಳಿ ವಾಪಾಸ್ ಪಡೆದುಕೊಳ್ಳಬಹುದು ಮತ್ತು ದಾನಪತ್ರ ರದ್ದು ಮಾಡುವ ಸಂಪೂರ್ಣ ಹಕ್ಕನ್ನು ಪೋಷಕರು ಹೊಂದಿರುತ್ತಾರೆ ಎಂದು ಭಾರತ ಸರ್ಕಾರ ಹೊಸ ಕಾನೂನನ್ನು ದೇಶದಲ್ಲಿ ಜಾರಿಗೆ ತಂದಿದೆ.
ಇನ್ನುಮುಂದೆ ಪೋಷಕರು ನಿಮಗೆ ಕೊಟ್ಟ ದಾನಪತ್ರ ರದ್ದು ಮಾಡಬಹುದು
ಹೆತ್ತವರು ಮಕ್ಕಳಿಗೆ ಆಸ್ತಿ ಹಂಚಿಕೆಯನ್ನು ಮಾಡಿ ನಂತರ ಮಕ್ಕಳಿಂದ ಕಷ್ಟ ಅನುಭವಿಸಿದರೆ ಅಥವಾ ಅನಾಥ ಆಶ್ರಮಕ್ಕೆ ಬಂದರೆ ಅವರು ಆ ಆಸ್ತಿ ದಾನಪತ್ರ ರದ್ದುಮಾಡುವ ಸಂಪೂರ್ಣ ಹಕ್ಕು ಹೊಂದಿರುತ್ತಾರೆ ಎಂದು “ಪೋಷಕರು ಮತ್ತು ಹಿರಿಯ ನಾಗರೀಕ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ’ಯನ್ನು ದೇಶದಲ್ಲಿ ಜಾರಿಗೆ ತರಲಾಗಿದೆ. ಇನ್ನು ಈ ಕಾಯ್ದೆಯಲ್ಲಿ ಮಕ್ಕಳು ಪೋಷಕರ ಆರೈಕೆ ಮಾಡಬೇಕು ಮತ್ತು ಅವರ ಸಂಪೂರ್ಣ ಆರೋಗ್ಯ ಮತ್ತು ಔಷಧಿ ಖರ್ಚು ನೋಡಿಕೊಳ್ಳಬೇಕು, ಒಂದುವೇಳೆ ನೋಡಿಕೊಳ್ಳದೆ ಇದ್ದರೆ ಪೋಷಕರು ಸೆಕ್ಷನ್ 9 ರ ಅಡಿಯಲ್ಲಿ ದೂರು ದಾಖಲಿಸಬಹುದು.