Note Print: 100 ಮತ್ತು 200 ರೂ ನೋಟ್ ಬಳಸುವವರಿಗೆ ಹೊಸ ಸೂಚನೆ, RBI ಮಹತ್ವದ ಘೋಷಣೆ

Currancy Notes: RBI ಇತ್ತೀಚಿನ ದಿನಗಳಲ್ಲಿ ಹಣಕಾಸು ಕ್ಷೇತ್ರದಲ್ಲಿ ಕೆಲವು ಬದಲಾವಣೆ ಮಾಡುತ್ತಿರುವುದನ್ನು ನಾವು ನೀವೆಲ್ಲರೂ ಕೂಡ ಗಮನಿಸಬಹುದಾಗಿದೆ. ಹೌದು ನೋಟುಗಳಿಗೆ ಸಂಬಂಧಿಸಿದಂತೆ ಈಗಾಗಲೇ RBI ಅನೇಕ ಹೊಸ ನಿಯಮ ಜಾರಿಗೆ ತಂದಿದೆ. ಹಣಕಾಸು ಕ್ಷೇತ್ರದಲ್ಲಿ ಅನೇಕ ವಂಚನೆ ಉಂಟಾಗುತ್ತಿರುವ ಕಾರಣ RBI ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆ ಜಾರಿಗೆ ತಂದಿರುವುದನ್ನು ನಾವು ಗಮನಿಸಬಹುದು. ಇದರ ನಡುಗೆ ಈಗ 100 ರೂ, ಮತ್ತು 200 ರೂ ನೋಟುಗಳಿಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತರಲಾಗಿದೆ. ನೋಟುಗಳ ವಿಷಯವಾಗಿ ಜನರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ RBI ಈಗ ಮಹತ್ವದ ಸೂಚನೆ ನೀಡಿದೆ.

WhatsApp Group Join Now
Telegram Group Join Now

ದೇಶದಲ್ಲಿ ಹೆಚ್ಚಾಗುತ್ತಿದೆ ನಕಲಿ ನೋಟುಗಳ ಹಾವಳಿ
ಹೌದು ದೇಶದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾದ ಕಾರಣ ನರೇಂದ್ರ ಮೋದಿಯವರು ಭಾರತದಲ್ಲಿ 500 ರೂ ಮತ್ತು 1000 ರೂ ನೋಟುಗಳನ್ನು ಬ್ಯಾನ್ ಮಾಡಿದ್ದರು. ದೇಶದಲ್ಲಿ ನೋಟುಗಳನ್ನು ಬ್ಯಾನ್ ಮಾಡಿದ ನಂತರ 2000 ರೂ ಮತ್ತು 500 ರೂಪಾಯಿಯ ಹೊಸ ನೋಟುಗಳನ್ನು ದೇಶದಲ್ಲಿ ಜಾರಿಗೆ ತರಲಾಗಿತ್ತು. ಕಳೆದ ವರ್ಷ 2000 ರೂ ನೋಟುಗಳನ್ನು ಕೂಡ RBI ಬ್ಯಾನ್ ಮಾಡುವುದರ ಮೂಲಕ ಜನರಿಗೆ ಆಘಾತ ನೀಡಿತ್ತು. ದೇಶದಲ್ಲಿ ನೋಟುಗಳಿಗೆ ಸಂಬಂಧಿಸಿದಂತೆ ಎಷ್ಟೇ ಹೊಸ ನಿಯಮ ಜಾರಿಗೆ ತಂದಿದ್ದರೂ ಕೂಡ ನಕಲಿ ನೋಟುಗಳ ಹಾವಳಿ ಬಹಳ ಹೆಚ್ಚಾಗಿದೆ ಎಂದು ಹೇಳಬಹುದು.

RBI new rules on currancy notes
100 and 200 rupees note details

100 ರೂ ಮತ್ತು 200 ರೂ ನೋಟುಗಳನ್ನು ಬಳಸುವವರಿಗೆ ಹೊಸ ಸೂಚನೆ
ಹೌದು RBI ಈಗ 100 ಮತ್ತು 200 ರೂ ನೋಟುಗಳಿಗೆ ಸಮಂಧಿಸಿದಂತೆ ಇನ್ನೊಂದು ಮಹತ್ವದ ಸೂಚನೆ ನೀಡಿದೆ. ಹೌದು ಸದ್ಯ RBI ಗವರ್ನರ್ ಈಗ ಬದಲಾಗಲಿದೆ. ಈ ಹಿಂದೆ ಶಕ್ತಿಕಾಂತ ದಾಸ್ (Shaktikanta Das) ಅವರು RBI ಗವರ್ನರ್ ಆಗಿದ್ದರು, ಆದರೆ ಈಗ RBI ಗವರ್ನರ್ ಆಗಿ ಸಂಜಯ್ ಮಲ್ಹೋತ್ರ ಅವರು ನೇಮಕ ಆಗಿದ್ದಾರೆ. ಈ ಹಿಂದೆ ಎಲ್ಲಾ ನೋಟುಗಳು ಶಕ್ತಿಕಾಂತ ದಾಸ್ ಅವರ ಸಿಗ್ನೇಚರ್ ನಲ್ಲಿ ಮುದ್ರಣ ಆಗುತ್ತಿತ್ತು, ಆದರೆ ಇನ್ನುಮುಂದೆ ಮುಂದಿನ ದಿನಗಳಲ್ಲಿ RBI ಪ್ರಿಂಟ್ ಮಾಡುವ ಎಲ್ಲಾ ನೋಟುಗಳು RBI ನ ಈಗಿನ ಗವರ್ನರ್ ಆಗಿರುವ ಸಂಜಯ್ ಮಲ್ಹೋತ್ರ ಅವರ ಸಿಗ್ನೇಚರ್ ನಲ್ಲಿ ಮುದ್ರಣ ಆಗಲಿದೆ ಎಂದು RBI ತಿಳಿಸಿದೆ.

ನೋಟುಗಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ
ಇನ್ನು RBI ಮುಂದಿನ ದಿನಗಳಲ್ಲಿ ಪ್ರಿಂಟ್ ಮಾಡುವ ನೋಟುಗಳಲ್ಲಿ ಸಂಜಯ್ ಮಲ್ಹೋತ್ರ ಅವರ ಸಹಿ ಮಾತ್ರ ಇರಲಿದೆ, ಆದರೆ ನೋಟಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು RBI ತಿಳಿಸಿದೆ. ಅದೇ ರೀತಿಯಲ್ಲಿ ಹಳೆಯ ನೋಟುಗಳಲ್ಲಿ ಹಳೆಯ ಗವರ್ನರ್ ಸಹಿ ಇರಲಿದ್ದು ಯಾರೂ ಕೂಡ ಗೊಂದಲಕ್ಕೆ ಒಳಗಾಗುವ ಅಗತ್ಯ ಇರುವುದಿಲ್ಲ. ಹೌದು ಹಳೆಯ ನೋಟುಗಳಲ್ಲಿ ಹಳೆಯ ಗವರ್ನರ್ ಸಹಿ ಇರಲಿದೆ ಮತ್ತು ಹೊಸದಾಗಿ ಮುದ್ರಣ ಆಗುವ ಎಲ್ಲಾ ನೋಟುಗಳಲ್ಲಿ ಹೊಸ ಗವರ್ನರ್ ಸಹಿ ಇರಲಿದೆ. ದೇಶದಲ್ಲಿ ನಕಲು ನೋಟುಗಳ ಹಾವಳಿ ಹೆಚ್ಚಾಗಿದ್ದು ಇನ್ನುಮುಂದೆ ನಕಲಿ ನೋಟುಗಳ ಹಾವಳಿ ಸ್ವಲ್ಪ ಕಡಿಮೆ ಆಗಲಿದೆ, ಮತ್ತು ಅದಕ್ಕೆ ಹೊಸ ನೋಟುಗಳಲ್ಲಿ ಪ್ರಿಂಟ್ ಆಗುವ ಹೊಸ ಗವರ್ನರ್ ಸಹಿ ಎಂದು ಹೇಳಬಹುದು.

Leave a Comment