BPL card benifits:ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ ಮಹಿಳೆಯರಿಗಾಗಿ ವಿವಿಧ ಯೋಜನೆಯನ್ನು ಜಾರಿಗೆ ತಂದಿದೆ. ಹೌದು ಲೋಕಸಭಾ ಚುನಾವಣೆಯ ಸಮಯದಲ್ಲಿ ಐದು ಗ್ಯಾರೆಂಟಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಆ ಐದು ಘೋಷಣೆಯನ್ನು ಯಶಸ್ವಿಯಾಗಿ ರಾಜ್ಯದಲ್ಲಿ ಜಾರಿಗೆ ತಂದಿತ್ತು. ಇನ್ನು ರಾಜ್ಯದ ಮಹಿಳೆಯರಿಗಾಗಿ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ನಡುವೆ ರಾಜ್ಯ ಸರ್ಕಾರ ಮಹಿಳೆಯರು ಇನ್ನೊಂದು ಹೊಸ್ಸ ಯೋಜನೆ ಜಾರಿಗೆ ತರಬೇಕು ಎಂದು BJP ಶಾಸಕರೊಬ್ಬರು ಬೇಡಿಕೆ ಇಟ್ಟಿದ್ದಾರೆ. ಹೌದು ರಾಜ್ಯದಲ್ಲಿ ಮಹಿಳೆಯರು ಸೀರೆ ಉಚಿತವಾಗಿ ಕೊಡಬೇಕು ಎಂದು ಬಿಜೆಪಿ ಶಾಸಕರೊಬ್ಬರು ಬೇಡಿಕೆ ಇಟ್ಟಿದ್ದಾರೆ.
BPL ಕಾರ್ಡ್ ಇರುವ ಮಹಿಳೆಯರಿಗೆ ವರ್ಷಕ್ಕೆ ಎರಡು ಸೀರೆ
BPL ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ವರ್ಷಕ್ಕೆ ಎರಡು ಸೀರೆ ಉಚಿತವಾಗಿ ಕೊಡಬೇಕು ಎಂದು ಬಿಜೆಪಿ ಶಾಸಕರೊಬ್ಬರು ಕಾಂಗ್ರೆಸ್ ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದಾರೆ. ರಾಜ್ಯ ಸರ್ಕಾರ ಮಹಿಳೆಯರನ್ನು ಓಲೈಕೆ ಮಾಡುವ ಉದ್ದೇಶದಿಂದ ಈಗಾಗಲೇ ಅನೇಕ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಈಗ BPL ಕಾರ್ಡ್ ಹೊಂದಿರುವ ರಾಜ್ಯದ ಮಹಿಳೆಯರಿಗೆ ಪ್ರತಿ ವರ್ಷಕ್ಕೆ ಎರಡು ಸೀರೆ ಉಚಿತವಾಗಿ ಕೊಡುವ ಯೋಜನೆಯನ್ನು ಜಾರಿಗೆ ತರಬೇಕು ಎಂದು ಬಿಜೆಪಿ ಶಾಸಕರೊಬ್ಬರು ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರೀ ನೌಕರಿಯಲ್ಲಿ ಇರುವ ಮಹಿಳೆಯರಿಗೂ ಸೀರೆ ಕೊಡಿ
ಬರಿ BPL ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಾತ್ರವಲ್ಲದೆ ಸರ್ಕಾರೀ ನೌಕರಿಯಲ್ಲಿ ಇರುವ ಮಹಿಳೆಯರಿಗೆ ಕೂಡ ಸರ್ಕಾರ ವರ್ಷಕ್ಕೆ ಎರಡು ಸೀರೆಗಳನ್ನು ಉಚಿತವಾಗಿ ಕೊಡಬೇಕು ಎಂದು ಶಾಸಕ ಸಿದ್ದು ಸವದಿ ಅವರು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ಮುಂದೆ ವಿಶೇಷವಾದ ಬೇಡಿಕೆ ಇಟ್ಟಿದ್ದಾರೆ. ಮಹಿಳೆಯರಿಗೆ ವರ್ಷಕ್ಕೆ ಎರಡು ಸೀರೆ ಉಚಿತವಾಗಿ ಕೊಡುವುದರಿಂದ ನೇಕಾರರ ಸಮಸ್ಯೆ ದೂರವಾಗುತ್ತದೆ ಎಂದು ಶಾಸಕರು ಹೇಳಿದ್ದಾರೆ.
ನೇಕಾರರು ಉತ್ಪಾದನೆ ಮಾಡಿದ ಸೀರೆಗಳಿಗೆ ಬೇಡಿಕೆ ಇಲ್ಲ
ರಾಜ್ಯದಲ್ಲಿ ಸಾಕಷ್ಟು ನೇಕಾರರು ಉತ್ಪಾದನೆ ಮಾಡಿದ ಸೀರೆಗಳಿಗೆ ಸರಿಯಾಗಿ ಬೇಡಿಕೆ ಇಲ್ಲ ಮತ್ತು ಸಾಕಷ್ಟು ನೇಕಾರರು ಸೀರೆ ಮಾರಾಟವಾಗದ ಕಾರಣ ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟಪಡುತ್ತಿದ್ದಾರೆ. ಇನ್ನು ನೇಕಾರರ ಈ ಕಷ್ಟ ಅರಿತ ಶಾಸಕ ಸಿದ್ದು ಸವದಿ ಅವರು ರಾಜ್ಯ ಸರ್ಕಾರ ಸರ್ಕಾರೀ ನೌಕರಿಯಲ್ಲಿ ಇರುವ ಮಹಿಳೆಯರಿಗೆ ಮತ್ತು BPL ಕಾರ್ಡ್ ಹೊಂದ್ದಿರುವ ಮಹಿಳೆಯರಿಗೆ ವರ್ಷಕ್ಕೆ ಎರಡು ಸೀರೆ ಉಚಿತವಾಗಿ ಕೊಡುವ ಯೋಜನೆಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ. ಈ ಯೋಜನೆಯನ್ನು ಜಾರಿಗೆ ತರುವುದರಿಂದ ನೇಕಾರರಾಉ ಉತ್ಪಾದನೆ ಮಾಡಿದ ಸೀರೆಗಳು ಮಾರಾಟ ಆಗುತ್ತದೆ ಅನ್ನುವುದು ಶಾಸಕ ಸಿದ್ದು ಸವದಿ ಅವರ ಮಾತಾಗಿದೆ.
ಹಲವು ಶಾಸಕರ ಬೆಂಬಲ ಕೂಡ ಸಿಕ್ಕಿದೆ
ಇನ್ನು ಸಿದ್ದು ಸವಾಡಿಯವರ ಈ ಬೇಡಿಕೆಗೆ ಹಲವು BJP ಶಾಸಕರು ಕೂಡ ಬೆಂಬಲ ಸೂಚಿಸಿದ್ದಾರೆ. ಸಿದ್ದು ಸವದಿ ಅವರ ಬೇಡಿಕೆಯ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದರೆ ಇದು ರಾಜ್ಯದ ಮಹಿಳೆಯರ ಇನ್ನಷ್ಟು ಸಂತಸಕ್ಕೆ ಕಾರಣವಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.