Niveditha Gowda: ಮತ್ತೆ ಒಂದಾಗುವ ಸ್ಪಷ್ಟನೆ ಬಗ್ಗೆ ನೀಡಿದ ನಿವೇದಿತಾ ಗೌಡ, ಎಲ್ಲಾ ಪ್ರಶ್ನೆಗೆ ಉತ್ತರಿಸಿದ ನಿವೇದಿತಾ ಗೌಡ

Chandan Shetty And Niveditha Gowda Interview: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ (Chandan Shetty And Niveditha Gowda) ಅವರು ವಿಚ್ಛೇಧನ ಪಡೆದುಕೊಂಡು ಹಲವು ತಿಂಗಳು ಕಳೆದಿದೆ. ಹೌದು ಸಂಸಾರದಲ್ಲಿ ಕೆಲವು ಮನಸ್ತಾಪ ಮತ್ತು ವೃತ್ತಿ ಜೀವನದ ಉದ್ದೇಶದಿಂದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ವಿಚ್ಛೇಧನ ಪಡೆದುಕೊಂಡಿದ್ದಾರೆ. ಇದರ ನಡುವೆ ಚಂದನ್ ಶೆಟ್ಟಿ ಅವರು ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಮತ್ತು ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಗು ತಮ್ಮದೇ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಇನ್ನು ನಿವೇದಿತಾ ಗೌಡ ವಿಚ್ಛೇಧನ ಪಡೆದುಕೊಂಡ ನಂತರ ಕಿರುತೆರೆ ಹಲವು ಕಾರ್ಯಕ್ರಮಗಳು ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವುದರಲ್ಲಿ ಕೂಡ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದು. ಇದರ ನಡುವೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಒಟ್ಟಾಗಿ ಇಂಟರ್ವ್ಯೂ ನಲ್ಲಿ (Niveditha Gowda Interview) ಕಾಣಿಸಿಕೊಂಡಿದ್ದು ಮತ್ತೆ ಒಂದಾಗುವುದಾರ ಬಗ್ಗೆ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಮತ್ತೆ ಒಂದಾಗುತ್ತಾರಾ ಚಂದನ್ ಶೆಟ್ಟಿ ನಿವೇದಿತಾ ಗೌಡ
ಹೌದು, ವಿಚ್ಛೇಧನದ ನಂತರ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ‘ಮುದ್ದು ರಾಕ್ಷಸಿ’ (Muddu Rakshasi) ಅನ್ನುವ ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಇನ್ನು ಇಬ್ಬರು ಈ ಚಿತ್ರದಲ್ಲಿ ಒಟ್ಟಾಗಿ ನಟನೆ ಮಾಡಿದ್ದು ಈ ಚಿತ್ರದ ಕೆಲವು ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಚಿತ್ರದಲ್ಲಿ ಪ್ರೊಮೋಷನ್ ಕೆಲಸದಲ್ಲಿ ಇಬ್ಬರು ಬ್ಯುಸಿ ಆಗಿದ್ದಾರೆ ಮತ್ತು ಇಬ್ಬರು ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ಸಂದರ್ಶನದಲ್ಲಿ ಒಟ್ಟಾಗಿ ಕಾಣಿಸಿಕೊಂಡ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮತ್ತೆ ಒಂದಾಗುವ ಬಗ್ಗೆ ಕೂಡ ಮಾತನಾಡಿದ್ದಾರೆ.

ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿವೇದಿತಾ ಗೌಡ
ಹೌದು, ಮಾದ್ಯಮದವರು ನಿವೇದಿತಾ ಗೌಡ ಅವರ ಬಳಿ, ಡೈವೋರ್ಸ್ ಪಡೆದುಕೊಂಡ ಅದೆಷ್ಟೋ ದಂಪತಿಗಳು ಮತ್ತೆ ಒಂದಾದ ಅದೆಷ್ಟೋ ಉದಾಹರಣೆಗಳು ಮತ್ತು ಅದೇ ರೀತಿಯಲ್ಲಿ ನೀವು ಕೂಡ ಮತ್ತೆ ಒಂದಾಗುತ್ತೀರಾ, ಚಂದನ್ ಶೆಟ್ಟಿ ಅವರನ್ನು ನೋಡಿದ ಕೂಡಲೇ ನೀವು ಏಕೆ ಎಮೋಷನಲ್ ಆಗಿದ್ದೀರಿ ಎಂದು ಮಾದ್ಯಮದವರು ಪ್ರಶ್ನೆ ಕೇಳಿದ್ದಾರೆ. ಇನ್ನು ಮಾಧ್ಯಮದವರ ಈ ಪ್ರಶ್ನೆಗೆ ಉತ್ತರ ನೀಡಿದ ನಿವೇದಿತಾ ಗೌಡ ಅವರು, ‘ಹೌದು ನಾವು ಖಂಡಿತ ಎಮೋಷನಲ್ ಆಗಿದ್ದೇನೆ’ ಎಂದು ಹೇಳಿದ್ದಾರೆ. ‘ಏನು ಫೀಲ್ ಆಗಿಲ್ಲ ಅಂತ ಹೇಳೋಕೆ ಆಗಲ್ಲ ಮತ್ತು ಅಷ್ಟು ವರ್ಷ ಜೊತೆಗೆ ಇದ್ದ ಮೇಲೆ ಖಂಡಿತ ಫೀಲ್ ಆಗೇ ಆಗುತ್ತೆ’ ಎಂದು ಮಾಧ್ಯಮದ ಮುಂದೆ ನಿವೇದಿತಾ ಗೌಡ ಹೇಳಿದ್ದಾರೆ.

ಮತ್ತೆ ಒಂದಾಗುವ ಬಗ್ಗೆ ಸ್ಪಷ್ಟನೆ ಕೊಟ್ಟ ನಿವೇದಿತಾ ಗೌಡ
ಬೇರೆಯವರು ಒಂದಾಗಿರುವ ಬಗ್ಗೆ ಮಾತನಾಡಿದ ನಿವೇದಿತಾ ಗೌಡ ಅವರು, ಬೇರೆಯವರು ಒಂದಾಗಿರುವ ನನಗೆ ಗೊತ್ತಿಲ್ಲ, ಅವರ ನಡುವೆ ಪರಸ್ಪರ ಪ್ರೀತಿ ಹೆಚ್ಚಿರುತ್ತದೆ ಅದಕ್ಕೆ ಒಂದಾಗಿರಬಹುದು, ಆದರೆ ನಮ್ಮ ನಡುವೆ ಅಷ್ಟೊಂದು ಹೊಂದಾಣಿಕೆ ಇರಲಿಲ್ಲ, ಹಾಗಾಗಿ ಮತ್ತೆ ನಾವು ಒಂದಾಗಲ್ಲ ಎಂದು ನಿವೇದಿತಾ ಗೌಡ ಮಾಧ್ಯಮದವರ ಮುಂದೆ ಹೇಳಿದ್ದಾರೆ. ಮೂಲಕ ಮತ್ತೆ ಒಂದಾಗುವುದಿಲ್ಲ ಎಂದು ನಿವೇದಿತಾ ಗೌಡ ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿದ್ದಾರೆ.

ಸಮಾಜದಲ್ಲಿ ಜನರು ಮಾತನಾಡುವ ಬಗ್ಗೆ ಹೇಳಿದ್ದ ನಿವೇದಿತಾ ಗೌಡ
ಸಮಾಜದಲ್ಲಿ ಜನರು ನಾನಾ ರೀತಿಯಲ್ಲಿ ಮಾತನಾಡುತ್ತಾರೆ ಮತ್ತು ಬಹುತೇಕ ಎಲ್ಲಾ ತಪ್ಪುಗಳನ್ನು ಹೆಣ್ಣು ಮಕ್ಕಳ ಮೇಲೆ ಹಾಕುತ್ತಾರೆ ಮತ್ತು ಪ್ರತಿ ಬಾರಿ ಕೂಡ ಹೆಣ್ಣು ಮಕ್ಕಳೇ ಟಾರ್ಗೆಟ್ ಆಗುತ್ತಾರೆ. ‘ ನಮ್ಮ ಸಮಾಜವೇ ಹಾಗೆ, ಏನೇ ಆದರೂ ಹುಡುಗಿಯರದ್ದೇ ತಪ್ಪು ಅನ್ನುತ್ತಾರೆ ಮತ್ತು ಇವರೇ ಸರಿ ಇಲ್ಲ ಎಂದು ಆರೋಪ ಮಾಡುತ್ತಾರೆ, ನಮ್ಮ ಜೀವನದಲ್ಲಿ ಏನೇನು ಸಮಸ್ಯೆ ಇದೆ ಎಂದು ಯಾರಿಗೂ ಕೂಡ ಸರಿಯಾಗಿ ತಿಳಿದಿಲ್ಲ ಮತ್ತು ನಡುವೆ ಏನಾಗಿದೆ ಎಂದು ಕೂಡ ಅವರಿಗೆ ತಿಳಿದಿಲ್ಲ ಮತ್ತು ನಾವು ಕೂಡ ಅದರ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವ ಅಗತ್ಯ ಕೂಡ ಇಲ್ಲ, ಜನರ ಮನಸ್ಥಿತಿ ಸರಿಪಡಿಸುವುದಕ್ಕೆ ನಮ್ಮತ್ರ ಸಾಧ್ಯವಿಲ್ಲ’ ಎಂದು ನಿವೇದಿತಾ ಗೌಡ ಅವರು ಮಾದ್ಯಮದವರು ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ನೀಡಿದ್ದಾರೆ ಎಂದು ಹೇಳಬಹುದು.

Leave a Comment