Ganga Kalyana Free Borewell: ಸದ್ಯ ಬೇಸಿಗೆ ಆರಂಭ ಆಗಿದ್ದು ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಇದರ ನಡುವೆ ರಾಜ್ಯದಲ್ಲಿ ಸಾಕಷ್ಟು ರೈತರು ತಮ್ಮ ಹೊಲ ಮತ್ತು ತೋಟಕ್ಕೆ ನೀರಿಲ್ಲದೆ ಪರದಾಡುತ್ತಿದ್ದಾರೆ ಎಂದು ಹೇಳಬಹುದು. ಸದ್ಯ ರಾಜ್ಯ ಸರ್ಕಾರ ಈಗ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ರಾಜ್ಯದ ರೈತರಿಗೆ ಉಚಿತವಾಗಿ ಬೋರ್ ವೆಲ್ ಕೊರೆಸಿಕೊಡಲು ಈಗ ರಾಜ್ಯ ಸರ್ಕಾರ ಮುಂದಾಗಿದೆ. ರೈತರು ರಾಜ್ಯ ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಅಡಿಯಾಲ್ ಉಚಿತವಾಗಿ ಬೋರ್ ವೆಲ್ ಕೊರೆಸಿಕೊಳ್ಳಲು ಸಹಾಯಧನ ಪಡೆದುಕೊಳ್ಳಬಹುದು.
ರಾಜ್ಯದಲ್ಲಿ ಮತ್ತೆ ಜಾರಿಗೆ ಬಂದಿದೆ ಗಂಗಾ ಕಲ್ಯಾಣ ಯೋಜನೆ
ಹೌದು, ರಾಜ್ಯ ಸರ್ಕಾರ ಈಗ 2024 -25 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಗೆ (Ganga Kalyana Scheme) ಚಾಲನೆ ನೀಡಿದೆ. ಈ ಗಂಗಾ ಕಲ್ಯಾಣ ಯೋಜನೆಯ ಮೂಲಕ ರಾಜ್ಯದ ರೈತರು ತಮ್ಮ ತೋಟದಲ್ಲಿ ಬೋರ್ ವೆಲ್ ಕೊರೆಸಿಕೊಳ್ಳಲು ಸಹಾಯಧನ ಪಡೆದುಕೊಳ್ಳಬಹುದು. ಆಸಕ್ತ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಸಹಾಯಧನ ಪಡೆದುಕೊಳ್ಳಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ. ಇನ್ನು ಈ ಯೋಜನೆ ಅರ್ಜಿ ಸಲ್ಲಿಸುವ ರೈತರು ಕೆಲವು ಅಗತ್ಯ ಅರ್ಹತೆ ಮತ್ತು ದಾಖಲೆ ಹೊಂದಿರುವುದು ಕೂಡ ಕಡ್ಡಾಟವಾಗಿದೆ.
ಯಾವ ಯಾವ ರೈತರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದು
* ಅರ್ಜಿ ಸಲ್ಲಿಸುವ ರೈತರು ಕನಿಷ್ಠ ಎರಡು ಎಕರೆ ಭೂಮಿ ಹೊಂದಿರಬೇಕು ಮತ್ತು ಇದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುವುದಿಲ್ಲ.
* ಸಣ್ಣ ಮತ್ತು ಅತೀ ಸಣ್ಣ ರೈತರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
* ಕರ್ನಾಟಕದ ರೈತರು ಮಾತ್ರ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅವರ ಬಳಿ ಭೂಮಿಗೆ ಸಂಬಂಧಿಸಿದ ಸರಿಯಾದ ದಾಖಲೆ ಇರಬೇಕು.
* 18 ವರ್ಷದಿಂದ 60 ವರ್ಷದ ಒಳಗಿನ ರೈತರು ಮಾತ್ರ ಈ ಗಂಗಾ ಕಲ್ಯಾಣ ಯೋಜನೆಗೆ ಸರ್ಜಿ ಸಲ್ಲಿಸಬಹುದು.
* ರೈತರು ಯಾವ ಭೂಮಿಗೆ ಬೋರ್ ವೆಲ್ ಬೇಕು ಎಂದು ಅರ್ಜಿ ಸಲ್ಲಿಸುತ್ತಾರೋ ಆ ಭೂಮಿಯಲ್ಲಿ ಯಾವುದೇ ನೀರಿನ ಸಂಪರ್ಕ ಇರಬಾರದು.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
* ಭೂಮಿ ಮಾಲೀಕರಾಗಿರುವ ರೈತನ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ಕಡ್ಡಾಯ
* ರೈತನ ಜಾತಿ ಮತ್ತು ಆದಾಯ ಪ್ರಮಾಣಪತ್ರ.
* ಸ್ವಯಂ ಘೋಷಿತ ಪ್ರಮಾಣಪತ್ರ
* ಜಮೀನಿನ ಪಹಣಿ ಮತ್ತು ಅರ್ಜಿದಾರನ ಭಾವಚಿತ್ರ
* ಅರ್ಜಿದಾರನ ಮೊಬೈಲ್ ಸಂಖ್ಯೆ ಮತ್ತು ನೀರಾವರಿ ಪ್ರಮಾಣಪತ್ರ ಕಡ್ಡಾಯ
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಎಲ್ಲಿ ಸಲ್ಲಿಸಬಹುದು
ರಾಜ್ಯ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, ಗಂಗಾ ಕಲ್ಯಾಣ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವವರು ಹತ್ತಿರದ ಸೇವಾ ಸಿಂಹ್ದು ಅಥವಾ ಕರ್ನಾಟಕ ಸೇವಾ ಸಿಂಧು ಕೇಂದ್ರಕ್ಕೆ ಭೇಟಿನೀಡಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಹತ್ತಿರ ಆನ್ಲೈನ್ ಸೇವಾ ಕೇಂದ್ರಕ್ಕೆ ಹೋಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್ ಕೇಂದ್ರದಲ್ಲಿ ಕೂಡ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಗಂಗಾ ಕಲ್ಯಾಣ ಯೋಜಾನೆಯಲ್ಲಿ ರೈತರಿಗೆ 4 ಲಕ್ಷದ ಸಹಾಯಧನ ನೀಡಲಾಗುತ್ತದೆ.
H