Gruha Lakshmi Pending Money Release: ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಬಾಕಿ ಇರುವ ಹಣಕ್ಕೆ ಸಂಬಂಧಿಸಿದಂತೆ ಈಗ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್ ಬಂದಿದೆ. ಹೌದು ಕಳೆದ ಎರಡು ತಿಂಗಳಿಂದ ರಾಜ್ಯದ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ. ರಾಜ್ಯದಲ್ಲಿ ಬಜೆಟ್ (Karnataka State Budget) ಮಂಡನೆ ಮತ್ತು ಕೆಲವು ತಾಂತ್ರಿಕ ದೋಷಗಳ ಕಾರಣ ರಾಜ್ಯದಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲು ರಾಜ್ಯ ಸರ್ಕಾರದ ಬಳಿ ಸಾಧ್ಯವಾಗಿರಲಿಲ್ಲ.
ಸದ್ಯ ಗೃಹಲಕ್ಷ್ಮಿ ಯೋಜನೆಗೆ ಬಾಕಿ ಇರುವ ಹಣ ಜಮಾ ಮಾಡುವುದಕ್ಕೆ ಸಂಬಂಧಿಸಿದಂತೆ ಈಗ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡುವುದರ ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಯಾವಾಗ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಮತ್ತು ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ನೀಡುವ ಮಾಹಿತಿ ಇಲ್ಲಿದೆ ನೋಡಿ.
ನಾಳೆ ಅಥವಾ ನಾಡಿದ್ದು ಬಾಕಿ ಇರುವ ಹಣ
ಹೌದು, ರಾಜ್ಯ ಸರ್ಕಾರ ನಿಡುಇರುವ ಮಾಹಿತಿಯ ಪ್ರಕಾರ ನಾಳೆ ಅಥವಾ ನಾಡಿದ್ದು ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲಿದೆ. DBT ಕರ್ನಾಟಕ ಮೂಲಕ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಹಣವನ್ನು ಜಮಾ ಮಾಡುವ ಕೆಲಸ ಮಾಡಲಾಗುತ್ತಿದೆ. ಇನ್ನು ಮಹಿಳೆಯರು DBT ಕರ್ನಾಟಕ ಅಪ್ಲಿಕೇಶನ್ ಇನ್ಸ್ಟಾಲ್ (DBT Karnataka Application Install) ಮಾಡಿಕೊಳ್ಳುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ (Gruha Lakshmi Scheme Status Check) ಕೂಡ ಚೆಕ್ ಮಾಡಿಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡುವ ವಿಧಾನ
* DBT ಕರ್ನಾಟಕ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ (Google Playstore) ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕು
* DBT ಕರ್ನಾಟಕ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿದ ನಂತರ ಆಧಾರ್ ಸಂಖ್ಯೆ ಹಾಕಿ OTP ಮೇಲೆ ಕ್ಲಿಕ್ ಮಾಡಬೇಕು
* ಮೊಬೈಲ್ ಸಂಖ್ಯೆಗೆ ಬಂದ OTP ನಮೂದಿಸಿ ನೀವು ಅಪ್ಲಿಕೇಶನ್ ಲಾಗಿನ್ ಮಾಡಬೇಕು
* OTP ನಮೂದಿಸಿದ ನಂತರ mPIN ಕೂಡ ರಚನೆ ಮಾಡಿ ನಮೂದಿಸಬೇಕು
* ಹೋಂ ಪೇಜ್ ನಲ್ಲಿ ಗೃಹಲಕ್ಷ್ಮಿ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ದಿದಿನಾಂಕದಂದು ಜಮಾ ಆಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬಹುದು.
ಇನ್ನುಮುಂದೆ ಅಕ್ಕ ಕೋ-ಆಪರೇಟಿವ್ ಸೊಸೈಟಿ ಮೂಲಕ ಹಣ ಜಮಾ
ಹೌದು, ಬಜೆಟ್ ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿರ್ಧಾರ ಮಾಡಲಾಗಿದೆ ಮತ್ತು ಹೊಸ ನಿರ್ಧಾರ ಹಾಗೆ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅಕ್ಕ ಕೋ-ಆಪರೇಟಿವ್ ಸೊಸೈಟಿ (Akka Co-Operative Society) ಮೂಲಕ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ. DBT ಕರ್ನಾಟಕ ಮೂಲಕ ಹಣ ಜಮಾ ಮಾಡುವ ಕೆಲಸದಲ್ಲಿ ಸಾಕಷ್ಟು ಲೋಪದೋಷ ಕಂಡುಬಂದ ಕಾರಣ ಈಗ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ಹೊಸ ಮಾರ್ಗ ಕಂಡುಕೊಳ್ಳಲಾಗಿದೆ.
ಈ ಮಹಿಳೆಯರ ಖಾತೆಗೆ ಇನ್ನುಮುಂದೆ ಹಣ ಜಮಾ ಆಗುವುದಿಲ್ಲ
* ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದ ಮಹಿಳೆಯರ ಖಾತೆಗೆ
* ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಮಾಡದ ಮಹಿಳೆಯರ ಖಾತೆಗೆ
* ಬ್ಯಾಂಕ್ ಖಾತೆಗೆ ಇನ್ನೂ ಕೂಡ KYC ಅಪ್ಡೇಟ್ ಮಾಡದ ಮಹಿಳೆಯರು
* ಬ್ಯಾಂಕ್ ಖಾತೆಗೆ ಇನ್ನೂ ಕೂಡ NPCI ಮ್ಯಾಪಿಂಗ್ ಮಾಡಿಸಿಕೊಳ್ಳದ ಮಹಿಳೆಯರು
* ಆಧಾರ್ ಸಂಖ್ಯೆ ಮತ್ತು ಪಾನ್ ಸಂಖ್ಯೆ ಲಿಂಕ್ ಮಾಡಿಸದ ಮಹಿಳೆಯರು
* ಪಾನ್ ಸಂಖ್ಯೆಯನ್ನು ಕೂಡ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸದ ಮಹಿಳೆಯರು