Indian passport new rules 2025: ಸಾಮಾನ್ಯವಾಗಿ ಬೇರೆ ದೇಶಗಳಿಗೆ ಹೋಗಬೇಕು ಅಂದರೆ ಪಾಸ್ಪೋರ್ಟ್ ಎಷ್ಟು ಅವಶ್ಯಕ ಅಂತ ನಿಮಗೆಲ್ಲ ತಿಳಿದೇ ಇದೆ. ಹೌದು ಪಾಸ್ಪೋರ್ಟ್ (Passport) ಇಲ್ಲದೆ ಬೇರೆ ದೇಶಕ್ಕೆ ಹೋಗಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಪಾಸ್ಪೋರ್ಟ್ ವಿಷಯವಾಗಿ ಹಲವು ನಿಯಮಗಳನ್ನು ದೇಶದಲ್ಲಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಹೌದು ದೇಶದಲ್ಲಿ ಪಾಸ್ಪೋರ್ಟ್ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿ ಕಠಿಣ ನಿಯಮಗಳನ್ನು ದೇಶದಲ್ಲಿ ಜಾರಿಗೆ ತರಲಾಗಿದೆ.
ಭದ್ರತೆ ಮತ್ತು ದಕ್ಷತೆ ಹೆಚ್ಚಿಸಲು ಹೊಸ ನಿಯಮ
ಹೌದು, ಸದ್ಯ ಕೇಂದ್ರ ಸರ್ಕಾರ ಭದ್ರತೆ ಮತ್ತು ದಕ್ಷತೆಯ ಉದ್ದೇಶದಿಂದ ದೇಶದಲ್ಲಿ ಹೊಸ ಪಾಸ್ಪೋರ್ಟ್ ನಿಯಮವನ್ನು ಜಾರಿಗೆ ತಂದಿದೆ. ದೇಶದಲ್ಲಿ ನಕಲಿ ಪಾಸ್ಪೋರ್ಟ್ ಸಂಖ್ಯೆ ಹೆಚ್ಚಾಗಿರುವ ಕಾರಣ ಕೇಂದ್ರ ಈಗ ಪಾಸ್ಪೋರ್ಟ್ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಮಾಡಿದೆ ಎಂದು ಹೇಳಬಹುದು. ಇನ್ನು ಪಾಸ್ಪೋರ್ಟ್ ನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಬಹುದು. ಇನ್ನು ಜನರು ಹೊಸದಾಗಿ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿವುದು ಕೂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಸುಲಭವಾಗಲಿದೆ.
ಹೊಸ ಪಾಸ್ಪೋರ್ಟ್ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ
- ಇನ್ನುಮುಂದೆ ಹೊಸ ಪಾಸ್ಪೋರ್ಟ್ ಅರ್ಜಿ ಸಲ್ಲಿಸಲು ಜನನ ಪ್ರಮಾಣಪತ್ರ ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನಿಮ್ಮ ಜನನ ಪ್ರಮಾಣಪತ್ರವು ನಿಮ್ಮ ಜನ್ಮ ದಿನಾಂಕವನ್ನು ತೋರಿಸುವ ಏಕೈಕ ಪ್ರಮಾಣಪತ್ರವಾದ ಕಾರಣ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಲು ಇನ್ನುಮುಂದೆ ಜನನ ಪ್ರಮಾಣಪತ್ರ ಕಡ್ಡಾಯ.
- ಇನ್ನುಮುಂದೆ ಪಾಸ್ಪೋರ್ಟ್ ನ ಕೊನೆಯ ಪುಟದಲ್ಲಿ ಅವರ ವಸತಿ ವಿಳಾಸವನ್ನು ಮುದ್ರಣ ಮಾಡಲಾಗುವುದಿಲ್ಲ. ವಸತಿ ವಿಳಾಸವನ್ನು ಮುದ್ರಣ ಮಾಡುವ ಬದಲು ಬಾರ್ ಕೋಡ್ ಹಾಕಲು ಈಗ ಇಲಾಖೆ ಮುಂದಾಗಿದೆ. ಅಧಿಕಾರಿಗಳು ಮುಂದಿನ ದಿನಗಳಲ್ಲಿ ಬಾರ್ ಕೋಡ್ ಗಳನ್ನೂ ಸ್ಕ್ಯಾನ್ ಮಾಡುವುದರ ಮೂಲಕ ವ್ಯಕ್ತಿಯ ಸಂಪೂರ್ಣ ವಿಳಾಸದ ಮಾಹಿತಿ ತಿಳಿಯಬಹುದು.
- ಇನ್ನುಮುಂದೆ ಪಾಸ್ಪೋರ್ಟ್ ಗಳನ್ನೂ ಸುಲಭವಾಗಿ ಗುರುತಿಸುವ ಉದ್ದೇಶದಿಂದ ಕಲರ್ ಕೋಡಿಂಗ್ ನಿಯಮವನ್ನು ಜಾರಿಗೆ ತರಲು ಈಗ ಕೇಂದ್ರ ಮುಂದಾಗಿದೆ. ಕೆಂಪು ಪಾಸ್ಪೋರ್ಟ್, ನೀಲಿ ಬಣ್ಣದ ಪಾಸ್ಪೋರ್ಟ್ ಮತ್ತು ಬಿಳಿ ಬಣ್ಣದ ಪಾಸ್ಪೋರ್ಟ್ ಗಳನ್ನೂ ಇನ್ನುಮುಂದೆ ನಾವು ನೋಡಬಹುದು ಮತ್ತು ಒಂದೊಂದು ಕಲರ್ ಕೂಡ ಒಂದೊಂದು ಅರ್ಥ ನೀಡುತ್ತದೆ.
- ಇನ್ನು ಜನರ ಪಾಸ್ಪೋರ್ಟ್ ನ ಕೊನೆಯ ಪುಟದಲ್ಲಿ ಪೋಷಕರ ಹೆಸರನ್ನು ಮುದ್ರಣ ಮಾಡುವ ನಿಯಮವನ್ನು ಕೈಬಿಡಲು ಈಗ ಕೇಂದ್ರ ಮುಂದಾಗಿದೆ. ವ್ಯಕ್ತಿಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಸಿಂಗಲ್ ಪೇರೆಂಟ್ ಅಥವಾ ವಿಚ್ಛೇಧಿತ ಕುಟುಂಬದವರಿಗೆ ಇದು ಬಹಳ ಸಹಕಾರಿ ಕೂಡ ಆಗಲಿದೆ.
- ದೇಶದಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಗಳು ಬಹಳ ಕಡಿಮೆ ಇರುವ ಕಾರಣ ದೇಶದಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಈಗ ನಿರ್ಧಾರ ತಗೆದುಕೊಳ್ಳಲಾಗಿದೆ. ನಾಗರೀಕ ಪಾಸ್ಪೋರ್ಟ್ ಸೇವಾ ಕೇಂದ್ರಗಳಲ್ಲಿ ಸ್ಥಾಪನೆ ಮಾಡಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಬಹುದು.