Bank Locker: ಬ್ಯಾಂಕ್ ಲಾಕರ್ ನಲ್ಲಿ ಇಟ್ಟ ನಿಮ್ಮ ಚಿನ್ನ ಎಷ್ಟು ಸೇಫ್…? RBI ನಿಯಮ ಹೇಳುವುದೇನು ನೋಡಿ

Bank Locker Rules 2025: ಈಗಿನ ಕಾಲದಲ್ಲಿ ನಾವು ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರೂ ಕೂಡ ಅದೂ ನಮ್ಮಬಳಿ ಕೊನೆಗೆ ಉಳಿಯುವುದಿಲ್ಲ. ಇದರ ನಡುವೆ ಜನರು ತಾವು ಜೀವನಲ್ಲಿ ಕಷ್ಟಪಟ್ಟು ಖರೀದಿ ಮಾಡಿದ ಎಲ್ಲಾ ಚಿನ್ನವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಅದನ್ನು ಬ್ಯಾಂಕುಗಳ ಲಾಕರ್ ನಲ್ಲಿ ಇಡುತ್ತಾರೆ. ಹೌದು ಬ್ಯಾಂಕುಗಳ ಲಾಕರ್ (Bank Locker) ನಲ್ಲಿ ಚಿನ್ನ ಇಟ್ಟರೆ ನಮ್ಮ ಚಿನ್ನ ಸೇಫ್ ಆಗಿರುತ್ತದೆ ಅನ್ನುವ ಕಾರಣಕ್ಕೆ ಜನರು ಹೆಚ್ಚಾಗಿ ಚಿನ್ನಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಡುವುದನ್ನು ನಾವು ನೋಡಬಹುದು.

WhatsApp Group Join Now
Telegram Group Join Now

ಸದ್ಯ ಬ್ಯಾಂಕ್ ಲಾಕರ್ ನಲ್ಲಿ ಚಿನ್ನ ಇಡುವ ಅದೆಷ್ಟೋ ಜನರಿಗೆ ಈ ಕೆಲವು ನಿಯಮಗಳ ಬಗ್ಗೆ ಇನ್ನೂ ಕೂಡ ತಿಳಿದಿಲ್ಲ ಎಂದು ಹೇಳಬಹುದು. ಹೌದು ಬ್ಯಾಂಕ್ ಲಾಕರ್ ನಲ್ಲಿ ಇಟ್ಟ ನಿಮ್ಮ ಚಿನ್ನ ಕೂಡ ಸೇಫ್ ಅಲ್ಲ ಅನ್ನುವುದು ನಿಮಗೆ ತಿಳಿದಿರಬೇಕು. ಹಾಗಾದರೆ ಬ್ಯಾಂಕ್ ಲಾಕರ್ ನಲ್ಲಿ ಇಟ್ಟ ನಿಮ್ಮ ಚಿನ್ನ ಎಷ್ಟು ಸೇಫ್ ಮತ್ತು ಲಾಕರ್ ಸುರಕ್ಷತೆ ಬಗ್ಗೆ RBI ಹೇಳುವುದು ಏನು ಅನ್ನುವುದರ ಬಾಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ಯಾಂಕ್ ಲಾಕರ್ ಕೂಡ ನಿಮ್ಮ ಚಿನ್ನಕ್ಕೆ ಸುರಕ್ಷತೆ ನೀಡುವುದಿಲ್ಲ
ಹೌದು, ನೀವು ಬ್ಯಾಂಕಿನ ಲಾಕರ್ ನಲ್ಲಿ ಚಿನ್ನ ಅಥವಾ ಇತರೆ ಯಾವುದೇ ದಾಖಲೆ ಇಡುವ ಸಮಯದಲ್ಲಿ ಲಾಕರ್ ನಿಯಮಗಳಲ್ಲಿ ಸರಿಯಾಗಿ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಹೌದು ಬ್ಯಾಂಕಿನಲ್ಲಿ ನೀವು ಲಾಕರ್ ಮಾಡುವ ಸಮಯದಲ್ಲಿ ಸರಿಯಾದ ಸುರಕ್ಷತಾ ಕ್ರಮದ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಬ್ಯಾಂಕ್ ನಿಮ್ಮ ವಸ್ತುವಿಗೆ ಎಷ್ಟು ಸುರಕ್ಷತೆ ನೀಡುತ್ತದೆ ಅನ್ನುವುದರ ಬಗ್ಗೆ ಕೂಡ ನೀವು ತಿಳಿದುಕೊಳ್ಳಬೇಕು. RBI ನಿಯಮದ ಬಗ್ಗೆ ಸರಿಯಾದ ರೀತಿಯಲ್ಲಿ ತಿಳಿದುಕೊಂಡು ನೀವು ಲಾಕರ್ ನಲ್ಲಿ ಅಗತ್ಯ ವಸ್ತುಗಳನ್ನು ಇಡಬಹುದು.

ನಿಮ್ಮ ವಸ್ತುವಿಗೆ ಬ್ಯಾಂಕ್ ಸಂಪೂರ್ಣ ಸುರಕ್ಶತೆ ನೀಡಬೇಕು
ಈ ಹಿಂದೆ ಬ್ಯಾಂಕಿಂಗ್ ನಿಯಮದ ಪ್ರಕಾರ ನೀವು ಲಾಕರ್ ಮಾಡಿದ ನಂತರ ಇನ್ಶೂರೆನ್ಸ್ ಮಾಡಿಸಿದರೆ ಮಾತ್ರ ಲಾಕರ್ ಕಳ್ಳತನವಾದರೆ ನೀವು ಇನ್ಶೂರೆನ್ಸ್ ಕ್ಲೈಮ್ ಮಾಡಿಕೊಳ್ಳಬಹುದಾಗಿತ್ತು. ಸದ್ಯ RBI ಈಗ ನಿಯಮದಲ್ಲಿ ಬದಲಾವಣೆ ಮಾಡಿದೆ, ಇನ್ನು ಬದಲಾದ ನಿಯಮದ ಪ್ರಕಾರ ಎಲ್ಲಾ ಬ್ಯಾಂಕುಗಳು ಲಾಕರ್ ನಲ್ಲಿ ಇಟ್ಟ ದಾಖಲೆ ಅಥವಾ ಹಣಕ್ಕೆ ಅಥವಾ ಚಿನ್ನಕ್ಕೆ ಸಂಪೂರ್ಣ ಸುರಕ್ಷತೆ ನೀಡಬೇಕು. ಲಾಕರ್ ಗಳಿಗೆ ಸುರಕ್ಷತೆ ನೀಡುವ ಉದ್ದೇಶದಿಂದ ಬ್ಯಾಂಕುಗಳು ವಾರ್ಷಿಕವಾಗಿ ಶುಲ್ಕ ಪಡೆದುಕೊಳ್ಳುತ್ತದೆ. ಒಂದುವೇಳೆ ಬ್ಯಾಂಕಿನ ನಿರ್ಲಕ್ಷ್ಯದಿಂದ ಲಾಕರ್ ನಲ್ಲಿ ಇಟ್ಟ ವಸ್ತುವಿಗೆ ಹಾನಿಯಾದರೆ ಬ್ಯಾಕ್ 100 ಪಟ್ಟು ದಂಡವನ್ನು ಕೊಡಬೇಕು ಎಂದು RBI ಈಗ ಹೊಸ ನಿಯಮ ಜಾರಿಗೆ ತಂದಿದೆ. ಇನ್ನು ಬ್ಯಾಂಕ್ ನೀಡುವ ನಷ್ಟಪರಿಹಾರ ಲಾಕರ್ ನ ವಾರ್ಷಿಕ ಶುಲ್ಕದ ಮೇಲೆ ನಿರ್ಧಾರ ಆಗಿರುತ್ತದೆ.

ಬ್ಯಾಂಕ್ ದರೋಡೆಯಾದರೆ ಅದಕ್ಕೆ ಪರಿಹಾರ ನೀಡಬೇಕು
ಈ ಹಿಂದೆ ಬ್ಯಾಂಕ್ ಕಳ್ಳತನವಾದರೆ ಅದಕ್ಕೆ ಸಂಪೂರ್ಣ ಜವಾಬ್ದಾರಿ ಗ್ರಾಹಕರು ಹೊಂದಿರಬೇಕಾಗಿತ್ತು, ಆದರೆ RBI ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಜಾರಿಗೆ ತಂದಿದೆ ಮತ್ತು ಜಾರಿಗೆ ತಂದಿರುವ ನಿಯಮದ ಪ್ರಕಾರ ಇನ್ನುಮುಂದೆ ಬ್ಯಾಂಕ್ ಕಳ್ಳತನ, ದರೋಡೆ ಅಥವಾ ಬೆಂಕಿ ಅನಾಹುತಕ್ಕೆ ಒಳಗಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಬ್ಯಾಂಕ್ ಹೊತ್ತುಕೊಳ್ಳಬೇಕು ಎಂದು RBI ಹೊಸ ಆದೇಶವನ್ನು ಹೊರಡಿಸಿದೆ. ಸದ್ಯ RBI ಈಗ ಬ್ಯಾಂಕ್ ಲಾಕರ್ ನಿಯಮದಲ್ಲಿ ಹೊಸ ಬದಲಾವಣೆ ಮಾಡಿದ್ದು ಇದು ಲಾಕರ್ ನಲ್ಲಿ ಹಣ, ಚಿನ್ನ ಮತ್ತು ಅಗತ್ಯ ದಾಖಲೆ ಇಟ್ಟವರ ಸಂತಸಕ್ಕೆ ಕಾರಣವಾಗಿದೆ.

Leave a Comment