Shrirasthu Shubhamasthu: ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಪಾತ್ರ ಅಂತ್ಯ, ವೀಕ್ಷಕರೇ ಬೇಸರದ ಸುದ್ದಿ

Shrirasthu Shubhamasthu Serial Update: ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಧಾರವಾಹಿ ಪ್ರಿಯರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಬಹುದು. ಸದ್ಯ ಕನ್ನಡದಲ್ಲಿ ಹಲವು ಜನಮೆಚ್ಚಿದ ಧಾರಾವಾಹಿಯಲ್ಲಿ ಶ್ರೀರಸ್ತು ಶುಭಮಸ್ತು (Shrirasthu Shubhamasthu Serial) ಧಾರವಾಹಿ ಕೂಡ ಒಂದು ಹೇಳಬಹುದು. ಕನ್ನಡದ ಖ್ಯಾತ ನಟಿಯಾದ ಸುಧಾರಾಣಿ ಅವರು ನಾಯಕಿಯಾಗಿ ನಟನೆ ಮಾಡಿರುವ ಶ್ರೀರಸ್ತು ಶುಭಮಸ್ತು ಧಾರವಾಹಿ ಕನ್ನಡದ ಜನಮೆಚ್ಚಿದ ಧಾರವಾಹಿ ಆಗಿದೆ. ಸದ್ಯ ಕನ್ನಡದಲ್ಲಿ ಜನಪ್ರಿಯ ಧಾರವಾಹಿ ಅನಿಸಿಕೊಂಡಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಿಯರಿಗೆ ಬೇಸರದ ಸುದ್ದಿ ಬಂದಿದೆ. ಹೌದು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರ ಪಾತ್ರ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಪಾತ್ರ ಅಂತ್ಯ
ಹೌದು, ಕನ್ನಡದ ಜನಮೆಚ್ಚಿದ ಧಾರಾವಾಹಿ ಆಗಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಈಗ ನಟಿ ಸುಧಾರಾಣಿ ಅವರ ಪಾತ್ರ ಅಂತ್ಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೌದು, ಧಾರಾವಾಹಿಯಲ್ಲಿ ತುಳಸಿ ಪಾತ್ರವನ್ನು ಮಾಡುತ್ತಿರುವ ಸುಧಾರಣಿಯವರು ಧಾರಾವಾಹಿಯಲ್ಲಿ ತುಂಬು ಗರ್ಭಿಯಾಗಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ತುಳಸಿ ಅವರಿಗೆ ಸೀಮಂತ ಕೂಡ ಮಾಡಿಡಲಾಗಿದೆ. ಸದ್ಯ ಧಾರಾವಾಹಿಯಲ್ಲಿ ಶಾರ್ವರಿಗೆ ಪಾಠ ಕಲಿಸುತ್ತಿರುವ ಸುಧಾರಣಿಯವರ ಪಾತ್ರವೇ ಧಾರಾವಾಹಿಯಲ್ಲಿ ಅಂತಾಯವಾಗುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

9 ತಿಂಗಳಿಗೂ ಮೊದಲೇ ಕಾಣಿಸಿಕೊಂಡ ಹೊಟ್ಟೆ ನೋವು
ಹೌದು, ಧಾರಾವಾಹಿಯಲ್ಲಿ ತುಳಸಿ ಅವರಿಗೆ 9 ತಿಂಗಳ ಮೊದಲೇ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಸದ್ಯ ಧಾರಾವಾಹಿಯಲ್ಲಿ ತುಳಸಿ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಇದರ ನಡುವೆ ಧಾರಾವಾಹಿಯ ಪ್ರೊಮೊ ಒಂದು ಬಿಡುಗಡೆ ಆಗಿದ್ದು ಇದನ್ನು ನೋಡಿದ ಜನರು ಧಾರಾವಾಹಿಯಲ್ಲಿ ತುಳಸಿ ಪಾತ್ರ ಇಲ್ಲಿಗೆ ಅಂತ್ಯವಾಗಿದೆ ಖಚಿತಪಡಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ತುಳಸಿ ಅವರು ಸತ್ತಿದ್ದು ಸಾಧ್ಯ ಆ ಪ್ರೊಮೊ ಬಹಳ ವೈರಲ್ ಆಗಿದೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ತುಳಸಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ತುಳಸಿ ಅವರ ಮಗುವನ್ನು ತೋರಿಸಲಾಗಿದೆ. ಈ ನಡುವೆ ಶಾರ್ವರಿ ತುಳಸಿಯನ್ನು ಸಾಯಿಸುವ ಸ್ಕೆಚ್ ಹಾಕಿದ್ದಾಳೆ. ಮಗುವಿನ ಜೊತೆ ತುಳಸಿ ಅವರು ಹೊರಗೆ ಬಂದಿದ್ದು ಅದು ತುಳಸಿ ಅವರ ಆತ್ಮ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಒಂದುವೇಳೆ ಇದು ನಿಜವಾದರೆ ಇಲ್ಲಿದೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಅಂದರೆ ಸುಧಾರಾಣಿ ಅವರ ಪಾತ್ರ ಅಂತ್ಯವಾಗಲಿದೆ.

ಶಾರ್ವರಿಗೆ ಆಗುತ್ತಾ ಮಾಡಿದ ತಪ್ಪಿಗೆ ಶಿಕ್ಷೆ
ಸದ್ಯ ಶಾರ್ವರಿಯ ಎಲ್ಲಾ ಬಣ್ಣ ಬಯಲಾಗೋ ಸಮಯ ಬಂದಿದೆ. ತುಳಸಿ ಮತ್ತು ದಟ್ಟ ಒಟ್ಟಾಗಿ ಶಾರ್ವರಿ ಮಾಡಿದ ಎಲ್ಲಾ ತಪ್ಪುಗಳಿಗೆ ಸಾಕ್ಷಿ ಸಿಕ್ಕಿದೆ. ಇದರ ನಡುವೆ ತುಳಸಿ ಕೂಡ ಆಸ್ಪತ್ರೆಗೆ ಸೇರಿದ್ದು ಆಸ್ಪತ್ರೆಯಲ್ಲಿರುವ ತುಳಸಿಯನ್ನು ಸಾಯಿಸುವ ಸಂಚು ರೂಪಿಸಿದ್ದಾಳೆ ಶಾರ್ವರಿ. ಸದ್ಯ ಪ್ರೊಮೊ ನೋಡಿದ ಅಭಿಮಾನಿಗಳು ಬೇಸರವನ್ನು ಹೊರಹಾಕುತ್ತಿದ್ದಾರೆ, ಒಂದುವೇಳೆ ತುಳಸಿ ಪಾತ್ರ ಇಲ್ಲಿಗೆ ಅಂತ್ಯವಾದರೆ ಧಾರವಾಹಿ ಕೂಡ ಅಂತ್ಯವಾದ ಹಾಗೆ ಎಂದು ಹೇಳಬಹುದು.

ತುಳಸಿ ಮಗುವಿಗೆ ತಾಯಿಯಾಗುತ್ತಾಳಾ ಪೂರ್ಣಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿ ಮಗು ಇಲ್ಲದೆ ಹಲವು ವರ್ಷಗಳಿಂದ ಮಗುವಿಗಾಗಿ ಚಡಪಡಿಸುತ್ತಿದ್ದಾಳೆ, ಇದರ ನಡುವೆ ತುಳಸಿಗೆ ಹೆಣ್ಣು ಮಗು ಆಗಿದೆ ಮತ್ತು ತುಳಸಿ ಪಾತ್ರ ಅಂತ್ಯವಾಗಿದೆ ಎಂದು ಹೇಳಲಾಗುತ್ತಿದೆ. ಒಂದುವೇಳೆ ತುಳಸಿ ಪಾತ್ರ ಅಂತ್ಯವಾದರೆ ಪೂರ್ಣಿ ತುಳಸಿ ಮಗುವಿಗೆ ತಾಯಿ ಆಗಲಿದ್ದಾಳೆ. ನಿಮ್ಮ ಶ್ರೀರಸ್ತು ಶುಭಮಸ್ತು ಧಾರವಾಹಿ ಇಲ್ಲಿಗೆ ಮುಗಿಯುತ್ತಾ ಮತ್ತು ಶ್ರೀರಸ್ತು ಶುಭಮಸ್ತು ಧಾರವಾಹಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

Leave a Comment