Electric Cycle: ಎಲೆಕ್ಟ್ರಿಕ್ ಬೈಕ್ ಗೆ ಸೆಡ್ಡು ಹೊಡೆಯಲು ಬಂತು 70Km ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸೈಕಲ್, ಬೆಲೆ ಕೂಡ ಕಡಿಮೆ

Hero A2B Electric Cycle: ಈಗಿನ ಕಾಲದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicles) ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ. ಇದರ ನಡುವೆ ದೇಶದಲ್ಲಿ ಎಲೆಕ್ಟ್ರಿಕ್ ಸೈಕಲ್ ಮಾರಾಟ ಕೂಡ ಹೆಚ್ಚಾಗಿದೆ.

WhatsApp Group Join Now
Telegram Group Join Now

ದೇಶದ ಹಲವು ಸೈಕಲ್ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸೈಕಲ್ ಗಳನ್ನೂ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ. ಇದರ ನಡುವೆ ಪ್ರತಿಷ್ಠಿತ ಸೈಕಲ್ ತಯಾಕರ ಕಂಪನಿ ಆಗಿರುವ ಹೀರೋ ಈಗ ಹೊಸದಾದ ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು ಮೈಲೇಜ್ ಕಂಡು ಜನರು ಸೈಕಲ್ ಖರೀದಿ ಮಾಡಲು ಹೆಚ್ಚು ಆಸಕ್ತಿ ಕೂಡ ತೋರುತ್ತಿದ್ದಾರೆ.

ಮಾರುಕಟ್ಟೆಗೆ ಬಂತು ಹೀರೋ ಎಲೆಕ್ಟ್ರಿಕ್ ಸೈಕಲ್ (Hero Electric Cycle)
ಸೈಕಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಹೀರೋ ಕಂಪನಿ ಅತ್ಯಾಕರ್ಷಕಾದ ಎಲೆಕ್ಟ್ರಿಕ್ ಸೈಕಲ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುವಲ್ಲಿ ಯಶಸ್ವಿಯಾಗಿದೆ. ಮಾರುಕಟ್ಟೆಗೆ ಹೀರೋ ಕಂಪನಿ ಈಗ A2b ಅನ್ನು ಸೈಕಲ್ ಲಾಂಚ್ ಮಾಡಿದೆ. ಈ ಸೈಕಲ್ ಲುಕ್ ಮತ್ತು ಮೈಲೇಜ್ ಜನರನ್ನ ತನ್ನತ್ತ ಆಕರ್ಷಣೆ ಕೂಡ ಮಾಡುತ್ತಿದೆ. ಕಾಲಕ್ಕೆ ತಕ್ಕಂತೆ ಈ ಸೈಕಲ್ ನಲ್ಲಿ ಹಲವು ವಿಶೇಷತೆ ಇರುವುದನ್ನು ಕೂಡ ನಾವು ಗಮನಿಸಬಹುದು.

A2b ಎಲೆಕ್ಟ್ರಿಕ್ ಸೈಕಲ್ ಬೆಲೆ ಮತ್ತು ಮೈಲೇಜ್
ಸಾಕಿಯಲ್ ಪ್ರಿಯರಿಗಾಗಿ ಹೀರೋ ಕಂಪನಿ ಲಾಂಚ್ ಮಾಡಿರುವ ಈ ಹೀರೋ A2b ಎಲೆಕ್ಟ್ರಿಕ್ ಸೈಕಲ್ ನಲ್ಲಿ (Hero a2B Electric Cycle) ನಾವು 0.34 kWh ಬ್ಯಾಟರಿ ಕಾಣಬಹುದು. ಉತ್ತಮದ ಬ್ಯಾಟರಿ ಅಳವಡಿಸಿರುವ ಕಾರಣ ಈ ಸ್ಕೂಟರ್ ಉತ್ತಮ ಮೈಲೇಜ್ ಕೂಡ ಕೊಡುತ್ತದೆ. ಕಂಪನಿ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಹೀರೋ A2b ಎಲೆಕ್ಟ್ರಿಕ್ ಸ್ಕೂಟರ್ ಗೆ ಚಾರ್ಜ್ ಮಾಡಿದರೆ ಸುಮಾರು 70 Km ಮೈಲೇಜ್ ಕೊಡುತ್ತದೆ.

ಹೀರೋ A2b ಸೈಕಲ್ ವಿಶೇಷತೆ ಏನು ನೋಡಿ
ಈ ಹೀರೋ A2b ಎಲೆಕ್ಟ್ರಿಕ್ ಸೈಕಲ್ ಗೆ ಒಮ್ಮೆ ಚಾರ್ಜ್ ಮಾಡಲು ಸುಮಾರು 4 ಘಂಟೆ ಸಮಯ ತಗೆದುಕೊಳ್ಳುತ್ತದೆ ಮತ್ತು ಸೈಕಲ್ 20 Km ವೇಗದಲ್ಲಿ ಚಲಿಸುವ ಸಾಮರ್ಥ್ಯ ಕೂಡ ಹೊಂದಿದೆ. ಕೆಟ್ಟುಹೋದ ರಸ್ತೆಗಳಲ್ಲಿ ಕೂಡ ಸೈಕಲ್ ಸಲೀಸಾಗಿ ಚಲಿಸುವ ಕಾರಣ ಎಲ್ಲಾ ವರ್ಗದ ಜನರಿಗೆ ಈ ಸೈಕಲ್ ಇಷ್ಟವಾಗಲಿದೆ. ಉತ್ತಮ ಬ್ರೇಕಿಂಗ್ ಸಿಸ್ಟಮ್ ಮತ್ತು ಉತ್ತಮ ಟೈಯರ್ ಗಳನ್ನೂ ನಾವು ನೋಡಬಹುದು. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಈ ಎಲೆಕ್ಟ್ರಿಕ್ ಸೈಕಲ್ ನ ಬೆಲೆ ಸುಮಾರು 45 ಸಾವಿರ ರೂ ಎಂದು ಅಂದಾಜು ಮಾಡಲಾಗಿದೆ.

Leave a Comment