Honda Activa Electric Scooter: ದೇಶದಲ್ಲಿ ಅತೀ ಹೆಚ್ಚು ಸ್ಕೂಟರ್ ಗಳನ್ನೂ ಮಾರಾಟ ಮಾಡುವ ಹೋಂಡಾ ಕಂಪನಿ ಈಗ ದೇಶದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದೆ. ಹೌದು ದೇಶದಲ್ಲಿ ಹೋಂಡಾ ಆಕ್ಟಿವಾ (Honda activa) ಜನಮೆಚ್ಚಿದ ಸ್ಕೂಟರ್ ಅನ್ನುವ ಹೆಗ್ಗಳಿಕೆಯನ್ನು ಗಳಿಸಿಕೊಂಡಿತ್ತು. ಹೌದು, ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಸ್ಕೂಟರ್ ಗಳಲ್ಲಿ ಹೋಂಡಾ ಆಕ್ಟಿವಾ ಬಹಳ ಎತ್ತರದ ಸ್ಥಾನದಲ್ಲಿ ಇದೆ.
ಇದರ ನಡುವೆ ಈಗ ಹೊಂಸ ಆಕ್ಟಿವಾ ಎಲೆಕ್ಟ್ರಿಕ್ (Honda Activa Electric) ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆಗಿದೆ. ಬೆಲೆ ಕಡಿಮೆ ಮತ್ತು ಅತ್ತಿ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಇದಾಗಿದ್ದು ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಳ್ಳಲಿದೆ ಎಂದು ಹೇಳಬಹುದು. ಹಾಗಾದರೆ ಮಾರುಕಟ್ಟೆಗೆ ಲಾಂಚ್ ಆಗುತ್ತಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು ಮೈಲೇಜ್ ಎಷ್ಟು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಮಾರುಕಟ್ಟೆಗೆ ಬಂತು ಹೊಸ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್
ಹೋಂಡಾ ಇದೆ ಮೊದಲ ಬಾರಿಗೆ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಹಲವು ಡಿಜಿಟಲ್ ವಿಶೇಷತೆ ಹೊಂದಿರುವ ಸ್ಕೂಟರ್ ಅನ್ನು ಈಗ ಮಾರುಕಟ್ಟೆಗೆ ಹೋಂಡಾ ಲಾಂಚ್ ಮಾಡಿದೆ. ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರಾಟ ಹೆಚ್ಚಾಗಿರುವ ಕಾರಣ ಪೆಟ್ರೋಲ್ ಸ್ಕೂಟರ್ ಮಾರಾಟ ಕಡಿಮೆಯಾಗಿದೆ. ಈ ಕಾರಣಗಳಿಂದ ಹೊಂಸ ಈಗ ಎಲೆಕ್ಟ್ರಿಕ್ ಮಾದರಿಯ ಆಕ್ಟಿವಾ ಸ್ಕೂಟರ್ ಲಾಂಚ್ ಮಾಡಿದೆ. ಡಿಜಿಟಲ್ ಡಿಸ್ಪ್ಲೇ, ಡಿಜಿಟಲ್ ಸ್ಪೀಡೋಮೀಟರ್ ಮತ್ತು ಪ್ರಯಾಣಿಕರ ಸುರಕ್ಷತೆಯ ಉದ್ದೇಶದಿಂದ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಕೂಡ ಅಳವಡಿಸಲಾಗಿದೆ.
ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತು ಮೈಲೇಜ್
ಮಾರುಕಟ್ಟೆಗೆ ಹೊಸದಾಗಿ ಲಾಂಚ್ ಆಗಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 190 KM ಮೈಲೇಜ್ ಕೊಡುತ್ತದೆ ಎಂದು ಅಂದಾಜು ಮಾಡಲಾಗಿದೆ. 3.4 kWh ಬ್ಯಾಟರಿ ಅಳವಡಿಸುವ ಕಾರಣ ಈ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಗೆ ಒಮ್ಮೆ ಚಾರ್ಜ್ ಮಾಡುವ ಸುಮಾರು 5 ಘಂಟೆ ಸಮಯ ತಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಸ್ಪೀಡ್ ಚಾರ್ಜರ್ ಬಳಸಿದರೆ 2 ಘಂಟೆಯಲ್ಲಿ ಸಂಪೂರ್ಣ ಚಾರ್ಜ್ ಮಾಡಿಸಬಹುದು. ಇನ್ನು ಬೆಲೆಯ ವಿಷಯಕ್ಕೆ ಬರುವುದಾದರೆ, ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಸುಮಾರು 1 ಲಕ್ಷ ರೂ ಅಂದಾಜು ಮಾಡಲಾಗಿದೆ.
ಆಗಸ್ಟ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ ಹೋಂಡಾ ಆಕ್ಟಿವಾ Ev
ಇನ್ನು ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಇದೆ ವರ್ಷ ಆಗಸ್ಟ್ ತಿಂಗಳು ಮಾರುಕಟ್ಟೆಗೆ ಲಾಂಚ್ ಆಗಲಿದೆ. ಈ ಸ್ಕೂಟರ್ ಜನರ ವಿಶ್ವಾಸ ಪಡೆದುಕೊಳ್ಳುವುದು ಮಾತ್ರವಲ್ಲದೆ ಹೊಸ ಮಾದರಿಯ ಟೆಕ್ನಲಾಜಿಯನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ಲುಕ್ ಈಗಲೇ ಬಿಡುಗಡೆ ಆಗಿದೆ ಮತ್ತು ಸ್ಕೂಟರ್ ಜನರ ಮೆಚ್ಚುಗೆ ಪಡೆದುಕೊಳ್ಳುವುದರಲ್ಲಿ ಯಾವುದೇ ಮಾತಿಲ್ಲ.
ಬೇಡಿಕೆ ಕಳೆದುಕೊಳ್ಳಲಿದೆ ಇತರೆ ಕಂಪನಿಯ Ev ಸ್ಕೂಟರ್ ಗಳು
ಇನ್ನು ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆದರೆ ಇನ್ನುಳಿದ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಕಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹೋಂಡಾ ಸ್ಕೂಟರ್ ಗಳು ಶಕ್ತಿಶಾಲಿ ಬಾಡಿ ಹೊಂದಿರುವ ಕಾರಣ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡಲಿದೆ. ಹಲವು ವರ್ಷಗಳಿಂದ ಗ್ರಾಹಕರ ನಂಬಿಕೆ ಉಳಿಸಿಕೊಂಡಿರುವ ಹೋಂಡಾ ಈಗ ಎಲೆಕ್ಟ್ರಿಕ್ ಲೋಕಕ್ಕೆ ಕಾಲಿಟ್ಟಿದೆ.