New Passport rules India : ದೇಶದಲ್ಲಿ ಭದ್ರತೆ ಮತ್ತು ಗೌಪ್ಯತೆಯ ಉದ್ದೇಶದಿಂದ ಅನೇಕ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದರ ನಡುವೆ ಈಗ ದೇಶದಲ್ಲಿ ಇನ್ನೊಂದು ಹೊಸ ನಿಯಮ ಜಾರಿಗೆ ತರಲಾಗಿದೆ ಮತ್ತು ಜಾರಿಗೆ ಬಂದಿರುವ ಈ ಹೊಸ ನಿಯಮ 2023 ರ ನಂತರ ಹುಟ್ಟಿದ ಎಲ್ಲಾ ಮಗುವಿಗೂ ಅನ್ವಯ ಆಗಲಿದೆ. ಹೌದು, ದೇಶದಲ್ಲಿ ಪಾಸ್ಪೋರ್ಟ್ ನಿಯಮದಲ್ಲಿ (Passport Rules) ಬಹುದೊಡ್ಡ ಬದಲಾವಣೆ ಮಾಡಲಾಗಿದೆ. 2025 ರಿಂದಲೇ ಪಾಸ್ಪೋರ್ಟ್ ಮಾಡಿಸುವ ಎಲ್ಲರಿಗೂ ಈ ಹೊಸ ನಿಯಮ ಅನ್ವಯ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2023 ರ ನಂತರ ಜನಿಸಿದ ಮಕ್ಕಳಿಗೆ ಪಾಸ್ಪೋರ್ಟ್ ಮಾಡಿಸಬೇಕು ಅಂದರೆ ಈ ದಾಖಲೆ ಕಡ್ಡಾಯವಾಗಿ ಕೊಡಬೇಕು ಕೇಂದ್ರ ಸರ್ಕಾರ ಈಗ ಆದೇಶ ಹೊರಡಿಸಿದೆ.
ಪಾಸ್ಪೋರ್ಟ್ ಅರ್ಜಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ
ಹೌದು, ಹೊಸ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸುವವರಿಗೆ ಹೊಸ ನಿಯಮ ಜಾರಿಗೆ ತರಲಾಗಿದೆ. ಇನ್ನು ಜಾರಿಗೆ ಬಂದಿರುವ ಹೊಸ ನಿಯಮದ ಪ್ರಕಾರ 2023 ರ ನಂತರ ಹುಟ್ಟಿದವರಿಗೆ ಪಾಸ್ಪೋರ್ಟ್ ಮಾಡಿಸಲು ಇನ್ನುಮುಂದೆ ಜನನ ಪ್ರಮಾಣಪತ್ರ ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆ. 1969 ರ ಅಡಿಯಲ್ಲಿ ಗೊತ್ತುಪಡಿಸಿದ ಯಾವುದೇ ಸಂಸ್ಥೆಯಿಂದ ಪಡೆದ ಜನನ ಪ್ರಮಾಣಪತ್ರ ನೀಡಿದರೆ ಮಾತ್ರ ಇನ್ನುಮುಂದೆ 2023 ರ ನಂತರ ಜನಿಸಿದವರು ಪಾಸ್ಪೋರ್ಟ್ ಮಾಡಿಸಿಕೊಳ್ಳಬಹುದು.
2023 ರ ನಂತರ ಹುಟ್ಟಿದವರಿಗೆ ಮಾತ್ರ ನಿಯಮ ಅನ್ವಯ
ಹೌದು, ಅಕ್ಟೋಬರ್ 1 2023 ರ ನಂತರ ಜನಿಸಿದವರಿಗೆ ಮಾತ್ರ ಈ ನಿಯಮ ಅನ್ವಯ ಆಗಲಿದೆ ಎಂದು ಕೇಂದ್ರ ತಿಳಿಸಿದೆ. ಈ ದಿನಾಂಕಕ್ಕಿಂತ ಮೊದಲು ಜನಿಸಿದವರು ಪುರಾವೆಯ ಬದಲಾಗಿ ಬೇರೆ ಪುರಾವೆ ಕೂಡ ನೀಡಬಹುದಾಗಿದೆ. ಹೌದು, ಈ ದಿನಾಂಕಕ್ಕಿಂತ ಮೊದಲು ಜನಿಸಿದವರು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, SSLC ಮಾರ್ಕ್ಸ್ ಕಾರ್ಡ್, ಶಾಲೆಯ ವರ್ಗಾವಣೆ ಪಾತ್ರ ಅಥವಾ ಇತರೆ ದಾಖಲೆ ನೀಡಬಹುದು ಎಂದು ಕೇಂದ್ರ ಹೇಳಿದೆ.
ಈ ನಿಯಮ ಯಾವಾಗಿನಿಂದ ಜಾರಿಗೆ ಬರಲಿದೆ
ಸದ್ಯ ಈ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು ಅಧಿಕೃತ ಪ್ರಕಟಣೆ ಇನ್ನೂ ಆಗಿಲ್ಲ. ಕೇಂದ್ರದಿಂದ ಅಧಿಕೃತ ಆದೇಶ ಬಂದನಂತರ ದೇಶಾದ್ಯಂತ ನಿಯಮ ಜಾರಿಗೆ ಬರಲಿದೆ. ವ್ಯಕ್ತಿಯ ಗೌಪ್ಯತೆ ಮತ್ತು ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ಕೇಂದ್ರ ಪಾಸ್ಪೋರ್ಟ್ ನಿಯಮದಲ್ಲಿ ಈ ಬದಲಾವಣೆ ಜಾರಿಗೆ ತಂದಿದೆ. ಅಕ್ಟೋಬರ್ 1 2023 ರ ನಂತರ ಜನಿಸಿದವರಿಗೆ ಈ ನಿಯಮ ಅನ್ವಯ ಆಗಲಿದೆ ಮತ್ತು ಅದಕ್ಕಿಂತ ಮೊದಲು ಜನಿಸಿದವರಿಗೆ ಈ ನಿಯಮ ಅನ್ವಯ ಆಗುವುದಿಲ್ಲ.
ಪಾಸ್ಪೋರ್ಟ್ ಪುಟದಲ್ಲಿ ಆಗಲಿದೆ ಬದಲಾವಣೆ
ಅದೇ ರೀತಿಯಲ್ಲಿ ಕೇಂದ್ರ ಸರ್ಕಾರ ಪಾಸ್ಪೋರ್ಟ್ ನಲ್ಲಿ ಕೂಡ ಹಲವು ಬದಲಾವಣೆ ಮಾಡಿದೆ. ಇನ್ನುಮುಂದೆ ಪಾಸ್ಪೋರ್ಟ್ ನಲ್ಲಿ ವ್ಯಕ್ತಿಯ ಪೋಷಕರ ಮಾಹಿತಿ ಇರುವುದಿಲ್ಲ. ಅದೇ ರೀತಿಯಲ್ಲಿ ಇನ್ನುಮುಂದೆ ಪಾಸ್ಪೋರ್ಟ್ ನ ಮುಖಪುಟದಲ್ಲಿ ವ್ಯಕ್ತಿಯ ವಿಳಾಸವನ್ನು ಕೂಡ ತಗೆದುಹಾಕುವ ನಿರ್ಧಾರ ಮಾಡಲಾಗಿದೆ.
ಪಾಸ್ಪೋರ್ಟ್ ಪುಸ್ತಕದಲ್ಲಿ ಬಾರ್ ಕೋಡ್ ಅಳವಡಿಸಲು ಆದೇಶವನ್ನು ಹೊರಡಿಸಲಾಗಿದೆ ಮತ್ತು ಈ ಬಾರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವ್ಯಕ್ತಿಯ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಳ್ಳಬಹುದು. ಒಬ್ಬ ವ್ಯಕ್ತಿಯ ಸುರಕ್ಷತೆ ಮತ್ತು ಆತನ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಾಸ್ಪೋರ್ಟ್ ನಿಯಮದಲ್ಲಿ ಈ ಬದಲಾವಣೆ ಜಾರಿಗೆ ತರಲು ಮುಂದಾಗಿದೆ. ಇನ್ನು ಕೇಂದ್ರದಿಂದ ಅಧಿಕೃತ ಘೋಷಣೆಯಾದ ನಂತರ ಈ ನಿಯಮ ಜಾರಿಗೆ ಬರಲಿದೆ.