New TDS Rules 2025: ಕಾಲಕ್ಕೆ ತಕ್ಕಂತೆ ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾಣೆ ಆಗುತ್ತಿರುವುದನ್ನು ನಾವು ಗಮನಿಸಬಹುದು. ದೇಶದ ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ (Niramala sitharaman) ಅವರು ಈಗಾಗಲೇ ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆ ಜಾರಿಗೆ ತಂದಿದ್ದಾರೆ. ಇದರ ನಡುವೆ ಈಗ ಏಪ್ರಿಲ್ 1 ನೇ ತಾರೀಕಿನಿಂದ ದೇಶದಲ್ಲಿ ಹೊಸ ತೆರಿಗೆ ನಿಯಮ ಜಾರಿಗೆ ಬರುತ್ತಿದೆ. TDS ನಿಯಮದಲ್ಲಿ ಏಪ್ರಿಲ್ 1 ನೇ ತಾರೀಕಿನಿಂದ ದೊಡ್ಡ ಬದಲಾವಣೆ ಮಾಡಲು ಈಗ ಕೇಂದ್ರ ಸಚಿವೆಯಾದ ನಿರ್ಧಾರ ಸೀತಾರಾಮನ್ ಅವರು ಮುಂದಾಗಿದ್ದಾರೆ.
ಏಪ್ರಿಲ್ 1 ನೇ ತಾರೀಕಿನಿಂದ TDS ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದ್ದು ಬದಲಾದ ಈ ನಿಯಮದ ಬಗ್ಗೆ ಎಲ್ಲರೂ ಕೂಡ ತಿಳಿದುಕೊಳ್ಳಬೇಕಾಗಿದೆ. ಹಾಗಾದರೆ ಏಪ್ರಿಲ್ 1 ನೇ ತಾರೀಕಿನಿಂದ ದೇಶದಲ್ಲಿ ಜಾರಿಗ ಬರುತ್ತಿರುವ ಹೊಸ TDS ನಿಯಮ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏಪ್ರಿಲ್ 1 ರಿಂದ TDS ನಿಯಮದಲ್ಲಿ ಬದಲಾವಣೆ
ನಿರ್ಮಲ ಸೀತಾರಾಮನ್ ಅವರು ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ತೆರಿಗೆ ನಿಯಮದಲ್ಲಿ ಬದಲಾವಣೆ ಮಾಡುವ ನಿರ್ಧಾರ ಮಾಡಿದ್ದರು. ಇನ್ನು ಬಜೆಟ್ ನಲ್ಲಿ ತಗೆದುಕೊಂಡ ನಿರ್ಧಾರ ಹಾಗೆ ಏಪ್ರಿಲ್ 1 ನೇ ತಾರೀಕಿನಿಂದ TDS ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ. ಏಪ್ರಿಲ್ 1 ನೇ ತಾರೀಕಿನಿಂದ ಜಾರಿಗೆ ಬರುತ್ತಿರುವ ಈ TDS ಹೊಸ ನಿಯಮ FD ಹೂಡಿಕೆ ಮಾಡುವವರು ಮತ್ತು ಮರುಕಳಿಸುವ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಬಹಳ ಸಹಾಯಕವಾಗಲಿದೆ.
ಏಪ್ರಿಲ್ 1 ರಿಂದ TDS ನಿಯಮದ ಏನು ಬದಲಾವಣೆ ಆಗಲಿದೆ
ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈಗ ಕೇಂದ್ರ ಸರ್ಕಾರ FD ಯೋಜನೆ ಮತ್ತು ಮರುಕಳಿಸುವ ಯೋಜನೆಯ ಮೇಲಿನ TDS ಕಡಿತದ ಮಿತಿಯಲ್ಲಿ ಎರಡು ಪಟ್ಟು ಏರಿಕೆ ಮಾಡಿದೆ. ಹೌದು, ಹಿರಿಯ ನಾಗರಿಕರ FD ಯೋಜನೆ ಮತ್ತು ಮರುಕಳಿಸುವ ಯೋಜನೆಯಲ್ಲಿ ಬರುವ ಬಡ್ಡಿ ಆದಾಯದ ಮೇಲೆ ಪ್ರತಿ ವರ್ಷದ TDS ಕಡಿತ ಮಾತಾಡಲಾಗುತ್ತದೆ ಮತ್ತು ಈ ಕಡಿತ ಒಂದು ಲಕ್ಷ ರೂಪಾಯಿಗಿಂತ ಅಧಿಕ ಬಡ್ಡಿ ಪಡೆದ ಮಾತ್ರ ಅನ್ವಯ ಆಗುತ್ತಿತ್ತು.
ಇನ್ನು ಹಿರಿಯ ನಾಗರಿಕರು ಈ ಯೋಜನೆಯ ಅಡಿಯಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಕಡಿಮೆ ಬಡ್ಡಿ ಪಡೆದ ಯಾವುದೇ TDS ಕಟ್ಟುವ ಅಗತ್ಯ ಇರುವುದಿಲ್ಲ. ಸದ್ಯ ಒಂದು ಲಕ್ಷ ರೂ ಮಿತಿ ಇದ್ದ TDS ಮಿತಿಯನ್ನು ಈಗ ಮತ್ತೆ 50 ಸಾವಿರಕ್ಕೆ, ಅಂದರೆ 1.5 ಲಕ್ಷಕ್ಕೆ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇನ್ನು ಹೊಸ TDS ನಿಯಮದ ಪ್ರಕಾರ ಇನ್ನುಮುಂದೆ ಹಿರಿಯ ನಾಗರಿಕರು 1.5 ಲಕ್ಷದ ತನಕ ಪಡೆಯುವ ಬಡ್ಡಿಗೆ ಯಾವುದೇ ಮಿತಿ ಇರುವುದಿಲ್ಲ.
FD ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಗುಡ್ ನ್ಯೂಸ್
TDS ನಿಯಮದಲ್ಲಿ ಆಗಿರುವ ಈ ಬದಲಾವಣೆ FD ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಸಾಕಷ್ಟು ಸಹಾಯಕವಾಗಿದೆ. ಇನ್ನುಮುಂದೆ ಹಿರಿಯ ನಾಗರಿಕರು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ಈ TDS ಲಾಭ ಪಡೆಯಬಹುದು. ಹಿರಿಯ ನಾಗರಿಕರ TDS ಮಿತಿ 50 ಸಾವಿರಕ್ಕೆ ಏರಿಕೆ ಮಾಡಿದರೆ ಸಾಮಾನ್ಯ ಜನರ TDS ಮಿತಿಯನ್ನು 40 ಸಾವಿರಕ್ಕೆ ಏರಿಕೆ ಮಾಡಲಾಗಿದೆ.