PM Surya Ghar Muft Bijli Yojana: ಕೇಂದ್ರ ಸರ್ಕಾರ ಸೂರ್ಯ ಘರ್ ಯೋಜನೆಯನ್ನು (PM Surya Ghar Scheme) ಜಾರಿಗೆ ತಂದಿರುವ ವಿಷಯ ನಿಮಗೆ ತಿಳಿದೇ ಹೌದು. ಹೌದು ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಈ ಯೋಜನೆಯ ಅಡಿಯಲ್ಲಿ ಮನೆಗೆ ಸೌರ್ ಫಲಕಗಳನ್ನು ಅಳವಡಿಸಬಹುದಾಗಿದೆ. ಮನೆಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರದಿಂದ ಈ ಸೂರ್ಯ ಘರ್ ಯೋಜನೆಯ ಅಡಿಯಲ್ಲಿ ಸಹಾಯಧನ ನೀಡಲಾಗುತ್ತದೆ. ನರೇಂದ್ರ ಮೋದಿಯವರ (Narendra Modi) ಈ ಸೂರ್ಯ ಘರ್ ಯೋಜನೆಯ ಅಡಿಯಲ್ಲಿ ಜನರ ಮನೆಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಬಹುದು.
ಇನ್ನು ಸಾಕಷ್ಟು ಜನರಿಗೆ ಕೇಂದ್ರ ಸರ್ಕಾರದ ಈ ಸೂರ್ಯ ಘರ್ ಯೋಜನೆಯ ಲಾಭ ಯಾರು ಯಾರು ಪಡೆದುಕೊಳ್ಳಬಹುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಹಾಗು ಬೇಕಾದ ದಾಖಲೆಗಳು ಏನು ಅನ್ನುವುದರ ಬಗ್ಗೆ ಅರಿವಿಲ್ಲ. ಹಾಗಾದರೆ ಕೇಂದ್ರದ ಈ ಸೂರ್ಯ ಘರ್ ಯೋಜನೆಯ ಅಡಿಯಲ್ಲಿ ಯಾರು ಯಾರು ಮನೆಯ ಮೇಲ್ಚಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಸೂರ್ಯ ಘರ್ ಯೋಜನೆ….?
ಕೇಂದ್ರ ಸರ್ಕಾರ ಪ್ರತಿ ಮನೆಗೆ ಸೌರ ವಿದ್ಯುತ್ ನೀಡಬೇಕು ಅನ್ನುವ ಉದ್ದೇಶದಿಂದ ಈ ಸೂರ್ಯ ಘರ್ ಯೋಜನೆಗೆ (PM Surya Ghar Muft Bijli) ಚಾಲನೆ ನೀಡಿತ್ತು ಮತ್ತು ಈ ಯೋಜನೆಯ ಅಡಿಯಲ್ಲಿ 2026 ರ ಅವಧಿಯಲ್ಲಿ ದೇಶದಲ್ಲಿ ಸುಮಾರು 1 ಕೋಟಿಗೂ ಅಧಿಕ ಮನೆಗಳಿಗೆ ಸೌರ ವಿದ್ಯುತ್ ಅಳವಡಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಯಾವುದೇ ಜಾತಿ ಬೇಧ ಇಲ್ಲದೆ ಎಲ್ಲಾ ವರ್ಗದ ಜನರು ಕೇಂದ್ರದ ಈ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವ ಕುಟುಂಬದ ಆದಾಯವು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗಿಂತ ಕಡಿಮೆ ಇರುತ್ತದೆಯೋ ಅಂತಹ ಕುಟುಂಬದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಆದಾಯ ಪ್ರಮಾಣಪತ್ರ
* ಅರ್ಜಿದಾರನ ಪಾಸ್ಪೋರ್ಟ್ ಗಾತ್ರದ ಒಂದು ಫೋಟೋ
* ಅರ್ಜಿದಾರನ ಬ್ಯಾಂಕ್ ಪಾಸ್ ಬುಕ್
* ಇತ್ತೀಚಿನ ಒಂದು ವಿದ್ಯುತ್ ಬಿಲ್
* ವಾಸಸ್ಥಳದ ಪ್ರಮಾಣಪತ್ರ
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ…?
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವವರು https://pmsuryaghar.gov.in/ ವೆಬ್ಸೈಟ್ ಗೆ ಭೇಟಿನೀಡುವುದರ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಹತ್ತಿರದ ಆನ್ಲೈನ್ ಕೇಂದ್ರ, ಸೇವಸಿಂಧು ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರದಲ್ಲಿ ಕೂಡ ಈ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು. ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ಮಾಡಿ ಕೇಂದ್ರ ಸರ್ಕಾರ ನೀವು ಈ ಯೋಜನೆಗೆ ಅರ್ಹತೆ ಪಡೆದುಕೊಂಡಿದ್ದೀರಾ ಅಥವಾ ಇಲ್ಲವಾ ಅನ್ನುವುದರ ಬಗ್ಗೆ ಮಾಹಿತಿ ನೀಡುತ್ತದೆ.