Airport Luggage Rules In India: ಇತ್ತೀಚಿನ ಕಾಲದಲ್ಲಿ ಜನರು ವಿಮಾನ ಪ್ರಯಾಣವನ್ನು (Flight Travel) ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂದು ಹೇಳಬಹುದು. ಹೌದು, ದೂರ ಪ್ರದೇಶಗಳಿಗೆ ಬಹಳ ಬೇಗ ಹೋಗಬಹುದು ಅನ್ನುವ ಕಾರಣಕ್ಕೆ ಜನರು ವಿಮಾನ ಪ್ರಯಾಣವನ್ನು ಹೆಚ್ಚು ಹೆಚ್ಚು ಇಷ್ಟಪಡುತ್ತಿದ್ದಾರೆ. ಇದರ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಈಗ ಕೇಂದ್ರ ಸುರಕ್ಷತೆಯ ಉದ್ದೇಶದಿಂದ ಕೆಲವು ಹೊಸ ನಿಯಮಗಳನ್ನು ಈಗ ಜಾರಿಗೆ ತಂದಿದೆ. ಹೌದು ಇನ್ನುಮುಂದೆ ವಿಮಾನದಲ್ಲಿ ಪ್ರಮಾಣ ಮಾಡುವವರು ಈ ಎಲ್ಲಾ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ.
ಕೇಂದ್ರ ಜಾರಿಗೆ ತಂದಿರುವ ನಿಯಮದ ಪ್ರಕಾರ ಇನ್ನುಮುಂದೆ ಪ್ರಮಾಣಗಳಲ್ಲಿ ಪ್ರಯಾಣ ಮಾಡುವವರು ವಿಮಾನ ನಿಲ್ದಾಣಕ್ಕೆ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ತಗೆದುಕೊಂಡು ಹೋಗುವಂತೆ ಇಲ್ಲ ಎಂದು ಆದೇಶವನ್ನು ಹೊರಡಿಸಲಾಗಿದೆ. ಹಾಗಾದರೆ ವಿಮಾನ ನಿಲ್ದಾಣಕ್ಕೆ ಹೋಗುವವರು ಯಾವ ಯಾವ ವಸ್ತುಗಳನ್ನು ವಿಮಾನ ನಿಲ್ದಾಣಕ್ಕೆ ತಗೆದುಕೊಂಡು ಹೋಗುವಂತಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇನ್ಮುಂದೆ ವಿಮಾನದಲ್ಲಿ ಸಾಗಿಸುವಂತಿಲ್ಲ ಇಂತಹ ಲಗೇಜ್
ಹೌದು, ಸಾಕಷ್ಟು ಜನರಿಗೆ ತಮಗೆ ತಿಳಿಯದೆ ವಿಮಾನಗಳಲ್ಲಿ ಸಾಗಿಸಲು ಅವಕಾಶ ಇಲ್ಲದ ವಸ್ತುಗಳನ್ನು ಸಾಗಿಸಲು ಮುಂದಾಗಿ ಸಿಕ್ಕಿಬೀಳುತ್ತಾರೆ. ನಿಯಮದ ಪ್ರಕಾರ ಕಾನೂನು ಬಾಹಿರವಾದ ವಸ್ತುಗಳನ್ನು ವಿಮಾನಗಳಲ್ಲಿ ಸಾಗಿಸುವುದು ಬಹಳ ದೊಡ್ಡ ಅಪರಾಧವಾಗಿದೆ. ವಿಶೇಷವಾಗಿ ದುಬೈ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಈ ನಿಯಮ ಅನ್ವಯ ಆಗಲಿದೆ ಎಂದು ಹೇಳಬಹುದು. ಹಾಗಾದರೆ ಯಾವ ಯಾವ ವಸ್ತುಗಳನ್ನು ವಿಮಾನಗಳಲ್ಲಿ ಸಾಗಿಸುವಂತೆ ಇಲ್ಲ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
* ಕೇಂದ್ರದ ನಿಮಗಳ ಪ್ರಕಾರ, ಮಾದಕ ವಸ್ತುಗಳಾದ ಕೊಕೇನ್ , ಹೆರಾಯಿನ್, ಅಫೀಮು, ಗಸಗಸೆ ಮತ್ತು ಯಾವುದೇ ಮಾದಕ ದ್ರವ್ಯಗಳನ್ನು ವಿಮಾನಗಳಲ್ಲಿ ತಗೆದುಕೊಂಡು ಹೋಗುವಂತೆ ಇಲ್ಲ ಮತ್ತು ಅವುಗಳನ್ನು ವಿಮಾನ ನಿಲ್ದಾಣಕ್ಕೂ ಕೂಡ ತಗೆದುಕೊಡು ಹೋಗುವಂತೆ. ಈ ಮಾದಕ ವಸ್ತುಗಳನ್ನು ವಿಮಾನಗಳಲ್ಲಿ ತಗೆದುಕೊಂಡು ಹೋದರೆ ಅವರಿಗೆ ಜೈಲು ಶಿಕ್ಷೆ ಖಂಡಿತ.
* ಇನ್ನು ನಿಯಮಗಳ ಪ್ರಕಾರ, ವೀಳ್ಯದ ಎಲೆ, ಗಿಡಮೂಲಿಕೆಯ ವಸ್ತುಗಳು, ಕೆಲವು ವಿಶೇಷ ಪ್ರಾಣಿಗಳ ಕೊಂಬುಗಳು, ಕೆಲವು ಬಗೆಯ ವಿನುಗಾರಿಕಾ ಬಲೆಗಳು ಮತ್ತು ಜೂಜಾಟ ಮಾಡುವ ಆಟದ ವಸ್ತುಗಳನ್ನು ಕೂಡ ವಿಮಾನಗಳಲ್ಲಿ ತಗೆದುಕೊಂಡು ಹೋಗುವುದಕ್ಕೆ ಅವಕಾಶ ಇರುವುದಿಲ್ಲ.
* ನೀವು ಮನೆಯಲ್ಲಿ ತಯಾರಿಸಿಕೊಂಡು ಬಂದ ಆಹಾರಗಳನ್ನು ಮತ್ತು ಕೆಲವು ಮಾಂಸಗಳನ್ನು ಕೂಡ ವಿಮಾನದಲ್ಲಿ ತಗೆದುಕೊಂಡು ಹೋಗುವುದನ್ನು ನಿಷೇದ ಮಾಡಲಾಗಿದೆ.
* ಕಲ್ಲಿನ ಶಿಲ್ಪಗಳು, ಕೆಲವು ಬಗೆಯ ದೊಡ್ಡ ಛಾಯಾಚಿತ್ರಗಳು, ವರ್ಣಚಿತ್ರಗಳು, ಮುದ್ರಿತ ಸಾಮಗ್ರಿಗಳು ಮತ್ತು ವಿದೇಶಗಳಿಂದ ಆಮದುಮಾಡಿಕೊಳ್ಳಲು ನಿರ್ಬಂಧಿತವಾದ ವಸ್ತುಗಳನ್ನು ವಿಮಾನಗಳಲ್ಲಿ ಸಾಗಾಟ ಮಾಡಲು ಪ್ರಯತ್ನ ಮಾಡಿದರೆ ನೀವು ಸಮಸ್ಯೆ ಎದುರಿಸಬೇಕಾಗುತ್ತದೆ.
* ಕೆಲವು ವೈದ್ಯಕೀಯ ಉಪಕರಣಗಳು, ದೊಡ್ಡ ಗಾತ್ರದ ಕೆಲವು ಪುಸ್ತಕಗಳು, ಕೆಲವು ಎಲೆಕ್ಟ್ರಿಕ್ ಉಪಕರಣಗಳು, ಸೌಂದರ್ಯವರ್ಧಕ ವಸ್ತುಗಳನ್ನು ವಿಮಾನಗಳಲ್ಲಿ ಸಾಗಿಸುವಂತೆ ಇಲ್ಲ.
ಈ ವಸ್ತುಗಳನ್ನು ಸಾಗಿಸಿದರೆ ಜೈಲು ಶಿಕ್ಷೆ ಖಚಿತ
ಕೇಂದ್ರದ ನಿಯಮಗಳ ಪ್ರಕಾರ, ಈ ವಸ್ತುಗಳನ್ನು ವಿಮಾನಗಳಲ್ಲಿ ಸಾಗಿಸಿದರೆ ಅವರು ದೊಡ್ಡ ಮೊತ್ತದ ದಂಡ ಪಾವತಿ ಮಾತ್ರವಲ್ಲದೆ ಆ ವಸ್ತುಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಇನ್ನು ಈ ರೀತಿಯ ಕಾನೂನುಬಾಹಿರ ವಸ್ತುಗಳನ್ನು ಸಾಗಿಸಿದರೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ.