Airport Customs: ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನ ಲೀಗಲ್ ಆಗಿ ತರಬಹುದು…? ಇಲ್ಲಿದೆ ಕಸ್ಟಮ್ಸ್ ನಿಯಮಗಳು

Airport Customes Rules: ಇತ್ತೀಚಿನ ದಿನಗಳಲ್ಲಿ ವಿಮಾನಗಳಲ್ಲಿ ಕಳ್ಳಸಾಗಾಣಿಕೆ ಹೆಚ್ಚಾಗಿರುವುದನ್ನು ನಾವು ನೀವೆಲ್ಲರೂ ಗಮನಿಸಿರಬಹು. ಹೌದು ದೇಶದಲ್ಲಿ ಕಳ್ಳಸಾಗಾಣಿಕೆ ಹೆಚ್ಚಾಗಿದ್ದು ಇದರಿಂದ ನಡುವೆ ಕಸ್ಟಮ್ಸ್ ಅಧಿಕಾರಿಗಳು ಬಿಗಿಯಾಗಿದ್ದಾರೆ. ಸದ್ಯ ಸಾಕಷ್ಟು ಜನರಿಗೆ ವಿಮಾನದಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಎಷ್ಟು ಚಿನ್ನ ಸಾಗಿಸಬಹುದು ಮತ್ತು ಭಾರತದ ಕಾನೂನಿನ ಪ್ರಕಾರ ಬೇರೆ ದೇಶದಿಂದ ಎಷ್ಟು ಚಿನ್ನವನ್ನು ಭಾರತಕ್ಕೆ ತರಬಹುದು ಅನ್ನುವುದರ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾದರೆ ದುಬೈ ಅಥವಾ ಬೇರೆ ದೇಶದಿಂದ ಎಷ್ಟು ಚಿನ್ನವನ್ನು ಭಾರತಕ್ಕೆ ತರಬಹುದು ಮತ್ತು ಭಾರತ ಕಾನೂನು ಇದರ ಬಗ್ಗೆ ಹೇಳುವುದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

WhatsApp Group Join Now
Telegram Group Join Now

ಯಾವುದೇ ಚಿನ್ನ ಸಾಗಿಸುವ ಮುನ್ನ ಕಸ್ಟಮ್ಸ್ ನಿಯಮ ತಿಳಿದುಕೊಳ್ಳಿ (Customs Rules)
ಹೌದು, ಬೇರೆ ದೇಶದಿಂದ ಚಿನ್ನವನ್ನು ನಮ್ಮ ದೇಶಕ್ಕೆ ತರುವ ಮುನ್ನ ನಾವು ಕಸ್ಟಮ್ಸ್ ನಿಯಮವನ್ನು ಸರಿಯಾಗಿ ತಿಳಿದುಕೊಂಡಿರಬೇಕು. ದುಬೈ ಅಥವಾ ಬೇರೆ ಯಾವುದೇ ದೇಶದಿಂದ ಚಿನ್ನವನ್ನು ಗಿಫ್ಯ್ ಕೊಡಲು ಅಥವಾ ವಯಕ್ತಿಕ ಬಳಕೆಗೆ ಚಿನ್ನ ಆಮದು ಮಾಡಿಕೊಳ್ಳುವ ಮುನ್ನ ಕಸ್ಟಮ್ಸ್ ನಿಯಮ ಸರಿಯಾಗಿ ತಿಳಿದುಕೊಂಡಿರಬೇಕು. ಕಾನೂನು ಬಾಹಿರವಾಗಿ ನಿಮ್ಮ ಚಿನ್ನ ಆಮದು ಮಾಡಿಕೊಂಡರೆ ನೀವು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಕೊಳ್ಳಬೇಕಾಗುತ್ತದೆ.

ಹಾಗಾದರೆ ದುಬಾರಿ ನಿಂದ ಎಷ್ಟು ಚಿನ್ನ ತರುವುದು ಲೀಗಲ್
ಹೌದು, CBIC ಮಾರ್ಗಸೂಚಿ ಪ್ರಕಾರ ದುಬೈ ನಿಂದ ಚಿನ್ನ ಆಮದು ಮಾಡಿಕೊಳ್ಳಬಹುದು, ಆದರೆ ಕಸ್ಟಮ್ಸ್ ನಿಯಮ ಪಾಲನೆ ಮಾಡಬೇಕು. ಕಸ್ಟಮ್ಸ್ ನಿಯಮದ ಪ್ರಕಾರ ದುಬೈ ನಿಂದ 1 ಕೆಜಿ ಚಿನ್ನ ಆಮದು ಮಾಡಿಕೊಳ್ಳಬಹುದು ಮತ್ತು ಅದೂ ಲೀಗಲ್ ಕೂಡ ಆಗಿದೆ. ಇನ್ನು ದುಬೈ ನಿಂದ ಒಂದು ಕೆಜಿ ಚಿನ್ನ ತರುವ ಸಮಯದಲ್ಲಿ ಕಸ್ಟಮ್ಸ್ ಸುಂಕವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು ಮತ್ತು ಪ್ರಯಾಣಿಕರು ಚಿನ್ನದ ಶುದ್ಧತೆ, ಬೆಲೆ ಮತ್ತು ಖರೀದಿ ಮಾಡಿದ ದಿನಾಂಕದ ಬಿಲ್ ಕಡ್ಡಾಯವಾಗಿ ಕಸ್ಟಮ್ಸ್ ಅಭಿಕಾರಿಗಳಿಗೆ ತೋರಿಸಬೇಕು.

ವಿಮಾನ ನಿಲ್ದಾಣದಲ್ಲಿ ಮಾಡಲಾಗುತ್ತೆ ಕಸ್ಟಮ್ಸ್ ಪರಿಶೀಲನೆ
ಭಾರತದ ನಿಯಮದ ಪ್ರಕಾರ, ನೀವು ದುಬೈ ನಿಂದ ಚಿನ್ನ ಅಥವಾ ಯಾವುದೇ ವಸ್ತು ತಂದರೆ ಅದನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ನಿಯಮಗಳಿಗೆ ಅನುಸಾರವಾಗಿ ಪರಿಶೀಲನೆ ಮಾಡಲಾಗುತ್ತದೆ ಮತ್ತು ನೀವು ಅಗತ್ಯಕ್ಕಿಂತ ಹೆಚ್ಚಿನ ಚಿನ್ನವನ್ನು ತಗೆದುಕೊಂಡು ಬಂದರೆ ನೀವು ದಂಡ ಪಾವತಿ ಮಾಡಬೇಕು ಮತ್ತು ಕೆಲವು ಸಮಸ್ಯೆ ಕೂಡ ಎದುರಿಸಬೇಕಾಗುತ್ತದೆ.

ಪುರುಷರು ಮತ್ತು ಮಹಿಳೆಯರು ಇಷ್ಟು ಚಿನ್ನ ಮಾತ್ರ ತರಬಹುದು
ಹೌದು, ದುಬೈ ನಿಂದ ಭಾರತಕ್ಕೆ ಬರುವ ಪುರುಷರು 20 ಗ್ರಾಂ ಚಿನ್ನವನ್ನು ತರಬಹುದು ಮತ್ತು ಗರಿಷ್ಟ ಮೌಲ್ಯ 50 ಸಾವಿರ ಆಗಿದ್ದು ಇದು ತೆರಿಗೆ ರಹಿತ ಕೂಡ ಆಗಿದೆ. ಈ ಮಿತಿಯನ್ನು ಮೀರಿದರೆ ಪುರುಷರು ಕಸ್ಟಮ್ಸ್ ಪಾವತಿ ಕಡಾಯವಾಗಿ ಮಾಡಬೇಕು. ಇಲ್ಲವಾದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಇನ್ನು ನಿಯಮಗಳ ಪ್ರಕಾರ, ಮಹಿಳೆಯರು ಯಾವುದೇ ಸುಂಕ ಪಾವತಿ ಮಾಡದೆ 40 ಗ್ರಾಂ ತನಕ ಚಿನ್ನವನ್ನು ದುಬೈ ದೇಶದಿಂದ ತರಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಚಿನ್ನ ಅಥವಾ ನಗದು ಅಂದರೆ ಅವರು ಕಸ್ಟಮ್ಸ್ ಸುಂಕ ಕಡ್ಡಾಯವಾಗಿ ಪಾವತಿ ಮಾಡಬೇಕು. ಇನ್ನು ಕಸ್ಟಮ್ಸ್ ಸುಂಕವು ದುಬೈ ದೇಶದಲ್ಲಿ ಒಬ್ಬ ವ್ಯಕ್ತಿ ಎಷ್ಟು ವರ್ಷ ವಾಸವಿದ್ದಾನೆ ಅನ್ನುವುದರ ಮೇಲೆ ಕೂಡ ನಿರ್ಧಾರ ಆಗಿರುತ್ತದೆ. ದೇಶದಲ್ಲಿ ಕಳ್ಳಸಾಗಾಣಿಕೆ ಹೆಚ್ಚಾದ ಕಾರಣ ಕಸ್ಟಮ್ಸ್ ನಿಯಮವನ್ನು ಇನ್ನಷ್ಟು ಕಠಿಣ ಮಾಡಲಾಗಿದೆ.

Leave a Comment