Pm Bima Sakhi: ಮಹಿಳೆಯರಿಗೆ ಪ್ರತಿ ತಿಂಗಳು 7000 ರೂ ಸಿಗುವ ಹೊಸ ಯೋಜನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

Pm Bima Sakhi Yojana: ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗಾಗಿ ಈಗಾಗಲೇ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ರೂ ಜಮಾ ಮಾಡುತ್ತಿದೆ. ಇನ್ನು ಕೇಂದ್ರ ಸರ್ಕಾರ ಕೂಡ ದೇಶದ ಮಹಿಳೆಯರಿಗಾಗಿ ಈಗಾಗಲೇ ಹಲವು ಯೋಜನೆಯನ್ನು ಜಾರಿಗೆ ತಂದಿದೆ. ಸದ್ಯ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಬಗ್ಗೆ ಇನ್ನೂ ಕೂಡ ಸಾಕಷ್ಟು ಮಹಿಳೆಯರಿಗೆ ತಿಳಿದಿಲ್ಲ.

WhatsApp Group Join Now
Telegram Group Join Now

ಸದ್ಯ ನರೇಂದ್ರ ಮೋದಿ ದೇಶದ ಮಹಿಳೆಯರಿಗಾಗಿ ಇನೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆಯ ಮೂಲಕ ದೇಶದ ಮಹಿಳೆಯರು ಪ್ರತಿ ತಿಗಳು 7000 ರೂ ಪಡೆದುಕೊಳ್ಳಬಹುದು. ಹಾಗಾದರೆ ನರೇಂದ್ರ ಮೋದಿ ಸರ್ಕಾರ ದೇಶದ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಹೊಸ ಯೋಜನೆ ಯಾವುದು ಮತ್ತು ಈ ಯೋಜನೆಯ ಮೂಲಕ ಯಾವ ಯಾವ ಮಹಿಳೆಯರು ಪ್ರತಿ ತಿಂಗಳು 7000 ರೂ ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರಿಗಾಗಿ ಜಾರಿಗೆ ಬಂದು ಬಿಮಾ ಸಖಿ ಯೋಜನೆ (Pm Bima sakhi Yojana)
ಹೌದು, ನರೇಂದ್ರ ಮೋದಿ ದೇಶದ ಮಹಿಳೆಯರು ಸ್ವಾವಲಂಭಿಗಳಾಗಬೇಕು ಮತ್ತು ಅವರ ಕಾಲ ಮೇಲೆ ಅವರು ನಿಂತುಕೊಳ್ಳಬೇಕು ಅನ್ನುವ ಉದ್ದೇಶದಿಂದ ದೇಶದಲ್ಲಿ ಮಹಿಳೆಯರಿಗಾಗಿ ಬಿಮಾ ಸಖಿ ಯೋಜನೆಯನ್ನು ಜಾರಿಗೆ ತಂದಿದೆ. ಇನ್ನು ಕೇಂದ್ರ ಈ ಯೋಜನೆಯ ಅಡಿಯಲ್ಲಿ ದೇಶದ ಮಹಿಳೆಯರು ಪ್ರತಿ ತಿಂಗಳು 7000 ರೂಪಾಯಿ ಹಣ ಪಡೆದುಕೊಳ್ಳಲಿದ್ದಾರೆ. ಹಾಗಾದರೆ ಈ ಬಿಮಾ ಸಖಿ ಯೋಜನೆ ಅಂದರೆ ಏನು ಮತ್ತು ಯಾರು ಯಾರಿಗೆ ಈ ಯೋಜನೆಯ ಲಾಭ ಸಿಗಲಿದೆ ತಿಳಿಯೋಣ ಬನ್ನಿ.

ಏನಿದು ಬಿಮಾ ಸಖಿ ಯೋಜನೆ ಮತ್ತು ಏನಿದರ ಲಾಭ
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಮತ್ತು ಅವರಿಗೆ ಉದ್ಯೋಗಾವಕಾಶವನ್ನು ಒದಗಿಸಬೇಕು ಅನ್ನುವ ಉದ್ದೇಶದಿಂದ ನರೇಂದ್ರ ಮೋದಿ ಸರ್ಕಾರ ಈ ಬಿಮಾ ಸಖಿ ಯೋಜನೆ ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದಿದೆ. ಇನ್ನು ಈ ಯೋಜನೆಯಲ್ಲಿ ಮಹಿಳೆಯರು ವಿಮ ಪಾಲಿಸಿಯ ಮೂಲಕ ಮತ್ತು ಮಾಸಿಕವಾಗಿ ಭತ್ಯೆ ಕೂಡ ಪಡೆದುಕೊಳ್ಳಲಿದ್ದಾರೆ. ಇನ್ನು ಬಿಮಾ ಸಖಿ ಯೋಜನೆ ಯೋಜನೆಯ ಮೂಲಕ ಮೊದಲ ವರ್ಷ ಪ್ರತಿ ತಿಂಗಳಿಗೆ 7,000 ರೂ ಭತ್ಯೆ, ಎರಡನೆಯ ವರ್ಷ ಪ್ರತಿ ತಿಂಗಳಿಗೆ 6,000 ರೂ ಮತ್ತು ಮೂರನೆಯ ವರ್ಷ ಪ್ರತಿ ತಿಂಗಳಿಗೆ 5,000 ರೂ ಭತ್ಯೆಯನ್ನು ಮಹಿಳೆಯರು ಪಡೆದುಕೊಳ್ಳುತ್ತಾರೆ.

ಬಿಮಾ ಸಖಿ ಯೋಜನೆಯ ಅರ್ಹತೆ ಮತ್ತು ಅರ್ಜಿ ಸಲ್ಲಿಸಲು ಬೇಕಾದ ದಾಖಲೆ

* ಯಾವುದೇ ಪ್ರಾರ್ಥಮಿಕ ಶಾಲೆ ಅಥವಾ ಮಂಡಳಯಲ್ಲಿ ಉತ್ತೀರ್ಣರಾಗಿರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

* 18 ವರ್ಷದಿಂದ 70 ವರ್ಷದ ಒಳಗಿನ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

* ಬಿಮಾ ಸಖಿ ಯೋಜನೆ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.

* ಆಧಾರ ಕಾರ್ಡ್, ಪಾನ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಇತ್ತೀಚಿನ ಭಾವಚಿತ್ರವನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ಕೊಡಬೇಕು.

ಈ ಯೋಜನೆಗೆ ಈಗಾಗಲೇ ಸುಮಾರು 50 ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಆನ್ಲೈನ್ ಪ್ರಕ್ರಿಯೆ ಇನ್ನೂ ಕೂಡ ಚಾಲ್ತಿಯಲ್ಲಿ ಇರುತ್ತದೆ. ಮಹಿಳೆಯರು ಅಗತ್ಯ ದಾಖಲೆ ನೀಡುವುದರ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. LIC ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಈ ಯೋಜನೆಯನ್ನು ಮಹಿಳೆಯರಿಗಾಗಿ ಪರಿಚಯಿಸಿದೆ. ಆರ್ಥಿಕವಾಗಿ ಸಬಲರಲ್ಲದ ಮಹಿಳೆಯರಿಗೆ ಈ ಯೋಜನೆ ಮೊದಲ ಆಧ್ಯತೆ ನೀಡುತ್ತದೆ.

Leave a Comment